ರೌಡಿಗಳಾಗಲು ಹತ್ಯೆ ಮಾಡಿದವರು ಅಂದರ್

0
15

ದಾವಣಗೆರೆ:

       ದಿಢೀರ್ ರೌಡಿಗಳಾಗಬೇಕೆಂಬ ಕಾರಣಕ್ಕೆ ಹಣಕಾಸು ಹಾಗೂ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಪಟ್ಟ ವ್ಯಕ್ತಿ ಸೇರಿ ಮೂವರನ್ನು ಹರಿಹರ ನಗರ ಪೊಲೀಸರು ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದರು.

      ತಮ್ಮ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ನಿವಾಸಿ, ತರಗಾರ ಜೆ.ಎ. ಪ್ರಸನ್ನ ಅಲಿಯಾಸ್ ಡಾಲಿ, ಹರಿಹರ ಇಂದಿರಾ ನಗರದ ವಾಸಿ, ಆಟೋ ಚಾಲಕ ಪಿ.ಎಸ್. ಪ್ರಶಾಂತ ಅಲಿಯಾಸ್ ಪಚ್ಚಿ ಹಾಗೂ ಇನ್ನೋರ್ವ ಕಾನೂನು ಸಂಘರ್ಷಕ್ಕೊಳಗಾದ ವ್ಯಕ್ತಿ ಬಂಧಿತರಾಗಿದ್ದಾರೆ ಎಂದರು. 

      ಈ ಮೂವರು ಆರೋಪಿಗಳು ಸೇರಿ ಇತ್ತೀಚೆಗೆ ಹರಿಹರದ ಮಹಾತ್ಮ ಗಾಂಧಿ ಕೊಳಚೆ ಪ್ರದೇಶ ನಿವಾಸಿ ಕಾಂತರಾಜ್ ಎಂಬ ಯುವಕನನ್ನು ಹರಿಹರದ ವಿದ್ಯಾನಗರದ ಬಳಿ ಇರುವ ಸರ್ಕಾರಿ ನೌಕರರ ಜಾಗಕ್ಕೆ ಕರೆದುಕೊಂಡು ಹೋಗಿ ಹರಿತವಾದ ಆಯುಧದಿಂದ ಹೊಟ್ಟೆಗೆ ಇರಿದು, ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದರು. ಆರೋಪಿಗಳು ಹಳೇ ವೈಷಮ್ಯ ಹಾಗೂ ಹಣಕಾಸಿನ ಕಾರಣಕ್ಕಿಂತಲೂ ತಾವು ದಿಢೀರ್ ರೌಡಿಗಳಾಗಬೇಕು. ತಮ್ಮನ್ನು ನೋಡಿದರೆ ಜನರು ಹೆದರಬೇಕೆಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ವಿಚಾರಣೆಯ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆಂದು ಮಾಹಿತಿ ನೀಡಿದರು.

       ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಕೆ. ಗಂಗಲ್ ಮಾರ್ಗದರ್ಶನದಲ್ಲಿ ಹಿಂದಿನ ಹರಿಹರ ಸಿಪಿಐ ಲಕ್ಷ್ಮಣ್ ನಾಯ್ಕ್ ಪ್ರಕರಣದ ಬಗ್ಗೆ ದೀರ್ಘ ತನಿಖೆ ಮಾಡಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ನಂತರ ಈಗಿನ ಹರಿಹರ ವೃತ್ತದ ಸಿಪಿಐ ಐ.ಎಸ್.ಗುರುನಾಥ, ಹರಿಹರ ನಗರ ಠಾಣೆಯ ಪಿಎಸ್‍ಐ ಶ್ರೀಧರ್, ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‍ಐ ಹೆಚ್.ಹೆಮ್. ಸಿದ್ದೇಗೌಡ ಹಾಗೂ ಸಿಬ್ಬಂದಿಗಳಾದ ಮಜೀದ್, ರಾಘವೇಂದ್ರ, ನಿಂಗರಾಜ, ಪ್ರಕಾಶ, ಮಂಜುನಾಥ, ಆಚಿಜನೇಯ, ರಮೇಶ್ ನಾಯ್ಕ, ನಾಗರಾಜ, ಮಹಮ್ಮದ್ ಇಲಿಯಾಜ್, ಮಹೇಶ್ ಕುಮಾರ್, ದ್ವಾರಕೀಶ್, ಸೈಯಾದ್ ಗಫಾರ್, ಶಾಂತರಾಜ, ರಾಮಚಂದ್ರ ಬಿ. ಜಾದವ್ ಆರೋಪಿಗಳನ್ನು ಪತ್ತೆ ಹಚ್ಚಿ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದು, ಇವರೆಲ್ಲರಿಗೂ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here