ಎಸ್.ಪಿ.ಎಂಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ತಿಪಟೂರು

         ಕಾಂಗ್ರೆಸ್‍ನ ನಿಷ್ಠಾವಂತ,ಸರಳ, ಸಜ್ಜನ ಹಾಲಿ ಸಂಸದರಿಗೆ ಟಿಕೆಟ್ ನೀಡದಿರುವ ನಿರ್ಧಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳಿಗೆ ಆಘಾತವನ್ನುಂಟು ಮಾಡಿದ್ದು, ಹಾಲಿ ಸಂಸದರಿಗೆ ಟಿಕೆಟ್ ನೀಡಿ ಪುನಃ ಗೆಲುವಿಗೆ ಸಹಕರಿಸಬೇಕೆಂದು ತಾಲ್ಲೂಕು ಕಾಂಗ್ರೆಸ್ ಪದಾಧಿಕಾರಿಗಳು ಒತ್ತಾಯಿಸಿ ಪ್ರತಿಭಟನೆಯನ್ನು ನಡೆದಿಸಿದ ಘಟನೆ ನಡೆದಿದೆ.

         ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಎಸ್.ಪಿ.ಮುದ್ದಹನುಮೇಗೌಡರ ಬೆಂಬಲಿಗಳು ಟಿಕೆಟ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿ.ಬಿ.ಶಶಿಧರ್ ಮಾತನಾಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳ, ಜನಸಾಮಾನ್ಯರ ಕಷ್ಟಗಳು ತಮ್ಮ ಕಷ್ಟಗಳೆಂದು ಭಾವಿಸಿ ಕೆಳವರ್ಗ, ಮಧ್ಯಮ ವರ್ಗದ ಜನರ ಧನಿಯಾಗಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದಿರುವುದು ನಿಜಕ್ಕೂ ದುಃಖದ ಸಂಗತಿ. ಮನೆ ಮನೆಗೂ ಪರಿಚಿತವಾದಂತಹ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಎಂದರೆ ನಂಬಲು ಅಸಾಧ್ಯವಾದಂತಹ ವಿಚಾರವಗಿದೆ.

         ಕರ್ನಾಟಕದ 9 ಸಂಸದರಲ್ಲಿ ಅತೀ ಹೆಚ್ಚಿನ ವಾಕ್ಚಾತುರ್ಯವನ್ನು ಹೊಂದಿದ ವ್ಯಕ್ತಿಯನ್ನು ನಿರ್ಲಕ್ಷಿಸಿರುವುದು ಕಾಂಗ್ರೆಸ್ ಪಕ್ಷದ ಹಿನ್ನೆಡೆ ಕಾರಣವಾಗುತ್ತದೆ. ಅದ್ದರಿಂದ ಕೂಡಲೇ ರಾಷ್ಟ್ರ, ರಾಜ್ಯ ನಾಯಕರು ತಮ್ಮ ತಪ್ಪನ್ನು ಅರಿತು ಪುನಃ ಟಿಕೆಟ್ ನೀಡಿದರೆ ಅತಿ ಹೆಚ್ಚಿನ ಅಂತರದಿಂದ ಗೆಲ್ಲಿಸಿಕೊಂಡು ಬರುವಂತಹ ಸಾಮಥ್ರ್ಯ ನಮಗಿದೆ. ನಮ್ಮ ಮನವಿಯನ್ನು ಕಾಂಗ್ರೆಸ್ ಪಕ್ಷದ ವರಿಷ್ಠರುಗಳು ಅರಿತು ನಡೆದುಕೊಳ್ಳಬೇಕೆಂದು ಒತ್ತಾಯಿಸಿದರು.

         ಮಾಜಿ ಜಿ.ಪಂ.ಸದಸ್ಯ ತ್ರಿಯಾಂಬಕ ಮಾತನಾಡಿ ರಾಜ್ಯದಲ್ಲಿ ಹೊಂದಾಣಿಕೆಗೆ ಎಲ್ಲಾ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಬದ್ಧವಾಗಿದ್ದು ಆದರೆ ಹಾಲಿ ಸಂಸದರಿಗೆ ಟಿಕೆಟ್ ನೀಡದೇ ಇರುವುದು ನೋವುಂಟಾಗಿದೆ. ಗೆಲ್ಲುವ ಸ್ಥಾನವನ್ನು ಇತರರಿಗೆ ಬಿಟ್ಟುಕೊಡುವುದು ನಿಜಕ್ಕೂ ದುಃಖದ ವಿಚಾರವೇ ಸರಿ. ಕಾಂಗ್ರೆಸ್ ಪಕ್ಷ ತನ್ನ ಹಾದೋಗತಿಯನ್ನು ತಾನೇ ಸೃಷ್ಠಿಸಿಕೊಳ್ಳುತ್ತಿರುವುದು ಇದೊಂದು ನೈಜ ಉದಾಹರಣೆಯಾಗಿದ್ದು, ಈಗಲೂ ಕಾಲ ಮಿಂಚಿಲ್ಲ ಈಗಲಾದರೂ ಟಿಕೆಟ್ ನೀಡಿ ಗೆಲುವಿಗೆ ಕಾರಣರಾಗಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಉಮಾಮಹೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕಲ್ಲೇಗೌಡನಪಾಳ್ಯ ಶರತ್, ಷಪಿಉಲ್ಲಾ, ಅಮಾನುಲ್ಲಾ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap