ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಮೃತ್ಯಕೂಪವಾದ ನಾಡಜಾಲಿ

ಶಿರಾ:

      ಶಿರಾ ಭಾಗವು ಅತ್ಯಂತ ಬರ ಪೀಡಿತ ಪ್ರದೇಶವಾದ್ದರಿಂದ ಈ ಭಾಗದಲ್ಲಿ ನಾಡಜಾಲಿ ಗಿಡಗಳು ಬೆಳೆಯುವುದು ಸಹಜವೂ ಹೌದು. ಆದರೆ ಹೆದ್ದಾರಿಯ ಇಕ್ಕೆಡೆಗಳಲ್ಲಿ ಬೆಳೆದ ನಾಡಜಾಲಿ ಗಿಡಗಳನ್ನು ಹೆದ್ದಾರಿ ಪ್ರಾಧಿಕಾರವಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ತೆರವುಗೊಳಿಸದ ಪರಿಣಾಮ ನೂರಾರು ಮಂದಿ ವಾಹನ ಸವಾರರು ಸಾವನ್ನಪ್ಪುತ್ತಿರುವ ಪ್ರಕರಣಗಳು ಶಿರಾ-ಮಧುಗಿರಿ ರಸ್ತೆಯಲ್ಲಿ ನಡೆಯುತ್ತಿವೆ.

         ಶಿರಾದಿಂದ ಮಧುಗಿರಿಗೆ ಬಸ್, ಕಾರು, ದ್ವಿಚಕ್ರ ವಾಹನಗಳು ತೆರಳುವಾಗ ಶಿರಾ ಕೆರೆಯ ಹಿಂಭಾಗದಿಂದ ಗುಳಿಗೇನಹಳ್ಳಿಯವರೆಗೂ ಹೆದ್ದಾರಿಯ ಎರಡೂ ಕಡೆಗಳಲ್ಲಿ ಮುಂಭಾಗದಿಂದ ಬರುವ ವಾಹನಗಳು ಕಾಣದಷ್ಟು ನಾಡಜಾಲಿ ಗಿಡಗಳು ಬೆಳೆದಿವೆ.

          ಮುಂಭಾಗದಲ್ಲಿ ಬರುವ ವಾಹನಗಳಿಗೆ ಜಾಲಿಗಿಡದ ಮರೆಯಿಂದಾಗಿ ಅನೇಕ ಅಪಘಾತಗಳು ದಿನನಿತ್ಯ ನಡೆಯುತ್ತಲೇ ಇದ್ದು ಅನೇಕ ಸಾವುಗಳು ಕೂಡಾ ಆಗಿವೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರೂ ಯಾವುದೇ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಮಾಗೋಡು, ಯರಗುಂಟೆ, ಗುಳಿಗೇನಹಳ್ಳಿ, ನ್ಯಾಯಗೆರೆ ಗ್ರಾಮಸ್ಥರು ಆರೋಪಿಸಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜಾಲಿ ಗಿಡಗಳನ್ನು ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap