ಮೋದಿ ಸರ್ಕಾರದಿಂದ ಬೆದರಿಸುವ ತಂತ್ರ : ಎಸ್ಸೆಸ್

0
3

ದಾವಣಗೆರೆ:

    ಸರ್ವಾಧಿಕಾರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವ ನಾಶವಾಗುತ್ತಿದ್ದು, ವಿಪಕ್ಷದವರ ಅಭಿವೃದ್ಧಿ ಸಹಿಸದೆ ಐಟಿ ದಾಳಿ ಮೂಲಕ ಬೆದರಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ತಿಳಿಸಿದರು.

     ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಾದ ಹನುಮಂತಾಪುರ, ಹಳೇಬೆಳವನೂರು, ಹೊಸ ಬೆಳವನೂರು, ತುರ್ಚಘಟ್ಟ, ಚಂದ್ರೇನಹಳ್ಳಿ, ಬುಳ್ಳಾಪುರ, ಹೊಸನಾಯಕನಹಳ್ಳಿ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಹಾಗೂ ರೋಡ್ ಷೋ ನಡೆಸಿ ಅವರು ಮಾತನಾಡಿದರು.

      ನರೇಂದ್ರ ಮೋದಿ ಆಡಳಿತದ ವಿರುದ್ಧ ದೇಶದ ಜನತೆ ಪ್ರಶ್ನಿಸಿದರೆ, ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಮೋದಿ ವಿರುದ್ಧ ದೇಶದ ಜನತೆ ಇರಲಿ. ಸಂಸದರು, ಸಚಿವರು ಮಾತನಾಡದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸರ್ವಾಧಿಕಾರಿ ಮೋದಿ ವಿರುದ್ಧ ಈಗಾಗಲೇ ಉತ್ತರ ಭಾರತದಲ್ಲಿ ಜನತೆ ಮೋದಿಯನ್ನು ತಿರಸ್ಕರಿಸುವ ಭಯದಿಂದ ದಕ್ಷಿಣ ಭಾರತದಲ್ಲಿ ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದ್ದು, ದಕ್ಷಿಣ ಭಾರತದ ಜನತೆಯೂ ಸಹ ಮೋದಿ ಸರ್ವಾಧಿಕಾರಿ ಆಡಳಿತವನ್ನು ತಿರಸ್ಕರಿಸಲಿದ್ದಾರೆಂದು ಹೇಳಿದರು.

       ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಮಾತನಾಡಿ, ದಾವಣಗೆರೆ ಸಂಸದರು 3 ಬಾರಿ ಆಯ್ಕೆ ಆಗಿದ್ದರೂ ಸಹ ಇಂದು ತಮ್ಮ ಅಬಿವೃದ್ಧಿ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಮೋದಿ ಆಡಳಿತದಿಂದ ಈ ದೇಶದ ಜನಕ್ಕೆ ಏನು ಉಪಯೋಗವಾಗಿದೆ ಎಂದು ಪ್ರಶ್ನಿಸಿದರು.

       ಈ ಚುನಾವಣಾ ಪ್ರಚಾರ ಹಾಗೂ ರೋಡ್ ಷೋನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಹೆಚ್.ಓಬಳಪ್ಪ, ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ಎಪಿಎಂಸಿ ಅಧ್ಯಕ್ಷ ಬಿಸಲೇರಿ ಈರಣ್ಣ, ಮಾಜಿ ಉಪಾಧ್ಯಕ್ಷ ಹದಡಿ ಹಾಲಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಬಸವರಾಜ್, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಕುಕ್ಕವಾಡ ಮಲ್ಲೇಶಪ್ಪ, ಮುದಹದಡಿ ದಿಳ್ಳೆಪ್ಪ, ನಾಗೇಶ್ವರರಾವ್, ಶಿರಮನಗೊಂಡನಹಳ್ಳಿ ರುದ್ರೇಶ್, ತುರ್ಚಘಟ್ಟದ ರಿಯಾಜ್, ಹನುಮಂತಪ್ಪ, ಎಸ್.ವಿ.ಚಂದ್ರಶೇಖರ್, ಮಾಲತೇಶ್, ತೆಂಗಿನಮರದ ಬಸವರಾಜಪ್ಪ, ಚಂದ್ರಶೇಖರಪ್ಪ, ವಿಜಯಕುಮಾರ್, ಸಿದ್ದೇಶ್, ಮಹಾದೇವಪ್ಪ, ಜೆಡಿಎಸ್ ಹನುಮಂತಪ್ಪ, ಹೊಸನಾಯಕನಹಳ್ಳಿ ಗಿರೀಶ್, ರಾಜಣ್ಣ, ಪರಮೇಶ್ವರಪ್ಪ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here