ಅಧಿಕಾರಿಗಳ ನಿರಾಸಕ್ತಿಗೆ ಸಂಸದ ಚಂದ್ರಪ್ಪ ಬೇಸರ

0
12

ಚಿತ್ರದುರ್ಗ

         ಡಿಜಿಟಲ್‍ಇಂಡಿಯಾಕಾರ್ಯಕ್ರಮದಡಿಜಿಲ್ಲೆಯಎಲ್ಲಾತಾಲ್ಲೂಕಿನ 173 ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್ ಇಂಟರ್‍ನೆಟ್ ಸೌಲಭ್ಯವನ್ನು ಕಲ್ಪಿಸಿದಾಗ್ಯೂ ಇದನ್ನು ಬಳಕೆಗೆ ಮುಂದಾಗದ ಅಧಿಕಾರಿಗಳ ಬಗ್ಗೆ ಸಂಸದರಾದ ಬಿ.ಎನ್.ಚಂದ್ರಪ್ಪನವರುತೀವ್ರಅಸಮಧಾನ ವ್ಯಕ್ತಪಡಿಸಿದರು.

          ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಕೇಂದ್ರಪುರಸ್ಕøತ ಯೋಜನೆಗಳ ಕುರಿತಜಿಲ್ಲಾಅಭಿವೃದ್ದಿ ಮತ್ತುಉಸ್ತುವಾರಿ ಸಮಿತಿ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರಗಳು ಜನರಿಗೆಉಪಯೋಗವಾಗಲೆಂದು ಹವಲಾರುಜನಪರ ಯೋಜನೆಗಳನ್ನು ಜಾರಿಗೆತರುತ್ತದೆ.ಆದರೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಯೋಜನೆಗಳು ಕಾರ್ಯಗತವಾಗುವಲ್ಲಿ ವಿಳಂಬವಾಗುತ್ತಿದೆಎಂದುತೀವ್ರ ಬೇಸರ ವ್ಯಕ್ತಪಡಿಸಿದರು.

          ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ವೇಳೆ ಬಿ.ಎಸ್.ಎನ್.ಎಲ್. ಕುರಿತಂತೆ ಪರಿಶೀಲಿಸಿದ ಸಂಸದರುಗ್ರಾಮೀಣಡಿಜಿಟಲ್‍ಇಂಡಿಯಾಕಾರ್ಯಕ್ರಮದಡಿ ಸರ್ಕಾರದ ಯೋಜನೆಗಳ ಸೌಲಭ್ಯಗಳು ಗ್ರಾಮೀಣ ಜನರಿಗೂ ತಲುಪಲೆಂದು ಡಿಜಿಟಲ್‍ ಇಂಡಿಯಾ ಪ್ರಧಾನಮಂತ್ರಿಗಳ ಯೋಜನೆಯನ್ನುಜಾರಿಗೆತರಲಾಗಿದೆ.ಓ.ಎಪ್.ಸಿ ಕೇಬಲ್ ಮೂಲಕ ಹೈಸ್ಪೀಡ್ ಇಂಟರ್‍ನೆಟ್ ಸಂಪರ್ಕ ಕಲ್ಪಿಸಿದಾಗ್ಯೂ ಸಹ ಪಂಚಾಯಿತಿಗಳಿಂದ ದೂರವಾಣಿ ಸಂಪರ್ಕದ ಬಿಲ್ ಪಾವತಿಸದಕಾರಣ ಸಂಪರ್ಕಕಡಿತವಾಗಿದೆ.ಆದರೆ ಪಂಚಾಯಿತಿಯಲ್ಲಿ ಹಣವಿದ್ದರೂ ಸಕಾಲದಲ್ಲಿ ಬಿಲ್ ಪಾವತಿಸಿ ಸೇವೆಯನ್ನು ಪಡೆಯದ ಪಂಚಾಯಿತಿಅಭಿವೃದ್ದಿ ಅಧಿಕಾರಿಗಳ ಕರ್ತವ್ಯದ ಪರಿಶೀಲನೆ ನಡೆಸುವುದುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿಯವರಜವಾಬ್ದಾರಿಯಾಗಿದೆಎಂದರು.

          ಬಿ.ಎಸ್.ಎನ್.ಎಲ್. ಅಧಿಕಾರಿಯವರು ಪಂಚಾಯಿತಿಗಳಿಂದ ಬಿಲ್ ಪಾವತಿಸದಕಾರಣ ಸಂಪರ್ಕಕಡಿತವಾಗಿದ್ದು ಬಿಲ್ ಪಾವತಿಸಿ ಸಂಪರ್ಕ ಪಡೆದುಉಪಯೋಗಿಸಬಹುದಾಗಿದೆ.ತಾಲ್ಲೂಕು ಪಂಚಾಯಿತಿಗಳಲ್ಲಿಯು ಸಹ ಲಕ್ಷಗಟ್ಟಲೆದೂರವಾಣಿ ಬಿಲ್ ಬಾಕಿ ಉಳಿಸಿದ್ದು ಬಿಲ್ ಪಾವತಿಸಲು ಸಭೆಯಲ್ಲಿ ತಿಳಿಸಿದರು.

        ಸಂಸದರು ಮಾತನಾಡಿ ಮೊಳಕಾಲ್ಮುರು, ಹೊಳಲ್ಕೆರೆ ಹಾಗೂ ಹೊಸದುರ್ಗತಾಲ್ಲೂಕಿನಅರಣ್ಯದಂಚಿನಗಡಿ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ಟವರ್ ಹಾಕದಕಾರಣ ನೆಟ್‍ವರ್ಕ್ ಸಮಸ್ಯೆಇದೆ.ಆದ್ದರಿಂದಅತೀ ಶೀಘ್ರವಾಗಿ ಟೆಲಿಕಾಂ ಸಲಹಾ ಸಮಿತಿಯ ಸಭೆಯನ್ನುಕರೆಯಲು ಬಿ.ಎಸ್.ಎನ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು.

       ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶ ಇದೆ.ಆದರೆಜನರಿಗೆ ಈ ಬಗ್ಗೆ ಮಾಹಿತಿಇಲ್ಲದಕಾರಣಇದರ ಬಳಕೆಗೆ ಮುಂದಾಗುತ್ತಿಲ್ಲ. ಆದ್ದರಿಂದಕೂಲಿಯ ವಿವರ, ತೆಗೆದುಕೊಳ್ಳಬಹುದಾದ ಕಾಮಗಾರಿಗಳ ವಿವರವನ್ನುಜನರಿಗೆತಲುಪುವಂತೆ ಪ್ರಚಾರಪಡಿಸಲು ಸೂಚನೆ ನೀಡಿದರು.

        ಬರಗಾಲವಿದ್ದು ಜನರಿಗೆ ಉದ್ಯೋಗವನ್ನು ನೀಡಿ ಭರವಸೆ ಮೂಡಿಸಬೇಕಾಗಿದೆ.ಸ್ಥಳೀಯ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು.ರೈತರ ಜಮೀನುಗಳಲ್ಲಿ ವೈಯಕ್ತಿಕವಾಗಿ ಕಾಮಗಾರಿಗಳು ಸೇರಿದಂತೆ ಕೆರೆಗಳಲ್ಲಿನ ಹೂಳು ತೆಗೆಯುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೆರೆಗಳು ಜಿಲ್ಲಾ ಪಂಚಾಯತ್‍ಅಥವಾ ಸಣ್ಣ ನೀರಾವರಿ ವಿಭಾಗದ ವ್ಯಾಪ್ತಿಯಲ್ಲಿರಲಿ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಸೇರಿದಂತೆ ಉಪಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಹೂಳೆತ್ತುವ ಕಾಮಗಾರಿತೆಗೆದುಕೊಂಡುಜನರಿಗೆಉದ್ಯೋಗ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆಎಂದು ಸೂಚಿಸಿದರು.

        ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಅನುಷ್ಟಾನ ಮಾಡಲಾಗುತ್ತಿದೆ.ಆದರೆಜನರಿಗೆ ಸರಿಯಾದ ಮಾಹಿತಿ ನೀಡಿಅರ್ಹರಿದ್ದವರಿಗೆ ಸೌಲಭ್ಯಗಳನ್ನು ತಲುಪಿಸಬೇಕು.ತೋಟಗಾರಿಕೆಇಲಾಖೆಯಿಂದಕೇಂದ್ರ ಸರ್ಕಾರದರಾಷ್ಟ್ರೀಯತೋಟಗಾರಿಕೆ ಮಿಷನ್‍ಯೋಜನೆಯಡಿಯಾಂತ್ರೀಕರಣ ಸೇರಿದಂತೆತೋಟಗಾರಿಕೆಕ್ಷೇತ್ರ ವಿಸ್ತರಣೆಗೆ ಸಹಾಯಧನ ನೀಡುವಯೋಜನೆಗಳಿವೆ. ಆದರೆ ಈ ಬಗ್ಗೆ ಪ್ರತಿಗ್ರಾಮ ಪಂಚಾಯಿತಿಗಳ ಮುಂಭಾಗದಲ್ಲಿರೈತರಿಗೆತಿಳಿಯುವಂತೆ ಮಾಹಿತಿಯನ್ನು ಅಳವಡಿಸಬೇಕು ಮತ್ತು ಪತ್ರಿಕೆಗಳ ಮೂಲಕ ಜಾಹಿರಾತು ಪ್ರಕಟಿಸಲು ಸೂಚನೆ ನೀಡಿದರು.

        ದೀನದಯಾಳ್ ಉಪಾಧ್ಯಾಯ ವಿದ್ಯುದ್ದೀಕರಣಯೋಜನೆಯಡಿ ವಿದ್ಯುತ್ ಸಂಪರ್ಕವಿಲ್ಲದಎಲ್ಲಾ ಬಿ.ಪಿ.ಎಲ್.ಕುಟುಂಬಗಳಿಗೆ ವಿದ್ಯುತ್ ಸಂಪರ್ಕಕಲ್ಪಿಸಲುಇದಕ್ಕೆ ಬೇಕಾದಮೂಲಭೂತ ಸೌಕರ್ಯಕಲ್ಪಿಸುವಯೋಜನೆಇದ್ದುಇದನ್ನು ನಿಗದಿಯಂತೆ 2019 ರಜನವರಿ 31 ರೊಳಗಾಗಿ ಮುಕ್ತಾಯವಾಗಲಿದೆ.ಆದರೆಇದುಇನ್ನೂ ಪರಿಣಾಮಕಾರಿಯಾಗಿಅನುಷ್ಟಾನವಾಗಬೇಕಾಗಿದೆಎಂದು ಸಂಸದರು ಸೂಚಿಸಿದರು.ಈ ವೇಳೆ ಹಿರಿಯೂರು ಶಾಸಕರುತಾಲ್ಲೂಕಿನಎಲ್ಲಾ ಬಡವರಿಗೂಇದುತಲುಪಿಲ್ಲ, ಅಂಕಿ ಅಂಶದನ್ವಯ 15 ಸಾವಿರಕ್ಕೂ ಹೆಚ್ಚಿದ್ದು ಕೇವಲ 4 ಸಾವಿರ ಫಲಾನುಭವಿಗಳಿಗೆ ಮಾತ್ರ ಸಂಪರ್ಕ ಕಲ್ಪಿಸಿದ್ದಾರೆ ಎಂದರು.ಇದಕ್ಕೆ ಅಧಿಕಾರಿಗಳು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದಾಗ ಶಾಸಕರಾದಟಿ.ರಘುಮೂರ್ತಿಯವರು ಭಾಗ್ಯಜ್ಯೋತಿಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಬಡವರು ಕೆಲವು ವೇಳೆ ಸಕಾಲದಲ್ಲಿ ಬಿಲ್ ಪಾವತಿಸದೆಇರಬಹುದು, ಆದರೆ ಸಂಪರ್ಕಕಡಿತ ಮಾಡಬಾರದು, ವಿವೇಚನೆಯಿಂದ ಕೆಲಸ ಮಾಡಲು ಸಲಹೆ ನೀಡಿದರು.

        ಸಭೆಯಲ್ಲಿಜಿಲ್ಲಾ ಪಂಚಾಯತ್‍ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್, ಶಾಸಕರಾದಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯೆಜಯಮ್ಮ ಬಾಲರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿರವೀಂದ್ರ, ಅಪರಜಿಲ್ಲಾಧಿಕಾರಿ ಸಂಗಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here