ಸೇವಾ ಭದ್ರೆತೆಗೆ ಆಗ್ರಹಿಸಿ ಡಿ.11ಕ್ಕೆ ಪ್ರತಿಭಟನೆ

0
5

ಚಿತ್ರದುರ್ಗ:

        ಸೇವಾಭದ್ರತೆ, ಪ್ರತಿ ತಿಂಗಳು ವೇತನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಮತ್ತು ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದರು.

           ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ 13500 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಡಿಮೆ ಗೌರವ ಧನಕ್ಕೆ ಕೆಲಸ ಮಾಡುತ್ತಿದ್ದು, ಸೇವಾಭದ್ರತೆ ಮತ್ತು ಖಾಯಂಗೊಳಿಸಿ ಶಾಶ್ವತ ನಿಯಮಾವಳಿ ರಚನೆಗೆ ಸಂಬಂಧಿಸಿದ ವರದಿ ಜಾರಿಗೊಳಿಸಲು ಒತ್ತಾಯಿಸಿ ಶಾಸಕರು, ಮಂತ್ರಿಗಳ ನಿವಾಸದ ಎದುರು ಹಲವು ಬಾರಿ ಧರಣಿ ನಡೆಸಿದ್ದರೂ ಸಹ ಸರ್ಕಾರ ನಿರ್ಲಕ್ಷೆ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಮತ್ತು ಬೆಳಗಾವಿ ಚಲೋಗೆ ಮುಂದಾಗಿದ್ದೇವೆ ಎಂದು ಹೇಳಿದರು.

           ಪ್ರತಿ ಗಂಟೆಗೆ ಒಂದು ಸಾವಿರ ರೂ.ಗೌರವಧನ ನೀಡಬೇಕು. ವಾರಕ್ಕೆ ಹತ್ತು ಗಂಟೆ, ತಿಂಗಳಿಗೆ ನಲವತ್ತು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತೇವೆ. ಯು.ಜಿ.ಸಿ.ನಿಯಮದ ಪ್ರಕಾರ ಸಂಬಳ ಕೊಡುತ್ತಿಲ್ಲ. ಇದರಿಂದ ನಮ್ಮನ್ನೇ ನಂಬಿರುವ ಕುಟುಂಬ ಬೀದಿಗೆ ಬೀಳುವಂತ ಪರಿಸ್ಥಿತಿ ಉಂಟಾಗಿದೆ. ಪ್ರಸಕ್ತ ಏಳನೆ ವೇತನ ಆಯೋಗದ ಶಿಫಾರಸ್ಸಿನಂತೆ ಇಲಾಖೆ ಶಿಫಾರಸ್ಸು ಮಾಡಿರುವ ಮಾಸಿಕ 30 ಸಾವಿರ ರೂ.ಗಳ ವೇತನ ಹೆಚ್ಚಿಸಿ 12 ತಿಂಗಳ ಬಾಕಿ ವೇತನ ಕೊಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಆರ್.ಪ್ರಕಾಶ್ ಸರ್ಕಾರವನ್ನು ಎಚ್ಚರಿಸಿದರು.ಅನಿಲ್‍ಕುಮಾರ್, ನಾಗೇಂದ್ರಪ್ಪ, ಚಂದನ, ವಿಕಾಸ್, ರವೀಂದ್ರ, ನಿರ್ಮಲ, ಪದ್ಮ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here