ನಿಂಚನ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

0
6

ದಾವಣಗೆರೆ;

    ನಗರದ ನಿಂಚನ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್‍ರವರ 128ನೇ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕವರ್ಷದ ಸಾಲಿನ ಶಾಲಾತರಗತಿಗಳ ಮಕ್ಕಳಿಗೆ ಮತ್ತು ಪೋಷಕರುಗಳಿಗೆ ಮತ್ತು ಆಡಳಿತವರ್ಗದವರಿಗೆ ಔತಣ ಕೂಟ ಸಮಾರಂಭನಡೆಯಿತು.

      ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಸ್.ನಿಂಗಪ್ಪ, ಅಂಬೇಡ್ಕರ್‍ರವರು ಶೋಷಿತರ ಬದುಕನ್ನು ಕಟ್ಟಿಕೊಡಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಡಾ. ಅಂಬೇಡ್ಕರ್‍ರವರು ಜಾತ್ಯತೀತ, ಸಮಾಜವಾದ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಹೊಂದಿದ್ದರು ಎಂದು ತಿಳಿಸಿದರಲ್ಲದೇ, ಅಗಾಧ ಪಾಂಡಿತ್ಯವನ್ನು ಉಳ್ಳವರಾಗಿದ್ದರು ಹಾಗೂ ನಿರಂತರ ಅಧ್ಯಯನಶೀಲರಾಗಿದ್ದರು. ಆದುದರಿಂದಲೇ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡಿದರುಎಂದು ಹೇಳಿದರು ಇಂತಹಮಹಾನ್ ನಾಯಕರುಗಳ ಆದರ್ಶಗಳುವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

       ಶಿಕ್ಷಣ ಇಲಾಖೆಯಾ ಜೆ.ಆರ್.ಶಿವಲಿಂಗಪ್ಪ ಇವರುಮಾತನಾಡಿ ಅಂಬೇಡ್ಕರ್ ರವರುಸಾಕಷ್ಟು ನೊವುಂಡು ಜೀವನಸಾಗಿಸಿದ್ದಾರೆ ಅವರಿಗೊಸ್ಕರ ಬದುಕಲಿಲ್ಲಾ ಸಮಾಜಕ್ಕೆ ತಮ್ಮ ಜಿವನವನ್ನೆ ಮುಡುಪಾಗಿಟ್ಟವರು ಅವರು ನೀಡಿದ ಸಂವಿಧಾನದಿಂದಲೇ ಇಂದು ಸಮಾನತೆ ಯಲ್ಲಿ ನಾವು ಬದುಕುತ್ತಿರುವುದುಎಂದು ಹೇಳಿದರು.ಸಮಾರಂಭದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಚಂದ್ರಕಲಾ ಎಸ್.ನಿಂಗಪ್ಪ , ಜಯಲಕ್ಷ್ಮಮ್ಮ , ಪ್ರಾಂಶುಪಾಲರಾದ ಮಾಲಾ ಮುಖ್ಯೋಪಾಧ್ಯರಾದ ರೇವಣ್ಣ ಸಿದ್ದಪ್ಪ, ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here