ಪಿಂಚಣಿ ಹಕ್ಕು ಕಸಿದುಕೊಳ್ಳಬಾರದು:ಸಂತೋಷ್ ಹೆಗಡೆ

ಬೆಂಗಳೂರು

        ಪಿಂಚಣಿ ಎನ್ನುವುದು ಹಕ್ಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವಾಗ ಸರ್ಕಾರ ಯಾವುದೇ ಕಾರಣಕ್ಕೂ ಪಿಂಚಣಿ ಹಕ್ಕು ಕಸಿದುಕೊಳ್ಳಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ತಿಳಿಸಿದರು.

       ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘ ಆಯೋಜಿಸಿದ್ದ, `2006ರಿಂದ ಸರ್ಕಾರಿ-ಅರೆ ಸರ್ಕಾರಿ ಸೇವೆಗೆ ಸೇರಿ ಮರಣ ಹೊಂದಿರುವ ಎನ್‍ಪಿಎಸ್ ನೌಕರರ ಅವಲಂಬಿತರ ಹಾಗೂ ನಿವೃತ್ತ ಎನ್ ಪಿಎಸ್ ನೌಕರರ’ ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ನೌಕರರ ಪಿಂಚಣಿ ಎಂಬುವುದು ಹಕ್ಕು ಇದ್ದಂತೆ.ಆದರೆ, ಯಾವುದೇ ಸರ್ಕಾರ ಇದನ್ನು ಕಸಿದುಕೊಳ್ಳು ಯತ್ನಿಸಬಾರದು.ಇದಕ್ಕೆ ನನ್ನ ವಿರೋಧ ಇದೆ ಎಂದು ಅವರು ಎಂದರು.

        ಸರ್ಕಾರವು ಸರ್ಕಾರಿ ನೌಕರರನ್ನು ಎರಡು ಗುಂಪುಗಳನ್ನಾಗಿ ಮಾಡಿದ್ದಲ್ಲದೆ, ಒಂದು ಗುಂಪಿಗೆ ಅನ್ಯಾಯ ಮಾಡಿದೆ.ಆದರೆ, ಈ ಅನ್ಯಾಯ ಸರಿಪಡಿಸಲು ಹಾಗೂ ಎನ್‍ಪಿಎಸ್ ನೌಕರರ ನ್ಯಾಯ ಒದಗಿಸುವ ಹೋರಾಟದಲ್ಲಿ ಪಾಲ್ಗೊಳ್ಳುವೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಶಾಂತಾರಾಮ ಮಾತನಾಡಿ, ದೆಹಲಿ ರಾಜ್ಯ ವ್ಯಾಪ್ತಿಯ ಸರ್ಕಾರಿ ನೌಕರರಿಗೆ, ಎನ್ ಪಿಎಸ್ ರದ್ದುಗೊಳಿಸಲು ಅಲ್ಲಿನ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು, ಎನ್ ಪಿಎಸ್ ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿದರು.

         ಎನ್‍ಪಿಎಸ್ ಯೋಜನೆಗೆ 2006 ರಿಂದ ನೌಕರಿಗೆ ಸೇರಿರುವ ಸುಮಾರು 2.10 ಲಕ್ಷ ನೌಕರರು ಒಳಪಡುತ್ತಾರೆ. ಇದು ಎಲ್ಲಾ ನೌಕರರಿಗೂ ಮಾರಕವಾಗಿದೆ. ಇದನ್ನು ವಿರೋಧಿಸಿ ಜನವರಿ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯೂ ಕೂಡಾ ಮಾಡಲಾಗಿದೆ ಎಂದರು.

        ಎನ್‍ಪಿಎಸ್ ರದ್ದು ಮಾಡಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು ಸರ್ಕಾರ ನಿವೃತ್ತಿ ಮತ್ತು ಮರಣ ಉಪಧನ (ಡಿಸಿಆರ್?ಜಿ)ವನ್ನು 2018ರಿಂದ ಜಾರಿಗೊಳಿಸಿದ್ದು, ಇದು 2006ರಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ವಿಚಾರ ಸಂಕಿರಣದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಉಪಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಣನವರ, ಚಂದ್ರಕಾಂತ ತಳವಾರ, ಶಾರಾದ ನಾಗೇಶ್ ಸೇರಿದಂತೆ ಪ್ರಮುಖರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap