ಮಹಿಳಾ ಸ್ವರಕ್ಷಣೆ ತರಬೇತಿಗೆ ಸ್ವರ ಕಾರ್ಯಕ್ರಮ

ಹಾವೇರಿ

         ಮಹಿಳಾ ಸಬಲೀಕರಣದ ಸಂದೇಶ ಹೊತ್ತು ಬೆಳಗಾವಿಯಿಂದ ಬೆಂಗಳೂರಿಗೆ ಕೈಗೊಂಡಿರುವ ಕರ್ನಾಟಕ ಮಹಿಳಾ ಪೊಲೀಸ್ ಯಾತ್ರ್ರೆ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಅಪರ ಆರಕ್ಷಕ ಮಹಾನಿರ್ದೇಶಕ ಭಾಸ್ಕರ್‍ರಾವ್ ಅವರು ತಿಳಿಸಿದರು.

        ಗುರುವಾರ ನಗರದ ಶಿವಶಕ್ತಿ ಪ್ಯಾಲೇಸ್ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಮಹಿಳೆ ಮತ್ತು ಆರೋಗ್ಯ, ಮಹಿಳೆ ಮತ್ತು ಕ್ರೀಡೆ, ಮಹಿಳೆ ಮತ್ತು ನಗರ ಪರಿಸರ, ಮಹಿಳಾ ಮತ್ತು ಪ್ರವಾಸೋದ್ಯಮ ಹಾಗೂ ಹೆಣ್ಣು ಮಗುವಿನ ರಕ್ಷಣೆಯ ಸಂದೇಶದ ಜೊತೆಗೆ ಪೊಲೀಸ್ ಮೀಸಲು ಪಡೆಯ ಮಹಿಳಾ ಪೇದೆ , ಮಹಿಳಾ ಅಧಿಕಾರಿಗಳಲ್ಲಿ ಆತ್ಮ ವಿಶ್ವಾಸ ತುಂಬಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬೆಳಗಾವಿಯಿಂದ ಬೆಂಗಳೂರಿನವರೆಗೆ 540 ಕಿ.ಮೀ.ವರೆಗೆ ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

         ಡಿಸೆಂಬರ್ 5 ರಂದು ಬೆಳಗಾವಿಯಿಂದ ಸೈಕ್ಲಿಂಗ್ ಯಾತ್ರೆ ಹೊರಟು ಇಂದು ಹಾವೇರಿ ತಲುಪಿದ್ದೇವೆ. ಡಿ.9ರಂದು ಬೆಂಗಳೂರಿಗೆ ತಲುಪಲಿದೆ. ಅಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಆದರೆ ರಾಜ್ಯ ಪೊಲೀಸ್ ಮೀಸಲು ಪಡೆಯ ಮಹಿಳೆಯರು ಯಾವುದೇ ನೆರವಿಲ್ಲದೆ ಸ್ವ ಸಾಮಥ್ರ್ಯದಿಂದ ಸಬಲೀಕರಣಕ್ಕೆ ತನ್ನನ್ನು ಅರ್ಪಿಸಿಕೊಂಡು 540 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿ ಮೂಲಕ ಸೈಕಲ್‍ನಲ್ಲಿ ಸಂಚರಿಸುತ್ತ ಸಂದೇಶವನ್ನು ಸಾರುತ್ತಾ ಹೊರಟಿದ್ದಾರೆ. ದಾರಿಯುದ್ದಕ್ಕೂ ಅಂಗನವಾಡಿ, ಶಾಲಾ-ಕಾಲೇಜು, ಮಹಿಳಾ ಸಂಘಟನೆಗಳನ್ನು ಭೇಟಿ ಮಾಡಿ ಅಲ್ಪಾವಧಿಯ ಸಂವಾದನಡೆ ಮಾಹಿತಿ ಪಡೆದು ಸಾಗುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ಜಾಗೃತಿಯ ಜೊತೆಗೆ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಸಾಗುತ್ತಿದ್ಧಾರೆ ಎಂದು ತಿಳಿಸಿದರು.

        ಎಲ್ಲರೂ ಹಳ್ಳಿಯಿಂದ ಬಂದಂತಹ ಮಹಿಳೆಯರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. 45 ಮಹಿಳಾ ಮೀಸಲು ಪಡೆ ಪೇದೆಗಳು, 11 ಮಹಿಳಾ ಪೊಲೀಸ್ ಅಧಿಕಾರಿಗಳು, ನಾಲ್ಕು ಮಹಿಳಾ ಐ.ಎ.ಎಸ್.ಅಧಿಕಾರಿಗಳು, 40 ಜನ ಇತರ ಸಂಘಟನೆಯ ಪ್ರತಿನಿಧಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿದಿನ 100 ಕಿ.ಮೀ. ಸೈಕಲ್ ರ್ಯಾಲಿ ಕ್ರಮಿಸಲಿದೆ. ಹಲವು ಐ.ಎ.ಎಸ್. ಅಧಿಕಾರಿಗಳು ಸಹ ಬೆಂಬಲ ಸೂಚಿಸಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಸೈಕಲ್ ರ್ಯಾಲಿಗೆ ಎಂ.ಎಸ್.ಐ.ಎಲ್., ಕೆ.ಎಂ.ಎಫ್., ಇಂಡಿಯನ್ ಮೆಡಿಕಲ್ ಅಶೋಷಯೇಷನ್, ಜನರಲ್ ತಿಮ್ಮಯ್ಯ ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಬೆಂಬಲಿಸಿವೆ ಎಂದು ತಿಳಿಸಿದರು.

          ಸ್ವರ: ಮಹಿಳೆಯರ ಸಂರಕ್ಷಣೆಗಾಗಿ ಸ್ವರ ಕಾರ್ಯಕ್ರಮವನ್ನು ಶೀಘ್ರವೇ ಜಾರಿಗೆ ತರಲಾಗುವುದು. ಮೀಸಲು ಪಡೆಯ ಮಹಿಳಾ ಪೇದೆಗಳಿಗೆ ಸ್ವ ರಕ್ಷಣೆಯ ತರಬೇತಿ ನೀಡಿ ಮಾಸ್ಟರ್ ಟ್ರೈನರ್‍ರಾಗಿ ರೂಪಿಸಲಾಗುವುದು. ತರಬೇತಾದ ಪ್ರತಿ ಮಹಿಳಾ ಪೇದೆಗೆ 10 ಶಾಲೆಗಳನ್ನು ದತ್ತು ನೀಡಿ ವಿದ್ಯಾರ್ಥಿನಿಯರಿಗೆ ಸ್ವ ರಕ್ಷಣೆಯ ಕುರಿತಂತೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

          ಮಾಧ್ಯಮ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಕೆ.ಎಸ್.ಆರ್.ಪಿ. ಶಿಗ್ಗಾಂವ ಕಮಾಂಡೆಂಟ್ ಹಾಗೂ ಎಸಿಬಿ ಎಸ್.ಪಿ.ಶೃತಿ, ಗುಲ್ಬರ್ಗ ಕೆ.ಎಸ್.ಆರ್.ಪಿ. ಬೆಟಾಲಿಯನ್ ತರಬೇತಿ ಕೇಂದ್ರ ಪ್ರಾಚಾರ್ಯ ಸವಿತಾ ಹೂಗಾರ, ಸೌಮ್ಯ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap