ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ : ಪಂಜರಶಾಲೆ ನಾಟಕ ಪ್ರದರ್ಶನ:

ಹಿರಿಯೂರು:

       ನೇಸರ ಸಂಸ್ಥೆ (ರಿ), ಹಿರಿಯೂರು ಮತ್ತು ಭಾರತಿ ಕಲಾವಿದರು (ರಿ) ಹಿರಿಯೂರು ಇವರ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕತಿ ಇಲಾಖೆ, ಬೆಂಗಳೂರು ಮತ್ತು ಸ್ವಾಭಿಮಾನಿ ಮೈನಾರಿಟಿ ವುಮೆನ್ಸ್ ವೆಲ್‍ಫೇರ್ ಅಸೋಸಿಯೇಷನ್, ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ವಿ. ಕಾರಂತರಿಂದ ರಚಿಸಲ್ಪಟ್ಟ ಪಂಜರ ಶಾಲೆ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.

      ಪ್ರಾಸ್ತವಿಕ ನುಡಿಗಳನ್ನಾಡಿದ ಮಲ್ಲಪ್ಪನಹಳ್ಳಿ ಮಹಲಿಂಗಯ್ಯನವರು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಎಳೆ ಮನಸ್ಸುಗಳ ಮೇಲಾಗುತ್ತಿರುವ ಮಾನಸಿಕ ಹಿಂಸೆಯನ್ನು, ವ್ಯವಸ್ಥೆಯಲ್ಲಿ ಮಕ್ಕಳನ್ನು ಸುಶಿಕ್ಷಿತರನ್ನಾಗಿಸದೇ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾರ್ಪಡಿಸಿರುವ ಬಗೆಯನ್ನು ಮನಮುಟ್ಟುವಂತೆ ತಮ್ಮ ನಾಟಕದ ಮೂಲಕ ಹೇಳಿರುವ ಬಿ.ವಿ.ಕಾರಂತರಿಗೆ ಮತ್ತು ನಾಟಕವನ್ನು ಧೀಮಂತವಾಗಿ ತೆರೆಗೆ ತಂದಿರುವ ನಿರ್ದೇಶಕ ಧೀಮಂತರವರಿಗೂ ವಂದನೆಗಳನ್ನು ಅರ್ಪಿಸಿದರು.

      ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಉಪಪ್ರಾಶುಂಪಾಳರಾದ ಶ್ರೀ ರಾಮಚಂದ್ರಪ್ಪ ಮತ್ತು ಉಪನ್ಯಾಸಕರಾದ ಜಿ. ರಾಮಚಂದ್ರಪ್ಪನವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ನೇಸರ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಮಾಳಿಗೆ, ಪ್ರಶಾಂತ್ ಹೆಚ್. ಭಾರತಿ ಕಲಾವಿದವರು(ರಿ) ಸಂಸ್ಥೆಯ ನಿರ್ದೇಶಕರಾದ ನಾಗೇಶ್, ಅಶ್ವಕ್ ಅಹಮದ್‍ರವರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap