ವಿದ್ಯಾರ್ಥಿಗಳು, ಸಾರ್ವಜನಿಕರಿಗಾಗಿ ನೂತನ ಸಾರಿಗೆ ಬಸ್‍ಗಳಿಗೆ ಚಾಲನೆ

0
13

ಕೊರಟಗೆರೆ

       ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದೇಶದ ಮೇರೆಗೆ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ಗ್ರಾಮೀಣ ನಗರಸಾರಿಗೆ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಸಂಸದ ಮುದ್ದಹನುಮೆಗೌಡ ತಿಳಿಸಿದರು.

      ಅವರು ಬುಧವಾರ ಕೊರಟಗೆರೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ನೂತನವಾಗಿ ಆರಂಭಗೊಂಡ ಗ್ರಾಮೀಣ ಸಾರಿಗೆ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೊರಟಗೆರೆ ವಿಧಾನ ಸಭಾಕ್ಷೇತ್ರದಲ್ಲಿ ಕೆಲ ವರ್ಷಗಳಿಂದ ಗ್ರಾಮೀಣ ಸಾರಿಗೆ ವಿಚಾರದಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಬೇಡಿಕೆ ಇತ್ತು. ಇದನ್ನು ಮನಗಂಡು ಅವರ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.

      ಗ್ರಾಮೀಣ ಸಾರಿಗೆ ಸೌಲಭ್ಯವನ್ನು ಹಳ್ಳಿಗಳಿಗೆ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ್‍ರವರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಜೊತೆ ಚರ್ಚಿಸಿ ಕೊರಟಗೆರೆ ಕ್ಷೇತ್ರ ವ್ಯಾಪ್ತಿಯಾದ್ಯಂತ ನೂತನವಾಗಿ 24 ಬಸ್ ಮಾರ್ಗಗಳು 46 ಟ್ರಿಪ್‍ನ 8 ಗ್ರಾಮೀಣ ಸಾರಿಗೆ ಬಸ್‍ಗಳನ್ನು ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

      ಪ್ರಾಸ್ತಾವಿಕವಾಗಿ ಪ್ರಾರಂಭಗೊಂಡ ನೂತನ ಬಸ್ ಮಾರ್ಗಗಳು ಮಧುಗಿರಿ-ಕೊರಟಗೆರೆ (ಕೊಡಿಗೇನಹಳ್ಳಿ , ಕೋಟಿಲಿಂಗೇಶ್ವರ ಮಾರ್ಗ), ಕೊರಟಗೆರೆ-ಕೋಡಗದಾಲ, ಕೊರಟಗೆರೆ-ತೋವಿನಕೆರೆ (ಕುರಂಕೋಟೆ ಮಾರ್ಗ), ಕೊರಟಗೆರೆ-ತೋವಿನಕೆರೆ (ಸಿದ್ದರಬೆಟ್ಟ ಮಾರ್ಗ), ಕೊರಟಗೆರೆ-ಕೊಡಗದಾಲ-ಬ್ಯಾಲ್ಯ, ಕೊರಟಗೆರೆ-ಕೋಳಾಲ, ಕೊರಟಗೆರೆ-ಬೈರೇನಹಳ್ಳಿ, ಕೊರಟಗೆರೆ-ಮಾವತ್ತೂರು, ಕೊರಟಗೆರೆ-ಮಧುಗಿರಿ (ಬ್ಯಾಲ್ಯ,ಪುರವಾರ ಮಾರ್ಗ), ತುಮಕೂರು-ಕೊಡಿಗೇನಹಳ್ಳಿ (ಸಂಕಾಪುರ, ಕೊಂಡವಾಡಿಕ್ರಾಸ್‍ಮಾರ್ಗ), ಕೊರಟಗೆರೆ-ಕೊಡಿಗೇನಹಳ್ಳಿ (ಹೊಳವನಹಳ್ಳಿ,ತೊಗರಿಘಟ್ಟ, ಅಕ್ಕಿರಾಂಪುರ, ಕೊಂಡವಾಡಿ ಮಾರ್ಗ), ತುಮಕೂರು-ಸಿದ್ದರಬೆಟ್ಟ-ತುಮಕೂರು (ಚಿಕ್ಕತೊಟ್ಲುಕೆರೆ,ಮಣುವಿನಕುರಿಕೆ) ಮಾರ್ಗವಾಗಿ ಸದ್ಯ ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದೆಂದರು.

       ಕೆ.ಎಸ್.ಆರ್.ಟಿ.ಸಿ. ಜಿಲ್ಲಾ ವಿಭಾಗಾಧಿಕಾರಿ ಗಜೇಂದ್ರಕುಮಾರ್ ಮಾತನಾಡಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ರವ ಆದೇಶದ ಮೇರೆಗೆ ಈಗಾಗಲೆ 46 ಟ್ರಿಪ್‍ಗಳ ಸಾರಿಗೆ ವ್ಯವಸ್ಥೆಯನ್ನು ಕೊರಟಗೆರೆ ವಿಧಾನ ಸಭಾಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಮಾಡಲಾಗಿದೆ. ್ದ ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು

      ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣ ಪುಟ್ಟಗ್ರಾಮೀಣ ಪ್ರದೇಶಗಳಿಗೂ ಸಾರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಈ ಎಲ್ಲಾ ಸಾರಿಗೆ ಸಂಪರ್ಕ ವ್ಯವಸ್ಥೆಗಳು ಡಾ.ಜಿ.ಪರಮೇಶ್ವರ್‍ರವರ ಜನಪರ ಸೇವೆ ಹಾಗೂ ಅಭಿವೃದ್ದಿ ದೃಷ್ಟಿಕೋನದಿಂದ ಆಗಿವೆ. ಮುಂದಿನ ದಿನಗಳಲ್ಲಿ ಕೊರಟಗೆರೆ ಕ್ಷೇತ್ರದ ಅಭಿವೃಧ್ದಿ ಮತ್ತಷ್ಟು ತಾನಾಗಿಯೇ ನಡೆದುಕೊಂಡು ಹೊಗುತ್ತದೆ ಎಂದ ಅವರು, ಬೆಂಗಳೂರಿನಲ್ಲಿ ಟಿಪ್ಪುಜಯಂತಿ ಸೇರಿದಂತೆ ಹಲವು ಮಹತ್ವದ ಸಭೆಗಳಲ್ಲಿ ಉಪಮುಖ್ಯಮಂತ್ರಿಗಳು ಭಾಗವಹಿಸಬೇಕ್ಕಿದ್ದ ಕಾರಣ ಅವರ ಅನುಪಸ್ಥಿತಿಯಲ್ಲಿ ಈ ಜನಪರಕಾರ್ಯಕ್ರಮವನ್ನು ಅವರ ಆದೇಶದ ಮೇರೆಗೆ ತಾನು ಚಾಲನೆ ನೀಡಿರುವುದಾಗಿ ತಿಳಿಸಿದರು.

        ತುಮಕೂರಿನ ಮಾಜಿ ನಗರ ಸಭಾ ಸದಸ್ಯ ಹಾಗೂ ಕೊರಟಗೆರೆ ಕ್ಷೇತ್ರದ ದಲಿತ ಮುಖಂಡ ವಾಲೆ ಚಂದ್ರು ಮಾತನಾಡಿ, ಇದೊಂದು ಸುವರ್ಣ ದಿನವಾಗಿದ್ದು, ಗ್ರಾಮೀಣ ಸಾರಿಗೆ ಪ್ರಾರಂಭದಿಂದ ಹಳ್ಳಿಗಾಡಿನ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳ್ಳಲ್ಲಿ ಇನಷ್ಟು ಅಭಿವೃದ್ದಿ ಕೆಲಸಗಳು ಆಗಲಿದ್ದು, ಉಪ ಮುಖ್ಯಮಂತ್ರಿಗಳು ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾರಣ ಕಾರ್ಯಒತ್ತಡದಲ್ಲಿ ಜನರನ್ನು ಸ್ಪಂದಿಸುತ್ತಿಲ್ಲ ಎಂಬುವ ಮನೋಭಾವವನ್ನು ಜನರು ತೊಡೆದು ಹಾಕಬೇಕು. ಸಾರ್ವಜನಿಕರ ಕೆಲಸಗಳಿಗೆ ನಾವು ಬದ್ದವಾಗಿದ್ದು, ಯಾವುದೇ ಕ್ಷಣದಲ್ಲಾದರೂ ನಮ್ಮನ್ನು ಸಂಪರ್ಕಿಸಿದರೆ ನಿಮ್ಮಗಳ ಸೇವೆ ಮಾಡಲು ಸದಾ ಸಿದ್ದರಿದ್ದೇವೆ. ಕೇವಲ ಆರು ತಿಂಗಳ ಅವಧಿಯಲ್ಲಿ ನೂರಾರು ಕೋಟಿ ರೂ. ಅನುದಾನ ತಾಲ್ಲೂಕಿಗೆ ಹರಿದು ಬಂದಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ರೂ. ಗಳ ಅನುದಾನವನ್ನು ಕ್ಷೇತ್ರದ ಅಭಿವೃದಿಗೆ ಬರಲಿದೆ. ಕೊರಟಗೆರೆ ವಿಧಾನ ಸಭಾಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕೆಲಸವನ್ನು ಮಾನ್ಯಉಪಮುಖ್ಯ ಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ಕೈಗೊಳ್ಳಲಿದ್ದಾರೆ ಎಂದರು.

        ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಫಕ್ರುದೀನ್, ಬಸವರಾಜು, ಮಂಜುನಾಥ್, ಸಂತೋಷ್‍ಕುಮಾರ್, ನಾಗರಾಜು, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಚಂದ್ರ ಶೇಖರಗೌಡ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಮಾಜಿ ಅಧ್ಯಕ್ಷ ಮೈಲಾರಪ್ಪ, ತಾ.ಪಂ.ಉಪಾಧ್ಯಕ್ಷೆ ನರಸಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಕವಿತಾ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಮಾಜಿ ನಗರಸಭಾ ಉಪಾಧ್ಯಕ್ಷ ವಾಲೆಚಂದ್ರಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ಜಾಲಿಲಗಿರಿಕೃಷ್ಣಮೂರ್ತಿ, ಪ.ಪಂ.ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನರಸಿಂಹಪ್ಪ, ನಾಗರಾಜು, ವಿಎಸ್‍ಎಸ್‍ಎನ್‍ಅಧ್ಯಕ್ಷ ಹೆಚ್.ಎಂ.ರುದ್ರಪ್ರಸಾದ್, ಮಾಜಿ ಎಪಿಎಂಸಿ ಸದಸ್ಯರುಗಳಾದ ಜಯರಾಂ, ಗೊಂದಿಹಳ್ಳಿ ರಂಗರಾಜು, ಚಿಕ್ಕರಂಗಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here