ಹಿರಿಯೂರಿನಲ್ಲಿ ನವೆಂಬರ್ 17ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮ

0
9

ಹಿರಿಯೂರು :

       65ನೇ ಅಖಿಲ ಭಾರತ ಸಹಕಾರಿ ಸಪ್ತಾಹ – 2018ರ ಅಂಗವಾಗಿ ನವೆಂಬರ್ 17ರಂದು ಶನಿವಾರ, ನಗರದ ಗುರುಭವನದಲ್ಲಿ ಸಹಕಾರಿ ಸಪ್ತಾಹ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ತಾಲ್ಲ್ಲೂಕಿನ ಎಲ್ಲಾ ಸಹಕಾರಿಸಂಘಗಳ ಸಹಕಾರಿಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಸಹಕಾರಿ ಯೂನಿಯನ್ ಕಾರ್ಯನಿರ್ವಹಣಾಧಿಕಾರಿಗಳಾದ ನಾಗರಾಜ್ ಕರೆ ನೀಡಿದರು.
ನಗರದ ಟಿಎಪಿಸಿಎಂಎಸ್‍ನಲ್ಲಿ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ – 2018ರ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಜಿಲ್ಲಾ ಕೇಂದ್ರ ಬ್ಯಾಂಕ್‍ನ ನಿದೇಶಕರಾದ ಕೆ.ಆರ್.ರಾಜು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ನವೆಂಬರ್ 14 ರಿಂದ 20 ರವರೆಗೆ ರಾಷ್ಟ್ರಾದ್ಯಂತ ಹಾಗೂ ಜಿಲ್ಲಾ ಯಾದ್ಯಂತ ಆಚರಣೆ ಮಾಡಲಾಗುತ್ತಿದ್ದು ಈ ಸಹಕಾರಿ ಸಪ್ತಾಹದ ಅವಧಿಯಲ್ಲಿ ಸಹಕಾರ ಚಳುವಳಿಯ ಸಾಧನೆ ಹಾಗೂ ವೈಪಲ್ಯಗಳನ್ನು ಕುರಿತು ಚಿಂತನ-ಮಂಥನ ನೆಡೆಸಲಾಗುವುದು ಎಂದರು.

     ಟಿಎಪಿಸಿಎಂಎಸ್ ಅಧ್ಯಕ್ಷ ಚಿದಂಬರಂ ಮಾತನಾಡಿ, ರಾಜ್ಯ ಸಹಕಾರಿ ಮಹಾಮಂಡಲಿ ಬೆಂಗಳೂರು ಹಾಗೂ ಜಿಲ್ಲಾ ಸಹಕಾರ ಕೇಂದ್ರಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ತಾಲ್ಲೂಕಿನ ಎಲ್ಲಾ ಸಹಕಾರಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಹಿರಿಯೂರಿನಲ್ಲಿ ನಡೆಯುವ ಈ ಸಪ್ತಾಹದ ನೇತೃತ್ವವನ್ನು ಟಿಎಪಿಸಿಎಂಎಸ್ ವಹಿಸಿಕೊಂಡಿದ್ದು ಈ ಸಪ್ತಾಹದಲ್ಲಿ “ಸಾರ್ವಜನಿಕ, ಖಾಸಗಿ, ಸಹಕಾರಿ, ಸಹಭಾಗಿತ್ವ ನಿರ್ಮಾಣ” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಾಗುವುದು ಎಂದರು.

      ಈ ಸಭೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಶ್ರೀಮತಿ ಎಂ.ಭಾರತಿ, ಸಹಕಾರಿ ಶಿಕ್ಷಕರಾದ ಮಾರುತಿ, ಟಿಎಪಿಸಿಎಂಎಸ್‍ಉಪಾಧ್ಯಕ್ಷ ಆಲೂರುಕಾಂತರಾಜ್, ಶೇಶಾದ್ರಿಬೀರೆನಹಳ್ಳಿ, ರಂಗಸ್ವಾಮಿಯಳನಾಡು, ಲಕ್ಕವನಹಳ್ಳಿ ಎಂಪಿಸಿಎಸ್ ಕಾರ್ಯದರ್ಶಿ ಕವಿತ, ಡಿಸಿಸಿ ಬ್ಯಾಂಕ್ ಸೂಪರ್‍ವೈಜರ್‍ಗಳಾದ ಶಶಿಧರ್, ಹೇಮಂತ್‍ರಾಜು, ರಂಗಪ್ಪವಿವಿಪುರ, ಗುರುಸ್ವಾಮಿಭರಂಪುರ, ಕನ್ನಿಕಪತ್ತಿನ ಸಹಕಾರಸಂಘದ ವ್ಯವಸ್ಥಾಪಕ ಆರ್.ರಾಮಕೃಷ್ಣ, ವೀರಶ್ಯವಪತ್ತಿನ ಸಹಕಾರಸಂಘದ ವ್ಯವಸ್ಥಾಪಕ ಪ್ರಸನ್ನಕುಮಾರ್, ವಾಣಿವಿಲಾಸಪತ್ತಿನ ಸಹಕಾರಸಂಘದ ಅಧ್ಯಕ್ಷ ಆಲೂರುಹನುಮಂತರಾಯಪ್ಪ, ಉಪಾಧ್ಯಕ್ಷ ಪಿ.ಆರ್.ಸತೀಶ್‍ಬಾಬು ಸೇರಿದಂತೆ ತಾಲ್ಲೂಕಿನ ಪ್ರಥಮಿಕ ಕೃಷಿ ಪತ್ತಿನಸಹಕಾರ ಸಂಘಗಳ ಎಲ್ಲಾ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here