ಅಪರಾಧ ತಡೆ ಮಾಸಾಚರಣೆಗೆ ಡಿವೈಎಸ್‍ಪಿ ಚಾಲನೆ

ಕೊಟ್ಟೂರು

        ಪಟ್ಟಣದ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾಕ್ಕೆ ಕೂಡ್ಲಿಗಿ ಉಪ ವಿಭಾಗ ಡಿವೈಎಸ್‍ಪಿ ಬಸವೇಶ್ವರ ಹೀರಾ ಮಂಗಳವಾರ ಚಾಲನೆ ನೀಡಿದರು.

         ಇಲ್ಲಿನ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳ ಜಾಥಾ ಮೆರವಣಿಗೆಗೆ ಪಾರಿವಾಳ ಹಾರಿ ಬಿಟ್ಟು ಅವರು ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಸೆಂಬರ್ ತಿಂಗಳ ಪೂರ್ಣ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ. ನಿಮ್ಮ ಮನೆ, ಗ್ರಾಮ ಅಥವಾ ಎಲ್ಲೇ ಅಪರಾಧಗಳು ನಡೆಯುವುದು ಕಂಡು ಬಂದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳು, ಸನ್ನಿವೇಶಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧವನ್ನು ಸಾರ್ವಜನಿಕರು ತಡೆಯಬೇಕು. ಅಪರಾಧಗಳನ್ನು ಪತ್ತೆ ಹಚ್ಚಲು ಹಾಗೂ ತಡೆಯಲು ಪೊಲೀಸರು ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೆ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು. ಮಾಸಾಚರಣೆಗೆ ಜನರು ಸ್ಪಂದಿಸಬೇಕು ಎಂದು ಹೇಳಿದರು.

        ಪಿಎಸ್‍ಐ ಎ.ಕಾಳಿಂಗ, ಎಎಸ್‍ಐಗಳಾದ ನಾಗರತ್ನ, ಗಂಗಾಧರ ನಾಯ್ಕ, ಸಿಬ್ಬಂದಿಗಳಾದ ಮಂಜುನಾಥ, ರಮೇಶ, ಸಿದ್ದೇಶ, ಪ.ಪಂ. ಆರೋಗ್ಯ ನಿರೀಕ್ಷಕಿ ಅನುಷಾ, ಮುಖ್ಯಗುರು ಬಸವರಾಜ, ಶಿಕ್ಷಕರಾದ ರೇವಣಸಿದ್ದಪ್ಪ, ಕೊಟ್ರೇಶ ಸೇರಿ ಅನೇಕರಿದ್ದರು. ಜಾಥಾದಲ್ಲಿ ಶಾಲೆ ವಿದ್ಯಾರ್ಥಿಗಳು, ಆಟೋ, ಟ್ರಾಕ್ಸ್, ಕಾರುಗಳ ಸಮೇತ ಚಾಲಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap