ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ…!!

ಪಟ್ಟನಾಯಕನಹಳ್ಳಿ :

       ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗೃಹ ಶೌಚಾಲಯ ನಿರ್ಮಾಣ ಮಾಡಿ ಕೊಂಡು ವರ್ಷ ಕಳೆದರು ಬಾರದ ಹಣ. ಶೌಚಾಲಯ ಹಣ ನೀಡಲು ಪದೆ ಪದೇ ವಿಳಂಬವಾದ ಕಾರಣ ಅಧ್ಯಕ್ಷ ಸೇರಿದಂತೆ ಸರ್ವ ಸದಸ್ಯರು ಸೇರಿ ಪಿಡಿಓ ಮತ್ತು ಸಿಬ್ಬಂದಿ ಹೊರದಬ್ಬಿ ಪಂಚಾಯತಿ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ದ್ವಾರನಕುಂಟೆ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ನಡೆಯಿತು.

        ದ್ವಾರನಕುಂಟೆ ಗ್ರಾಪಂ ಅಧ್ಯಕ್ಷ ನರಸಿಂಹಯ್ಯ ನೇತೃತ್ವದಲ್ಲಿ ಪಂಚಾಯತಿ ಕಛೇರಿಯಲ್ಲಿ 2019 ನೇ ಸಾಲಿನ ವಸತಿ ಹಂಚಿಕೆ ಸಾಮಾನ್ಯ ಬಗ್ಗೆ ಸಭೆ ಕರೆಯಲಾಗಿತ್ತು. ಸಭೆ ಬಂದ ತಕ್ಷಣ ಸಭೆ ನಡೆಸ ಬಾರದು ಎಂದು ಪ್ರತಿಭಟನೆ ನಡೆಸಲು ಮುಂದಾದ ಸರ್ವ ಸದಸ್ಯರು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ 2018ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ 24 ಕುಟುಂಬ, ಇತರೆ ಸಮುದಾಯಗಳ 67. ಕುಟುಂಬಗಳು ಸೇರಿ ಒಟ್ಟು 91.ಜನ ಫಲಾನುಭವಿಗಳು ಗೃಹ ಶೌಚಾಲಯ ನಿರ್ಮಾಣ ಮಾಡಿ ಕೊಂಡಿದ್ದಾರೆ.

       ಒಟ್ಟು 11.ಲಕ್ಷ ರೂಪಾಯಿ ಹಣ ಮಂಜೂರು ಮಾಡ ಬೇಕಿದೆ. ಈ ಬಗ್ಗೆ ಹಲವಾರು ಬಾರಿ ಜಿಪಂ, ತಾಪಂ ಕಾರ್ಯ ನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯ ಕಟ್ಟಿದ ಹಣ ಕೊಡದ ಕಾರಣ ಗ್ರಾಮಗಳಲ್ಲಿ ಓಡಾಡಿದರೆ ಜನ ನಮಗೆ ಛೀಮಾರಿ ಹಾಕುತ್ತಿದ್ದಾರೆ. ಇದರಿಂದ ನಮಗೆ ಮುಜುಗರವಾಗುತ್ತಿದೆ ಈ ಬಾಕಿ ಇರುವಂತ ಶೌಚಾಲಯ ಅನುದಾನ ಬಿಡುಗಡೆ ಮಾಡುವವರೆಗೂ ಯಾವುದೇ ಕಾರಣಕ್ಕು ಅಧಿಕಾರಿಗಳು ಪಂಚಾಯತಿ ಕಛೇರಿಯಲ್ಲಿ ಕರ್ತವ್ಯ ಮಾಡಲು ಬಿಡುವುದಿಲ್ಲ ಎಂದು ಅಧ್ಯಕ್ಷ ನರಸಿಂಗಯ್ಯ ನೇತೃತ್ವದಲ್ಲಿ ಅಗ್ರಹಿಸಿ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು. ಮತ್ತೆ ಮತ್ತೆ ಅಧಿಕಾರಿಗಳು ಸಮಸ್ಯೆಗೆ ಸ್ಪಂಧಿಸದಿದ್ದರೆ ಸದಸ್ಯ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದರು.

        ಗ್ರಾಪಂ ಉಪಾಧ್ಯಕ್ಷೆ ಸಿದ್ದಗಂಗಮ್ಮ, ಸದಸ್ಯರಾದ ತಿಪ್ಪೇಶ್‍ಗೌಡ, ಜಯರಾಮೇಗೌಡ, ಶಿವಲಿಂಗಪ್ಪ, ಜಯಮ್ಮ, ಮಂಜುಳಾ, ರತ್ನಮ್ಮ, ಮೀನಾಕ್ಷಿ, ಭಾಗ್ಯಮ್ಮ, ಮಮತ, ಡಿ.ಎಸ್.ರಂಗನಾಥ್, ದ್ರಾಕ್ಷಾಯಣಿ, ಗೀತಮ್ಮ, ಲಕ್ಷ್ಮೀದೇವಿ, ಮಾಜಿ ಸೈನಿಕ ಸಣ್ಣರಂಗಪ್ಪ, ಮುಖಂಡ ನೇಜಂತಿ ರಾಮಕೃಷ್ಣ, ನಾಗರಾಜು, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap