ನೂತನ ನೇಕಾರ ಒಕ್ಕೂಟಗಳ ಹಿತರಕ್ಷಣಾ ಸಮಿತಿ ರಚನೆ

0
11

ಹರಿಹರ:

       ನೇಕಾರರಲ್ಲಿ ಹಲವು ಪಂಗಡಗಳಿದ್ದು, ಅವುಗಳನ್ನು ಒಗ್ಗೂಡಿಸಿ ನೂತನ ತಾಲೂಕು ನೇಕಾರ ಒಕ್ಕೂಟಗಳ ಹಿತರಕ್ಷಣಾ ಸಮಿತಿರಚನೆಯಾಗಿದ್ದು, ನೊಂದಣಿ ಪ್ರಕ್ರೀಯೆ ಸಂಪೂರ್ಣವಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂಡಿ ತಿಳಿಸಿದರು.

        ನಗರದ ರಚನಾ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರುತಾಲೂಕಿನಲ್ಲಿ ನೇಕಾರಿಕೆ ಮಾಡಿಕೊಂಡುಜೀವನ ನಡೆಸುತ್ತಿರುವ ನೇಕಾರರು ಸಣ್ಣ ಸಂಖ್ಯೆಯಲ್ಲಿಇದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದೇವೆ ಎಂದರು.

        ಪದ್ಮಶಾಲಿ, ಪಟ್ಟಸಾಲಿ, ಕುರುಹೀನಶೆಟ್ಟಿ ಸೇರಿದಂತೆ ಹಲವು ಪಂಗಡಗಳು ತಮ್ಮತಮ್ಮ ಮನೆದೇವರು ಹಾಗೂ ದೇವರುಗಳ ಆರಾಧಕರಾಗಿ ಪ್ರತ್ಯೇಕವಾಗಿ ವಿಭಜನೆಆಗಿರುವ ಪ್ರಯುಕ್ತಏಕತೆಗೆತೊಂದರೆಯಾಗಿದ್ದು ಸಮಾಜದಅನೇಕರುಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ತಿಳಿಸಿದರು.

         ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ, ಸಹಕಾರ ಸಮಬಾಳ್ವೆಗೆ ಒತ್ತು ನೀಡಿ, ನೇಕಾರರಎಲ್ಲಾ ಪಂಗಡಗಳು ಒಗ್ಗೂಡಿ, ಆರ್ಥಿಕವಾಗಿ ಹಿಂದುಳಿದವರನ್ನು, ಶಾಲಾ ಕಟ್ಟಡ, ಬಡವರಿಗೆ ನಿವೇಶನ, ಸೂರು, ಬಡವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಸಮಿತಿಒತ್ತು ನೀಡುವುದುಎಂದರು.

         ಈಗಾಗಲೇ ನೇಕಾರರಿಗೆ ಸರ್ಕಾರ ಸುಮಾರು 10ವರ್ಷಗಳ ಹಿಂದೆ ನಿವೇಶನ ನೀಡಿದೆ.ಆದರೆಅಲ್ಲಿ ಮೂಲ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದರು.

        ಮುಂದಿನ ದಿನಗಳಲ್ಲಿ ಸರ್ಕಾರದಿಂದ ನೇಕಾರ ಸಮಾಜದಎಲ್ಲ ಪಂಗಡಗಳಿಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಹೋರಾಟ ನಡೆಸಲಾಗುವುದು.ಸಮಾಜದಎಲ್ಲ ಪಂಗಡಗಳ ಜನತೆ ಸಮಿತಿಜತೆಕೈಜೋಡಿಸುವ ಮೂಲಕ ಒಗ್ಗಟ್ಟಿಗೆ ಬಲ ತುಂಬಬೇಕು ಎಂದು ಮನವಿ ಮಾಡಿದರು.

       ಸಮಿತಿಯಗೌರವಅಧ್ಯಕ್ಷ ಹನುಮಂತಪ್ಪಗುತ್ತಲ್, ಅಧ್ಯಕ್ಷ ನಾಗರಾಜ್ ಭಂಡಾರಿ, ಕಾರ್ಯಾಧ್ಯಕ್ಷಗೀತಾಕದರಿಮಂಡಲಗಿ, ಉಪಾಧ್ಯಕ್ಷ ಪಿ.ಎನ್. ಗೋಪಿ, ಪ್ರಧಾನ ಕಾಯದರ್ಶಿ ಎಚ್.ಶಣ್ಮುಖ, ಖಜಾಂಚಿಆಣ್ಣಪ್ಪಶ್ಯಾವಿ, ನಿಂಗರಾಜ.ಗಣೇಶಅಂಬ್ರದ, ಚಂದ್ರಪ್ಪ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here