ಭಸ್ಮಾಸುರ ಎಂದು ಅವಮಾನ ಮಾಡಿರುವುದು ಖಂಡನೀಯ:ಸಂಜಯ ಡಾಂಗೆ

0
16

ಹಾವೇರಿ :

        ಕನ್ನಡ ನೆಲದ ಮಣ್ಣಿನ ಮಗ, ಭಾರತ ದೇಶದ ಕನ್ನಡಿಗ ಏಕೈಕ ಮಾಜಿ ಪ್ರಧಾನಿಯಾದ ಎಚ್‍ಡಿ ದೇವೆಗೌಡರನ್ನು ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರು ಭಸ್ಮಾಸುರ ಎಂದು ಅವಮಾನ ಮಾಡಿರುವುದು ಖಂಡನೀಯ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡಾ|| ಸಂಜಯ ಡಾಂಗೆ ಹೇಳಿದರು.

        ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ತಾವು ರಾಜಕೀಯ ಸನ್ನಿವೇಶ ನೆನಪಿಸಿಕೊಳ್ಳಿ ಇದೇ ಮಾಜಿ ಪ್ರಧಾನಿ ದೇವೆಗೌಡ್ರೆ ನಿಮಗೆ ರಾಜಕೀಯ ಪುನಃ ಜನ್ಮ ನೀಡಿದ್ದು, ಜೆಡಿಎಸ್ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಿ, ಉತ್ತರ ಕರ್ನಾಟಕದ ಜವಾಬ್ದಾರಿ ನೀಡಿದವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈ ರೀತಿ ಜೆಡಿಎಸ್ ಪಕ್ಷದ ಯಾವಯೊಬ್ಬ ನಾಯಕರ ಬಗ್ಗೆ ನಾಲಿಗೆ ಬಿಚ್ಚಿದರೆ ಪರಿಣಾಮ ನೆಟ್ಟಗಿರೋದಿಲ್ಲ.

         ನಾಲಿಗೆ ಮೇಲೆ ಎಚ್ಚರಿಕೆ ಇರಲಿ ಎಂದು ಡಾ|| ಸಂಜಯ ಡಾಂಗೆ ಯತ್ನಾಳರಿಗೆ ಟಾಂಗ್ ನೀಡಿವ ಮೂಲಕ ಎಚ್ಚರಿಕೆ ನೀಡಿದರು. ಜೆಡಿಎಸ್ ಪಕ್ಷದ ನಾಯಕರು ಭಾವನ್ಮಾಕ ಜೀವನ ನಡೆಸುವರು. ನಾಡಿನ ಎಲ್ಲ ವರ್ಗದ ಜನರ ಏಳಿಗೆಗಾಗಿ ಅಧಿಕಾರ ಮಾಡುತ್ತಿದ್ದಾರೆ. ನಮ್ಮ ವರಿಷ್ಠರಾದ ದೇವೆಗೌಡ್ರರಿಗೆ ಈ ರೀತಿ ಅಸಮಂಜಸ ಹೇಳಿಕೆ ನೀಡಿರುವುದು ತಮ್ಮ ವ್ಯಕ್ತಿತ್ವಕ್ಕೆ ಕಳಂಕವಾಗುತ್ತದೆ.

         ಹಿರಿಯರಿಗೆ ಗೌರವ ನೀಡುವ ಗುಣಗಳನ್ನು ಕಲಿತುಕೊಳ್ಳಿ. ಈ ಮಾತಿನಿಂದ ನಾಡಿನ ಜನರಿಗೆ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಬೇಸರವಾಗಿದ್ದು , ಈ ಕೊಡಲೇ ಮಾಜಿ ಪ್ರಧಾನಿ ದೇವೆಗೌಡ್ರನ್ನು ಕ್ಷೇಮ ಕೇಳಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಅಧಿಕಾರ ಇಲ್ಲದೇ ಹತಾಶೆಯ ಭಾವಯು ತಮ್ಮ ಮಾತಿನಿಂದ ಗೊತ್ತಾಗುತ್ತದೆ. ನಾಡಿನ ಜನರ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರ ಹಗಲಿರುಳು ಶ್ರಮವಹಸುತ್ತಿದೆ ಎಂದು ಡಾ|| ಸಂಜಯ ಡಾಂಗೆ ಖಡಕ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಉಮೇಶ ತಳವಾರ.ಜೆಡಿಎಸ್ ನಗರ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣ್ಣಶೆಟ್ಟಿ.ತಾಲೂಕ ಉಪಾಧ್ಯಕ್ಷರಾದ ಅಮೀರಜಾನ್ ಬೇಪಾರಿ ಅನೇಕರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here