ಆಯ-ವ್ಯಯದ ಪೂರ್ವಭಾವಿ ಸಭೆ

ಹೊಳಲ್ಕೆರೆ:

       2018-19ನೇ ಸಾಲಿನ ಪರಿಷ್ಕತ ಆಯವ್ಯಯ ಹಾಗೂ 2019-20ನೇ ಸಾಲಿನ ಆಯ-ವ್ಯಯದ ಪೂರ್ವಭಾವಿ ಸಭೆ ಮತ್ತು ಸಾರ್ವಜನಿಕರ ಸಲಹೆಗಳ ಬಗ್ಗೆ ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಪ.ಪಂಯ ಸಭಾಂಗಣದಲ್ಲಿ ಸಭೆ ನಡೆಯಿತು.
ಪಟ್ಟಣದಲ್ಲಿ ಪ್ರವೇಶ ಮಾಡಲು ಊರಿನ ನಾಮ ಫಲಕ ಹಾಕಲು ಸಾರ್ವಜನಿಕರಾದ ಶೇಖರ್, ಶ್ರೀನಿವಾಸ್ ಮತ್ತು ರಾಘವೇಂದ್ರ ಪ.ಪಂ. ಮುಖ್ಯಾಧಿಕಾರಿ ಡಿ.ಉಮೇಶ್ ರವರಿಗೆ ಸಲಹೆ ನೀಡಿದರು.

       ಮಾಜಿ ಪ.ಪಂ. ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ ಕಸದ ವಿಲೆವಾರಿಗೆ ಗಾಡಿಗಳು ಬರುತ್ತಿಲ್ಲ, ಶುಧ್ದ ನೀರಿನ ಘಟಕಗಳು ಪಟ್ಟಣದಲ್ಲಿ 9 ಇದ್ದರು ಒಂದು ಸರಿಯಾದರೆ ಇನ್ನೊಂದು ದುರಸ್ಥಿಗೆ ಬರುತ್ತದೆ, ಕೆಲವು ಶುಧ್ದ ನೀರಿನ ಘಟಕಗಳಲ್ಲಿ ನೀರು ಫಿಲ್ಟರ್ ಆಗುತ್ತಿಲ್ಲ, ಜಾತ್ರೆ, ಹಬ್ಬಗಳಲ್ಲಿ ನೀರು ಇರುವುದಿಲ್ಲ. ದೂರವಾಣಿ ಮೂಲಕ ಕೇಳಿದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ, ಸಾರ್ವಜನಿಕರ ಶೌಚಾಲಯ ನಿರ್ಮಾಣವಾಗಿದ್ದರು ಬಳಕೆಯಾಗುತ್ತಿಲ್ಲ, ಬಡ ಜನತೆ ನಿವೇಶನಗಳ ಖಾತೆ ಎಕ್ಷಟ್ರಾಕ್ಟ್ ಕೇಳಿದರೆ 70 ಸಾವಿರದಿಂದ 1 ಲಕ್ಷ ರೂಗಳು ಫೀ ಇರುತ್ತದೆ ಸಂಪೂರ್ಣ ಮನ್ನ ಮಾಡಿ ಪುಕ್ಕಟೆ ಖಾತೆ ಎಕ್ಷಟ್ರಾಕ್ಟ್ ಮಾಡಲು ಮನವಿ ಮಾಡಿದರು.

        ಗಣಪತಿ ಗುಡಿಗೆ ಹೋಗುವ ದಾರಿ, ಐಟೆಕ್ ಶಾಲೆ, ತರಳಬಾಳು ಬಾಲಕಿಯರ ಪ್ರೌಢಶಾಲೆಗೆ ಹೋಗುವ ದಾರಿಯಲ್ಲಿ ಚರಂಡಿ ನೀರು ಹರಿದು ಹೋಗುತ್ತದೆ ಮಕ್ಕಳು ಕೊಳಚೆ ನೀರನ್ನು ದಾಟಿ ಓಡಾಡುತ್ತಾರೆ. ಚರಂಡಿ ವ್ಯವಸ್ಥೆ ಮಾಡಲು ಸಲಹೆ ನೀಡಿದರು.ಮಾಜಿ ಪ.ಪಂ ಅಧ್ಯಕ್ಷ ಜಗದೀಶ್ ನಾಡಿಗ್ ಮಾತನಡಿ 16 ತಿಂಗಳಿನಿಂದ ಪೌರ ಕಾರ್ಮಿಕರಿಗೆ ಸಂಬಳ ಇಲ್ಲದಿದ್ದರೆ ಯಾವಾ ರೀತಿ ಕೆಲಸ ಮಾಡುತ್ತಾರೆ. ಮೊದಲು ಅವರ ಸಮಸ್ಯೆ ಬಗೆ ಹರಿಸಿ ಎಂದು ಸಲೆ ನೀಡಿದರು.

         ಡಿ.ಎಸ್.ಎಸ್. ರಾಜ್ಯಾ ಸಂಚಾಲಕ ಪಾಂಡು ರಂಗಸ್ವಾಮಿ ಮಾತನಾಡಿ ಎಷ್ಟು ಬಡಾವಣೆಗಳು ಇವೆ ಅದರಲ್ಲಿ ದೇವಸ್ಥಾನದ ಜಾಗ ಯಾವುದು, ಪಾಕ್ ಜಾಗ ಯಾವುದು ಅನ್ನುವುದು ನಾಮ ಫಲಕ ಹಾಕಿ, ಹಣ ಇರುವವರು ಅದನ್ನು ಅಕ್ರಮವಾಗಿ ಬಳಸುತ್ತಿದ್ದರೆ ಕಾನೂನು ಕ್ರಮ ಜರುಗಿಸಿ. ಸಾರ್ವಜನಿಕರ ಸ್ವತ್ತು ದುರ್ಬಳಕೆ ಮಾಡಲು ಅವಕಾಶ ಕೊಡಬೇಡಿ ಎಂದು ಸಲಹೆ ನೀಡಿದರು.

         ಬಿ.ಪರಮೇಶ್ವರಪ್ಪ ಕಾಲೇಜಿನ ಪ್ರಾಂಶುಪಾಲರಾದ ಮಹೇಂದ್ರಪ್ಪ ಅವರು ಮಾತನಾಡಿ ಕಾಲೇಜಿನ ಆವರಣದಲ್ಲಿ ಶೂದ್ದ ನೀರಿನ ಘಟಕ ನಿರ್ಮಾಣ ಮಾಡಿಕೊಡಬೇಕು, ಅದಕ್ಕೆ ಬೇಕಾದ ಜಾಗ ಕಲ್ಪಿಸಿ ಕೊಡುತ್ತೇವೆ. ಜೊತೆಗೆ ವಿಶ್ರಾಂತಿ ಕುರ್ಚಿಗಳ ಕಾಲೇಜಿಗೆ ನೀಡಬೇಕು ಎಂದು ಸಲಹೆ ನೀಡಿದರು.
        ಶಿವಲಿಂಗಪ್ಪ ಬಡಾವಣೆಗೆ ಬೀದಿ ದೀಪಗಳು ಇಲ್ಲ. ಬೆಟ್ಟದ ಪ್ರದೇಶ, ಹಾವು, ಹುಳ ಹುಪ್ಪಡಿ ಸೇರಿದರೆ ಸಾರ್ವಜನಿಕರು ತೊಂದರೆಯಾಗುತ್ತದೆ. ಚರಂಡಿಗಳು ನಿರ್ಮಾಣ ಮಾಡಿಸಬೇಕು ಎಂದು ಸಲಹೆ ನೀಡಿದರು.ಪ.ಪಂ ಮುಖ್ಯಾಧಿಕಾರಿ ಮಾತನಾಡಿ ಸಾರ್ವಜನಿಕರ ಸಮಸ್ಯೆಗಳು ಆದಷ್ಟು ಬೇಗ ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದರು.

          2018-19ನೇ ಸಾಲಿನ ಆಯ-ವ್ಯಯವಾಸ್ತವಿಕ ಜಮಾ 77 ಲಕ್ಷ 59 ಸಾವಿರ 100 ರೂಗಳು. ವೆಚ್ಚ 66 ಲಕ್ಷ 26 ಸಾವಿರ 37 ರೂಗಳಾಗಿರುತ್ತದೆ. ನೀರಿನ ನಿಧಿ 23ಲಕ್ಷ 36 ಸಾವಿ 996 ರೂ. ಆಮಾ ಆಗಿರುತ್ತದೆ. ವೆಚ್ಚ 21ಲಕ್ಷ 26 ಸಾವಿರ 188 ರೂ. ಉದ್ಯಮ ನಿಧಿ 3 ಲಕ್ಷ 43 ಸಾವಿರ 882 ರೂ.ಗಳು ಜಮಾ, ಖರ್ಚಾಗಿರುವುದಿಲ್ಲ. 14ನೇ ಹಣ ಕಾಸಿನ ಯೋಜನೆಯಡಿಯಲ್ಲಿ ಬಿಡುಗಡೆಯಾದ ಮೊತ್ತ 40 ಲಕ್ಷ 12 ಸಾವಿರ, ವೆಚ್ಚ 40 ಲಕ್ಷ 12 ಸಾವಿರ ರೂಗಳಾಗಿರುತ್ತದೆ. ಎಸ್.ಎಫ್.ಸಿ ಮುಕ್ತ ನಿಧಿ ಬಿಡುಗಡೆಯಾದ ಅನುದಾನ ರೂ. 18 ಲಕ್ಷ , ವೆಚ್ಚ 16 ಲಕ್ಷ 85 ಸಾವಿರ, ಉಳಿಕೆ 1 ಲಕ್ಷ 15 ಸಾವಿರ ರೂಗಳು. ಎಸ್.ಎಫ್.ಸಿ ಕುಡಿಯುವ ನೀರಿಗೆ ಬಿಡುಗಡೆಯಾದ ಮೊತ್ತ 60 ಲಕ್ಷ , ವೆಚ್ಚ 60 ಲಕ್ಷ ಖರ್ಚಾಗಿರುತ್ತದೆ ಎಂದು ಪ.ಪಂ ಮುಖ್ಯಾಧಿಕಾರಿ ಡಿ.ಉಮೇಶ್ ಮಂಡಿಸಿದರು.

          2019-20ನೇ ಸಾಲಿನ  ಪ್ರಾರಂಭಿಕ ಶುಲ್ಕ 13 ಕೋಟಿ 28 ಲಕ್ಷ 84 ಸಾವಿರ (1328.84)ಲಕ್ಷ, 2019-20ನೇ ಸಾಲಿನ ನಿರೀಕ್ಷಿತ ಆದಾಯ 10ಕೋಟಿ 48 ಸಾವಿರ, ನಿರೀಕ್ಷಿತ ವೆಚ್ಚ 23ಕೋಟಿ 20 ಲಕ್ಷ ಅಂದಾಜು ಎಂದು ಪ.ಪಂ ಮುಖ್ಯಾಧಿಕಾರಿ ಡಿ.ಉಮೇಶ್ ಮಂಡಿಸಿದರು.

         ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ಪ.ಪಂ ಸದಸ್ಯರುಗಳಾದ ಸಯ್ಯಿದ್, ರಾಜಪ್ಪ, ಇಂದೂಧರ್ ಮೂರ್ತಿ, ಹಬೀಬುರ್ ರಹಮಾನ್, ಸಜೀಲ್, ಶಾರದಮ್ಮ ರುದ್ರಪ್ಪ, ಸವಿತಾ ಕಾಟ್ರೋತ್, ಖಾದರ್ ಉಪಸ್ಥಿತರಿದ್ದರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap