ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಚಿತ್ರಕಲಾ ಸ್ಪರ್ದೆ

0
16

ಹರಪನಹಳ್ಳಿ

       ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆಯನ್ನು ಬೆಸ್ಕಾಂ ಇಲಾಖೆ ಅಯೋಜಿಸಿತ್ತು.

        ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆ, ಸಂರಕ್ಷಣೆ ಮತ್ತು ಹಸಿರು ಇಂಧನ ಉತ್ತೇಜನ ಕುರಿತು ಜಾಗೃತಿ ಮೂಡಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮ ನಡೆಯಿತು.

       ಬೆಸ್ಕಾಂ ಇಲಾಖೆಯ ಅಭಿಯಂತರ ಎಸ್.ಭೀಮಪ್ಪ ಮಾತನಾಡಿ, ವಿದ್ಯುತ್ ಇಂದಿನ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದ್ದು ಅದರ ನಡತೆ, ನಿರ್ವಹಣೆ, ಮತ್ತು ಉಪಯೋಗ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅವಶ್ಯವಾಗಿದೆ. ವಿದ್ಯುತ್‍ಚ್ಚಕ್ತಿ ಉಪಯೋಗಿಸುವಾಗ ಯವುದೇ ತಪ್ಪು ಅಜಾಗುರುಕತೆ ನಡೆದಲ್ಲಿ ಜೀವ ಹಾನಿ ಅಥವಾ ಅಸ್ತಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂ ಸಾರ್ವಜನಿಕರು ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು, ಬಟ್ಟೆ ಒಣ ಹಾಕುವುದು, ಫ್ಲೆಕ್ಸ್, ಬಂಟಿಂಗ್, ಬೇನರ್‍ಗಳನ್ನು ಕಟ್ಟುವುದು ಇನ್ನೂ ಮುಂತಾದ ತಪ್ಪು ಕ್ರಮಗಳನ್ನು ಅನುಸರಿಸಬಾರದು ಎನ್ನುವುದನ್ನು ಮಕ್ಕಳು ಸ್ವ ಇಚ್ಚೆಯಿಂದ ಚಿತ್ರಗಳನ್ನು ರಚಿಸಿ ಅರಿವು ಮೂಡಿಸುತ್ತಿದ್ದಾರೆ. ಮಕ್ಕಳು ರಚಿಸುವ ಚಿತ್ರಗಳಿಗೆ ಇಲಾಖೆ ಡ್ರಾಯಿಂಗ ಕಾಗದಗಳ್ನು ನೀಡುತ್ತಿದ್ದು ಉತ್ತಮ ಜಾಗೃತಿ ಮೂಡಿಸುವ ಚಿತ್ರಕ್ಕೆ ಬಹುಮಾನ ನೀಡಲಾಗುವುದು ಎಂದರು.

       ಸೌರ ವಿದ್ಯುತ್ ಬಳಕೆ ಉತ್ಪದಾನೆ, ಘಟಕಗಳನ್ನು ಸ್ಥಾಪಿಸಿ ಪರಿಸರ ಸ್ನೇಹಿ ವಿದ್ಯತ್ ಉತ್ಪಾದಿಸುವುದು, ಎಲ್‍ಇಡಿ ಬಲ್ಪ ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉಳಿತಾಯ ಮಾಡುವುದು, ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ. ರೈತರ ಪಂಪ್ ಸೆಟ್ಟ್‍ಗಳಿಗೆ ಸೌರ ವಿದ್ಯುತ್ ಅಳವಡಿಸಿ ಇನ್ನೂ ಮುಂತಾದ ಉಳಿತಾಯ ಕ್ರಮಗಳನ್ನು ಅನುಸರಿಸಿ ಪರಿಸರ ಸ್ನೇಹಿಯಾಗಬೇಕು ಎಂದರು.

      ಸರಕಾರಿ ಜೂನಿಯರ್ ಕಾಲೇಜಿನ ಪ್ರಾಚಾರ್ಯ ಪ್ರಸಾದ ಶಾಸ್ತ್ರಿ, ಶಿಕ್ಷಣ ಇಲಾಖೆಯ ಉಮಾಶಂಕರ, ಎಟಿ ಮಾಹದೇವಪ್ಪ, ಡ್ರಾಯಿಂಗ್ ಮಾಸ್ಟರ್ ವಿಜಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here