ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಆಗಮಿಸಿದ ಮೈತ್ರಿ ಅಭ್ಯರ್ಥಿ

0
2

ಹರಿಹರ:

     ಜಿಲ್ಲೆಯಲ್ಲಿರುವ ಸರ್ವ ಸಮಾಜಗಳ ಬೆಂಬಲ ಪಡೆದು ವಿಜಯ ಶಾಲಿಗಳಾಗಿ ಬನ್ನಿ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ನಿರಂಜನಾ ನಂದಪುರಿ ಶ್ರೀಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ಮಂಜಪ್ಪನವರಿಗೆ ಆಶೀರ್ವದಿಸಿದರು.

       ತಾಲ್ಲೂಕಿನ ಬೆಳ್ಳೂಡಿ ಸಮೀಪದ ಶ್ರೀ ಕನಕ ಗುರುಪೀಠದ ಶಾಖಾ ಮಠದಲ್ಲಿ ಶ್ರೀಗಳ 43 ನೇ ಜನ್ಮದಿನದ ನಿಮಿತ್ತ ಶುಭಾಶಯ ತಿಳಿಸಿ, ಆಶೀರ್ವಾದ ಪಡೆಯಲು ಆಗಮಿಸಿದ್ದ ಮಂಜಪ್ಪ ಮತ್ತು ಸಂಗಡಿಗರಿಗೆ ಕ್ಷೇತ್ರದ ಸರ್ವ ಸಮಾಜಗಳ ಸಹಕಾರ ಪಡೆದು ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾಗಿ ಬನ್ನಿ ಎಂದು ಶ್ರೀಗಳು ಹರಸಿದರು.

       ಇದೇ ವೇಳೆ ಅಭ್ಯರ್ಥಿ ನಂಜಪ್ಪನವರಿಗೆ ಶ್ರೀಗಳು ಕೆಲ ಸೂಚನೆ ಹಾಗೂ ಮಾರ್ಗದರ್ಶನ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ. ದಶಕಗಳ ನಂತರ ಚೆನ್ನಯ್ಯ ಒಡೆಯರ್ ಅವರು ಆಯ್ಕೆಯಾದ ಮೇಲೆ ಹಾಲುಮತ ಸಮಾಜದ ವ್ಯಕ್ತಿಯೊಬ್ಬರು ಲೋಕ ಸಭೆಗೆ ಆಯ್ಕೆ ಹೊಂದಲು ನಿಂತಿರುವುದು ಸಂತೋಷದ ಸಂಗತಿಯಾಗಿದ್ದು,ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ.

        ಸಮಾಜದ ಹಿರಿಯರು ಮಾಜಿ ಮಂತ್ರಿಗಳಾದ ಡಾ.ನಾಗಪ್ಪನವರ ಮನೆಗೆ ತೆರಳಿ ಚರ್ಚೆ ನಡೆಸಿ ಅವರನ್ನೂ ಸಹ ಚುನಾವಣೆಯಲ್ಲಿ ಸಂಪೂರ್ಣ ವಾಗಿ ಭಾಗಿಯಾಗುವಂತೆ ಅವರ ಮನವೊಲಿಸಿ ಪ್ರಚಾರಕ್ಕೆ ಕರೆ ತರುವಂತೆಯೂ ಸಹ ತಿಳಿಸಿರು ವುದಾಗಿ ತಿಳಿದು ಬಂದಿದೆ.
ಜಿಲ್ಲೆಯ ಹಿರಿಯರು ಉಸ್ತುವಾರಿಗಳು ಆದ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ಚುನಾ ವಣೆಯಲ್ಲಿ ಹೇಗೆ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಅವರ ಮಾರ್ಗದರ್ಶನ ಮತ್ತು ಅವರೊಂದಿಗೆ ಪ್ರಚಾ ರದಲ್ಲಿ ಭಾಗಿಯಾಗುವಂತೆ ವಿನಂತಿಸಿ ಕೊಳ್ಳಲು ತಿಳಿಸಿದ್ದಾರೆ.

       ಇನ್ನು ಮೈತ್ರಿ ಪಕ್ಷ ಜೆಡಿಎಸ್ ಅವರೊಂದಿಗೆ ಯಾವುದೇ ಸ್ಥಳೀಯ ವೈಮನಸ್ಸುಗಳು ಸಣ್ಣ ಪುಟ್ಟ ವುಗಳಿಗೆ ಮುನಿಸು ಮಾಡಿಕೊಳ್ಳದೆ ಏನೇ ಭಿನ್ನಾಭಿ ಪ್ರಾಯ ಗಳಿದ್ದರೂ ಸಹ ಸರಿಪಡಿಸಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮತ್ತು ಇತರೆ ಮುಖಂಡರು ಗಳೊಂದಿಗೆ ಪ್ರಚಾರ ನಡೆಸಿ ವಿಜಯ ಶಾಲೆಗಳಾಗಿ ಎಂದು ಆಶೀರ್ವದಿಸಿದ್ದಾರೆ.ಈ ವೇಳೆ ಅಭ್ಯರ್ಥಿ ಮಂಜಪ್ಪನ ಅವರೊಂದಿಗೆ ಶಾಸಕ ಎಸ್.ರಾಮಪ್ಪ ,ಬಿ. ರೇವಣ ಸಿದ್ದಪ್ಪ,ಎಂ.ನಾಗೇಂದ್ರಪ್ಪ,ಸಿ.ಎನ್.ಹುಲುಗೇಶ್,ಬೀರಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ ಇನ್ನು ಅನೇಕ ಮುಖಂಡರುಗಳು ಸಮಾಜದ ಹಿರಿಯರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here