ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ವಿರೋಧಿಸಿ ಪ್ರತಿಭಟನೆ

0
7

ಹಿರಿಯೂರು :

        ವಿಜಯಪುರ ಜಿಲ್ಲಾ ಸಿಂಧಗಿ ತಾಲ್ಲೂಕು, ಬಳಗನೂರು ಗ್ರಾಮದ ವಕೀಲರಾದ ದತ್ತಾತ್ರೇಯ ಲಕ್ಷ್ಮಣ ಬಂಡೀವಡ್ಡರ್ ಇವರು ನ್ಯಾಯಾಲಯದ ಕಾರ್ಯಕಲಾಪ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುತ್ತಾರೆ. ಆದ್ದರಿಂದ ಸದರಿ ಆರೋಪಿಗಳನ್ನು ಸರ್ಕಾರವು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ದಿನಾಂಕ 2-11-18 ರಂದು ನ್ಯಾಯಾಲಯದ ಒಂದು ದಿನದ ಕಲಾಪಗಳನ್ನು ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಿದರು.

          ಆನಂತರ ನಗರದ ತಾಲ್ಲೂಕು ಕಛೇರಿಗೆ ತೆರಳಿ ತಹಶೀಲ್ದಾರ್‍ರವರಿಗೆ ಮನವಿ ಪತ್ರ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಕೀಲರ ಮೇಲೆ ಪದೇ ಪದೇ ಇದೇರೀತಿ ಹಲ್ಲೆಗಳು ಹಾಗೂ ಕೊಲೆಗಳು ನಡೆಯುತ್ತಿದ್ದು ಈ ಬಗ್ಗೆ ಕೂಡಲೇ ಸರ್ಕಾರ ಗಮನಹರಿಸಿ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರಲ್ಲದೆ ಈ ನಮ್ಮ ಮನವಿಯನ್ನು ಮಾನ್ಯ ರಾಜ್ಯಪಾಲರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

         ಈ ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ರಾಜಪ್ಪ, ಹಾಗೂ ಹಿರಿಯ ವಕೀಲರುಗಳಾದ ಸತೀಶ್‍ಬಾಬು, ಪ್ರಕಾಶ್, ಕೆ.ವಿ.ರಂಗನಾಥ್, ಜಿ.ಗುಂಡೇಗೌಡ, ದೃವಕುಮಾರ್, ರಂಗಸ್ವಾಮಿ, ಆದಿಮೂರ್ತಿ, ಈರಣ್ಣ, ಜಗದೀಶ್, ಸುರೇಶ್, ರಾಘವೇಂದ್ರ, ಯಲ್ಲಪ್ಪ, ತಿಪ್ಪೇಸ್ವಾಮಿ, ವಿಶ್ವನಾಥ್, ಶಿವಕುಮಾರ್, ಮಂಜಪ್ಪ, ನಾಗೇಶ್‍ಖನ್ನಾ, ಮೋಹನ್‍ಕೃಷ್ಣಾ, ಕಾಂತರಾಜ್, ಇನ್ನು ಮುಂತಾದವರು ಭಾಗವಹಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here