ಬೆಂಗಳೂರು
ತಡರಾತ್ರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಕೇರಳ ಮೂಲದ ಯುವಕನ ಮೊಬೈಲ್ ಕಸಿಯಲು ಪ್ರತಿರೋಧ ತೋರಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣವು ಕಮರ್ಷಿಯಲ್ ಸ್ಟ್ರೀಟ್ ಪೆÇಲೀಸರು ಬಂಧಿಸಿರುವ ಮೂವರು ಐನಾತಿ ಮೊಬೈಲ್ ಕಳ್ಳರಿಂದ ಪತ್ತೆಯಾಗಿದೆ.
ಭಾರತಿ ನಗರದ ಮೊಹ್ಮದ್ ಜಬೀರ್ ಅಲಿಯಾಸ್ ಕಾಲು (19), ಮೊಹ್ಮದ್ ಅಬ್ಬಾಸ್ (19), ಡಿಜೆ ಹಳ್ಳಿಯ ಇಕ್ಬಾಲ್ ಅಹ್ಮದ್ ಷರೀಫ್ ಅಲಿಯಾಸ್ ಇಕ್ಬಾಲ್ (20) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಕಳವು ಮಾಡಿದ ಮೊಬೈಲ್ಗಳನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಮಾರಾಟ ಮಾಡುತ್ತಿದ್ದಾಗ, ಅನುಮಾನದ ಮೇಲೆ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವನ್ನು ಬಾಯ್ಬಿಟ್ಟಿದ್ದಾರೆ.
ಬಂಧಿತರಿಂದ 1 ಲಕ್ಷ 55 ಸಾವಿರ ಮೌಲ್ಯದ 17 ಮೊಬೈಲ್ಗಳು, ಹೋಂಡಾ ಡಿಯೋ ಸ್ಕೂಟರ್, ಮಚ್ಚು-ಚಾಕು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಉಪ್ಪಾರಪೇಟೆಯಲ್ಲಿ ನಡೆದಿದ್ದ 1 ಕೊಲೆ, ಕಮರ್ಷಿಯಲ್ ಸ್ಟ್ರೀಟ್ನ 3 ಮೊಬೈಲ್ ಕಳವು, ಪುಲಕೇಶಿ ನಗರದ 2 ಸೇರಿ 7 ಪ್ರಕರಣಗಳನ್ನು ಪತ್ತೆ ಹಚ್ಚಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ನಗರದ ವಿವಿಧೆಡೆ ಸುತ್ತಾಡುತ್ತ ಒಂಟಿಯಾಗಿ ಓಡಾಡುವವರನ್ನು ಚಾಕು ತೋರಿಸಿ ಬೆದರಿಸಿ, ಮೊಬೈಲ್, ಚಿನ್ನಾಭರಣ ದೋಚಿ ಮೋಜಿನ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ