ಆಲದ ಮರಕ್ಕಾಗಿ ಕೊಲೆ

0
9

ಬೆಂಗಳೂರು

           ಕೇವಲ 1 ಸಾವಿರ ಬೆಲೆಯ ಆಲದ ಮರಕ್ಕೆ ಶುರುವಾದ ಜಗಳವೊಂದು ಸ್ವಂತ ತಮ್ಮನನ್ನೇ ಅಣ್ಣಂದಿರು ಸೇರಿ ಕೊಲೆ ಮಾಡಿರುವ ಅಘಾತಕಾರಿ ಘಟನೆ ನೆಲಮಂಗಲದ ಮಹಿಮಾಪುರದಲ್ಲಿ ನಡೆದಿದೆ.

         ಕೊಲೆಗೀಡಾದ ವ್ಯಕ್ತಿಯನ್ನು ನವೀನ್(23) ಎಂದು ಗುರುತಿಸಲಾಗಿದೆ. ಆಸ್ತಿ ಮೇಲಿನ ವಿವಾದದಿಂದಾಗಿ, ನವೀನ್ ನನ್ನು ಕೊಲೆ ಮಾಡಲಾಗಿದೆ ನೆಲಮಂಗಲದಿಂದ ಹಾಸನಕ್ಕೆ ಅಪಹರಿಸಿಕೊಂಡು ಬಂದು ಕೊಲೆಗೈಯಲಾಗಿದೆ. ಇನ್ನು ಆಸ್ತಿ ಹಂಚಿಕೆಯಲ್ಲಿ ಆಲದ ಮರಕ್ಕಾಗಿ ಎರಡು ಕುಟುಂಬದವರು ತಗಾದೆ ತೆಗೆದಿದ್ದರು ಎಂದು ತಿಳಿದು ಬಂದಿದೆ.

          ನವೀನ್ ಮತ್ತು ಸಹೋದರರು ನೆಲಮಂಗಲದ ಮಹಿಮಾಪುರದ ನಿವಾಸಿಗಳಾಗಿದ್ದು, ಈತನ ದೊಡ್ಡಮ್ಮನ ಮಕ್ಕಳಾದ ವೇಣುಗೋಪಾಲ, ಸತೀಶ್ ಮತ್ತು ನರಸಿಂಹ ಸೇರಿದಂತೆ ಐವರು ಸೇರಿ ಆಲೂರು ತಾಲ್ಲೂಕಿನ ಹಣಸವಲ್ಲಿ ಬ್ರಿಡ್ಜ್ ಬಳಿ ಕರೆತಂದು ನವೀನ್‍ನನ್ನು ಹತ್ಯೆ ಮಾಡಲಾಗಿದೆ.

             ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ದಾಖಲಾಗಿದ್ದು, ಹತ್ಯೆಯ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಮೃತ ಶವಕ್ಕಾಗಿ ವಾರದಿಂದ ಹಾಸನದಲ್ಲಿ ಶೋಧ ನಡೆಸುತ್ತಿದ್ದರು. ಸಕಲೇಶಪುರದಲ್ಲಿ ಕೊಲೆ ಮಾಡಿ ಎಸೆದಿರುವುದಾಗಿ ಹೇಳಿಕೆ ನೀಡಿದ್ದ ಆರೋಪಿಗಳು ಎರಡು ದಿನಗಳಿಂದ ಸಕಲೇಶಪುರ ಸುತ್ತಮುತ್ತ ಶೋಧ ನಡೆಸುತ್ತಿದ್ದರು. ಶುಕ್ರವಾರ ತಡರಾತ್ರಿ ಆಲೂರಿನಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here