ಮಾಧ್ಯಮಿಕ ಶಾಲಾ ಶಿಕ್ಷಕರಿಂದ ಓಲೇಕಾರಗೆ ಮನವಿ….!!!

0
41

ಹಾವೇರಿ

        ಮುಂಬರುವ ಬೆಳಗಾವಿ ಅಧಿವೇಶದಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಕಾಲ್ಪನಿಕ ವೇತನ ಬಡ್ತಿಯ ಬಸವರಾಜ ಹೊರಟ್ಟಿ ವರದಿಯನ್ನು ಯಥಾವತ್ತಾಗಿ ಜಾರಿ ಮತ್ತು 01-04-2018 ರಿಂದ ಜಾರಿಗೆ ಬಂದ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಂತೆ ಸದಸನದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ಹಾವೇರಿ ತಾಲೂಕಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರು ಶಾಸಕ ನೆಹರೂ ಓಲೇಕಾರ ಅವರಿಗೆ ಮನವಿ ಸಲ್ಲಿಸಿದರು.

         ಈ ಸಂದರ್ಭದಲ್ಲಿ ತಾಲೂಕಾ ಮಾದ್ಯಮಿಕ ಸಂಘದ ಅಧ್ಯಕ್ಷ ಎಂ.ಬಿ ರಮೇಶ, ಕಾರ್ಯದರ್ಶಿ ನಿಂಗನಗೌಡ ಕುಂದೂರ, ಅರವಿಂದ ಅಂಗಡಿ, ಎಸ್.ಎನ್ ಮಳೆಪ್ಪನವರ, ಬಿ.ಜಿ ಗೌಡಪ್ಪನವರ, ಎಸ್.ವಿ ಕಪ್ಪರದ, ಎಸ್.ಎಲ್ ಕಾಡದೇವರಮಠ, ಬಿ.ಜಿ ಕೊರಗ, ಎಂ.ಬಿ ಹಂಚಿನಾಳ, ಎಂ.ಎಸ್ ಪುರದ, ಜೆ.ಡಿ ಪಾಟೀಲ, ಶಿವಬಸವ ಮರಳಿಹಳ್ಳಿ, ಐ.ಟಿ ತಳವಾರ, ಪಿ.ಬಿ ಪಂಪಣ್ಣನವರ ಮತ್ತಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here