ರಕ್ತ ಹೀನತೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಹರಿಹರ:

      ಸಮಾಜ ಸಧೃಡವಾಗಬೇಕಾದರೆ ತಾಯಾಂದಿರ ಶ್ರಮ ಅಗತ್ಯವಾಗಿದೆ, ಗಂಡು ಮಕ್ಕಳು ಒಂದು ಕೆಲಸವಾದರೆ ಹೆಣ್ಣು ಮಕ್ಕಳು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ನಿರಂತರ ಕೆಲಸ ಮಾಡುತ್ತಾ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಮಲೆಬೆನ್ನೂರು ಅಪೂರ್ವ ಆಸ್ಪತ್ರೆಯ ಡಾ. ಬಸವರಾಜ್ ಹೇಳಿದರು.

     ತಾಲೂಕಿನ ಜಿಗಳಿ ಗ್ರಾಮದ ಮಹೇಶ್ವರಿ ಸಮುದಾಯ ಭವನದ ಶ್ರೀ ರಂಗನಾಥ ಸ್ವಾಮಿ ಬೀರಲಿಂಗೇಶ್ವರ ಹಾಗೂ ಆಂಜನೇಯ ಸ್ವಾಮಿಗಳ ಅನುಗ್ರಹದ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ರಕ್ತ ಹೀನತೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭದ ಸೃಜನಶೀಲ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.’

      ಮನುಷ್ಯನಿಗೆ ಆರೋಗ್ಯ ಮುಖ್ಯವಾಗಿದೆ, ಕೋಟಿ ಕೊಟ್ಟರೂ ಆರೋಗ್ಯ ಸಿಗದು. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನೆಯೇ ಮೊದಲ ಶಾಲೆ ಜನನಿ ಮೊದಲ ಗುರು ಎಂಬಂತೆ ತಾಯಂದಿರು ಮಕ್ಕಳಿಗೆ ಮನೆಯಲ್ಲಿ ಪೌಷ್ಠಿಕ ಆಹಾರವನ್ನು ಕೊಡುವ ಮೂಲಕ ಮಕ್ಕಳು ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಬೇಕು ಎಂದು ಕಿವಿ ಮಾತನ್ನು ಹೇಳಿದರು.

        ಮೊದಲು ನಮ್ಮಲ್ಲಿ ಮನಸ್ಥೈರ್ಯ ಇರಬೇಕು. ನಮ್ಮ ಮಕ್ಕಳಿಗೆ ಒಳ್ಳೆಯ ಆಚಾರ ವಿಚಾರ ಕಲಿಸಬೇಕು. ತಾಯಿ ಮಕ್ಕಳ ಜೀವನ ಬಗ್ಗೆ ವಿಚಾರ ಮಾಡುತ್ತಾಳೆ. ಅದೇರೀತಿ ಮಕ್ಕಳು ಸಹ ಮುಂದೆ ತಮ್ಮ ತಂದೆ ತಾಯಿಗೆ ವಯಸ್ಸಾದ ನಂತರ ಅವರಿಗೆ ಗೌರವ ಮತ್ತು ಅವರ ಆರೋಗ್ಯವನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು. ನಾವು ನಮ್ಮ ಜೀವನದಲ್ಲಿ ಇರುವುದನ್ನು ಬಿಟ್ಟು ಇಲ್ಲದನ್ನು ಬೇಡಬಾರದು. ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿಗುವಂತಹ ಮಾಹಿತಿಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.

      ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿ, ಕರ್ನಾಟಕದ ಪ್ರತಿ ಹಳ್ಳಿಗಳಿಗೂ ಗ್ರಾಮಾಭಿವೃದ್ಧಿ ಯೋಜನೆ ಹರಡಿಕೊಂಡಿದೆ. ಸರ್ಕಾರ ಮಾಡದೆ ಇರುವಂತಹ ಕೆಲಸವನ್ನು ಈ ಯೋಜನೆಯು ಹಮ್ಮಿಕೊಂಡಿದೆ ಎಂದು ಹೇಳಿದರು.ಊರಿನ ಮುಖಂಡ ಗೌಡ್ರು ಬಸವರಾಜಪ್ಪ ಮಾತನಾಡಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅದರಲ್ಲಿ ನಮ್ಮ ಊರಿನಲ್ಲಿ ಮಹಿಳೆಯರಿಗೆ ರಕ್ತ ಹೀನತೆಯ ಬಗ್ಗೆ ಕಾರ್ಯಕ್ರಮ ಮಾಡಿದ್ದು ಅದರಲ್ಲೂ ಕಡಿಮೆ ಹಿಮೊಗ್ಲೋಬಿನ್ ಇರುವ 35ಜನ ಸದಸ್ಯರಿಗೆ ಹಿಮೊಗ್ಲೋಬಿನ್ ಹೆಚ್ಚಾಗುವಂತೆ ಕೈಗೊಳ್ಳಬೇಕಾದ ಪೌಷ್ಟಿಕ ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡುತ್ತಿರುವುದು ಶ್ಲಾಘನಿಯ.

       ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಜೆ.ವಿ.ಕೆ ಸಮನ್ವಯಾಧಿಕಾರಿ ರೇಖಾ ಮಾತನಾಡಿ, ರಕ್ತ ಹೀನತೆಯ ತಪಾಸಣೆ ಕಾರ್ಯಕ್ರಮದಲ್ಲಿ 150 ಜನ ಸದಸ್ಯರ ತಪಾಸಣೆ ಮಾಡಿಸಿದ್ದು, 35 ಜನ ಸದಸ್ಯರಿಗೆ 7.8ರಷ್ಟು ರಕ್ತ ಹೀನತೆಯಿದ್ದು ಅವರಿಗೆ ಪೌಷ್ಠಿಕ ಆಹಾರ, ಪುಷ್ಠಿ ವಿತರಣೆ, ಮಾತ್ರೆಗಳ ವಿತರಣೆ ಮಾಡುವ ಮೂಲಕ ಮಹಿಳೆಯರು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು

        ಕಾರ್ಯಕ್ರಮದಲ್ಲಿ ಡಾ.ನಾಗರಾಜ್, ಡಾ.ಬಸವರಾಜ್, ಜಿ.ಅಂಜಿನಪ್ಪ, ಗೌಡ್ರು ಬಸವರಾಜಪ್ಪ, ಜೆ.ವಿ.ಕೆ. ಸಮನ್ವಯಾಧಿಕಾರಿ ರೇಖಾ, ಜಿಗಳಿ ವಲಯದ ಮೇಲ್ವಿಚಾರಕ ಗದಿಗೇಶ್, ಸೇವಾಪ್ರತಿನಿದಿಗಳಾದ, ಶೋಭಾ, ಸರೋಜ, ನಾಗರತ್ನಮ್ಮ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap