ಬರ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ ಬಂದರೂ ಅಧಿಕಾರಿ ಬರಲಿಲ್ಲ:-ನರೆಗಲ್ ಕೊಟ್ರೇಶ್ ದೂರು

0
6

ಹಗರಿಬೊಮ್ಮನಹಳ್ಳಿ:

          ತಾಲೂಕಿನಲ್ಲಿ ಬರ ವೀಕ್ಷಣೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗಮಿಸುತ್ತಾರೆ ಮಾಹಿತಿಯೊಂದಿಗೆ ಬರಬೇಕು ಎಂದು ತಹಸೀಲ್ದಾರ್ ವಿಜಯಕುಮಾರ್‍ಗೆ ಹೇಳಿದರೂ ಅಧಿಕಾರಿಗಳು ಸುಳಿಯಲಿಲ್ಲವೆಂದು ಬಿಜೆಪಿ ತಾಲೂಕು ಅಧ್ಯಕ್ಷ ನರೆಗಲ್ ಕೊಟ್ರೇಶ್ ಆರೋಪಿಸಿದರು. 

           ತಾಲೂಕಿನ ಮರಬ್ಬಿಹಾಳ್ ಹತ್ತಿರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಬರ ಪರಿಸ್ಥಿತಿಯ ವೀಕ್ಷಣೆಗೆ ಆಗಮಿಸಿದ್ದರು. ಅಲ್ಲಿಯ ನಷ್ಟವಾಗಿರುವ ಮೆಕ್ಕೆಜೋಳ ತೋರಿಸಿದ ರೈತ ರಾಮನಾಯ್ಕ್‍ರೊಂದಿಗೆ ಮಾತಾನಾಡಿದ ಜಗದೀಶ ಶೆಟ್ಟರ್ ಈ ರೀತಿ ಬೆಳೆ ನಾಶವಾಗಲು ಕಾರಣ ಕೇಳಿದರು. ಬಹುತೇಕ ಸೈನಿಕ ಹುಳು, ಬೂದು ರೋಗ ಸೇರಿದಂತೆ ಇತರೆ ರೋಗಗಳು ಹಾಗೂ ಮಳೆಯ ಕೊರತೆಯಿಂದ ಬೆಳೆ ನಷ್ಟವಾಗಿದೆ ಎಂದು ಅಲ್ಲಿ ಇದ್ದವರು ಮಾಹಿತಿ ನೀಡಿದರು.

           ಕೂಡಲೆ ತಾಲೂಕಿನಲ್ಲಿ ಬರ ಆವರಿಸಿರುವ ಮಾಹಿತಿ, ಯಾವಯಾವ ಬೆಳೆ ನಷ್ಟದಲ್ಲಿವೆ ಎಂದು ಜಗದೀಶ ಶೆಟ್ಟರ್ ಸಂಪೂರ್ಣ ಮಾಹಿತಿ ಕೇಳಿದರು. ಆದರೆ ಅಲ್ಲಿ ಇದ್ದವರೆಲ್ಲ ಬಿಜೆಪಿ ಕಾರ್ಯಕರ್ತರು ಮುಖಂಡರು ಪರಿಸ್ಥಿತಿ ಹೀಗಿರುವಾಗ ತಾಲೂಕಿನ ಸಂಪೂರ್ಣ ಮಾಹಿತಿ ನೀಡಲಾಗದೆ ವಿಫಲವಾದ ಘಟನೆ ಜರುಗಿತು.

           ನಂತರ ಪ್ರತಿಕ್ರಿಯಿಸಿದ ಬಿಜೆಪಿ ತಾಲೂಕು ಅಧ್ಯಕ್ಷ ನರೆಗಲ್ ಕೊಟ್ರೇಶ್ ತಹಸೀಲ್ದಾರ್ ಅವರಿಗೆ ಮೊದಲೇ ಹೇಳಿದ್ದರೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದರು. ಬೆಳೆ ನಷ್ಟದ ಮಾಹಿತಿ ಪಡೆದರೆ ಕೇಂದ್ರಕ್ಕೆ ಮಾಜಿ ಮುಖ್ಯಮಂತ್ರಿಗಳು ಇಲ್ಲಿರುವ ಪರಿಸ್ಥಿತಿಯ ಬಗ್ಗೆ ತಿಳಿಸುತಿದ್ದರು. ರೈತರ ಬಗ್ಗೆ ಕಾಳಜಿ ಇಲ್ಲದೆ ಈ ರೀತಿ ನಿರ್ಲಕ್ಷ್ಯ ತೋರಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here