ಪ್ರಾಜೆಕ್ಟ್ ಶಕ್ತಿ ಬಲವರ್ಧನಾ ಸಭೆ

ಹರಪನಹಳ್ಳಿ

       ಆಡಳಿತ ಪಕ್ಷಗಳಿಗೆ ವಿರೋಧ ಪಕ್ಷಗಳು ಚಾಟಿ ಏಟಿನಂತಹ ವೀಕ್ಷಕರಾದರೆ ಅಭಿವೃದ್ಧಿಗಳು ಆಗಲು ಸಾದ್ಯ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಲ್ಕಿಶ್ ಬಾನು ಹೇಳಿದರು.

       ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಪ್ರಾಜೆಕ್ಟ್ ಶಕ್ತಿ ಬಲವರ್ಧನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

      ಜಾತಿ ಧರ್ಮವಿಲ್ಲದ ಪಕ್ಷ ಕಾಂಗ್ರೆಸ್. ಸರ್ವಶ್ರೇಷ್ಟ ಸಂವಿಧಾನವನ್ನು ನೀಡಿದ್ದು ಕಾಂಗ್ರೆಸ್, ಬಡವರ ಪರವಾಗಿರುವ ದೊಡ್ಡ ಪಕ್ಷ ಇದಾಗಿದೆ.ವಿರೋಧ ಪಕ್ಷ ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗುತ್ತಿದೆ. ವಿರೋಧ ಪಕ್ಷದ ಕುತಂತ್ರಗಾರಿಕೆಯನ್ನು ಪ್ರತಿ ಯುವಕರಿಗೆ ಮನದಟ್ಟು ಮಾಡುವುದಕ್ಕಾಗಿ ಶಕ್ತಿ ನೊಂದಾಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

      ದೇಶದ ಮುಂದಿನ ಪ್ರಧಾನಿ ರಾಹುಲ್‍ಗಾಂಧಿ, ಇದಕ್ಕೆ ಶಕ್ತಿ ಪ್ರಾಜೆಕ್ಟ್ ದಿಕ್ಸೂಚಿಯಾಗಲಿದೆ. ಯುವಕರ ಮನಸ್ಸುಗಳಿಗೆ ಸೇತುವೆಯಾಗಿ ಪರಿಣಮಿಸಲಿದೆ. 2019ರ ಚುನಾವಣೆ ದೇಶದ ಪ್ರಗತಿಗೆ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸಹಕರಿಸುವ ಮೂಲಕ ಚುನಾವಣೆಗೆ ಸಿದ್ದರಾಗೋಣ ಎಂದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕು, ದೇಶದ ಪ್ರತಿಯೊಬ್ಬ ಪ್ರಜೆಯ ಸಮಸ್ಯೆಗಳ ಅಹವಾಲುಗಳನ್ನು ಅಲಿಸಿ ಪರಿಹಾರ ಸೂಚಿಸುವ ಶಕ್ತಿ ಪ್ರಾಜೆಕ್ಟ್‍ಗೆ ಎಲ್ಲರೂ ಕೈಜೋಡಿಸಬೇಕು. ಪ್ರತಿ ತಾಲೂಕಿನಲ್ಲಿ 20-25 ಸಾವಿರ ನೋಂದಾಣಿಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದರು.

      ಎಂ.ವಿ.ಅಂಜಿನಪ್ಪ ಮಾತನಾಡಿ ರಾಷ್ಟ್ರ ನಾಯಕ ರಾಹುಲ್ ಗಾಂಧಿಯವರ ದೇಶದ ಅಬಿವೃದ್ಧಿಯ ಕನಸ್ಸಿನ ಕೂಸು ಶಕ್ತಿ ಪ್ರಾಜೆಕ್ಟ್. ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದ ಸಿದ್ದಾಂತ, ತತ್ವಗಳನ್ನು ಮತ್ತು ಅಭಿವೃದ್ಧಿಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

     ಜಿಪಂ ಸದಸ್ಯ ಎಚ್.ಬಿ.ಪರಶುರಾಮಪ್ಪ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಸುಭದ್ರ ಸರಕಾರವನ್ನು ಸ್ಥಾಪಿಸುವ ಮುನ್ಸೂಚನೆಯಾಗಿ ಶಕ್ತಿ ಪ್ರಾಜೆಕ್ಟ್ ಅನುಷ್ಟಾನಗೊಳ್ಳಲಿದೆ ಎಂದರು.

      ಹಿರಿಯ ಕಾಂಗ್ರೆಸ್ ಮುಖಂಡ ಟಿಎಚ್.ಎಂ.ವಿರುಪಾಕ್ಷಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಚಿಗಟೇರಿ ಬಿ.ಕೆ.ಪ್ರಕಾಶ್, ವಕೀಲ ವೆಂಕಟೇಶ್, ಹಲಗೇರಿ ಮಂಜಪ್ಪ, ಡಿ.ಅಬ್ದುಲ್ ರೇಹಮಾನ್, ಜಾವೀದ್ ಮಾತನಾಡಿದರು.

       ಸಭೆಯಲ್ಲಿ ಎಂ.ಪಿ.ಲತಾ ಮಲ್ಲಿರ್ಜುನ, ಎಂ.ಪಿ.ಸುಮಾ, ಎಂ.ಪಿ.ವೀಣಾ, ತಾಪಂ ಸದಸ್ಯ ಎಚ್.ಚಂದ್ರಪ್ಪ, ಓ.ರಾಮಪ್ಪ, ಮುಖಂಡರಾದ, ವಸಂತಪ್ಪ, ಕೆ.ಎಂ.ಬಸವರಾಜಯ್ಯ, ಸಾಬಳ್ಳಿ ಜಂಬಣ್ಣ, ನಾಗರಾಜ, ಮಮ್ತಾಜ್ ಬೇಗಂ, ನೀಲಗುಂದ ವಾಗೀಶ್, ನಜೀರ ಆಹ್ಮದ್, ಯಡಿಹಳ್ಳಿ ಶೇಖರಪ್ಪ, ಜಯಲಕ್ಷ್ಮಿ, ಮಂಜ್ಯನಾಯ್ಕ, ಎನ್‍ಎಸ್‍ಯುಐ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap