ಶುದ್ಧ ನೀರಿನ ಘಟಕ ಸರಿಪಡಿಸಲು ಆಗ್ರಹ

0
8
ಹುಳಿಯಾರು:
 
          ಹುಳಿಯಾರಿನ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಡಾಃವಾಟರ್ ಶುದ್ದ ಕುಡಿಯುವ ನೀರಿನ ಘಟಕ ಕಳೆದ 1 ತಿಂಗಳಿಂದ ಸ್ಥಗಿತಗೊಂಡಿದ್ದು ತಕ್ಷಣ ಸರಿಪಿಡುವಂತೆ ಇಲ್ಲಿನ ಗಾಂಧಿಪೇಟೆ ನಿವಾಸಿ ಶ್ರೇಯಸ್ ಒತ್ತಾಯಿಸಿದ್ದಾರೆ.
         
          ಹುಳಿಯಾರು ಪಟ್ಟಣಕ್ಕೆ ಮೊದಲ ಶುದ್ಧ ಕುಡಿಯುವ ನೀರಿನ ಘಟಕ ಇದಾಗಿದ್ದು ಇದಾದ ನಂತರ ಮೂರ್ನಾಲ್ಕು ಶುದ್ಧ ಕುಡಿಯುವ ನಿರಿನ ಘಟಕವಾಗಿದ್ದರೂ ನೀರು ಬದಲಾಯಿಸಿದರೆ ಶೀತವಾಗಬಹುದೆಂದು ಅನೇಕರು ಇನ್ನೂ ಇಲ್ಲಿಂದಲೇ ನೀರು ಕೊಂಡೊಯ್ಯುತ್ತಿದ್ದಾರೆ.
          ಆದರೆ ಕಳೆದ 1 ತಿಂಗಳಿಂದ ಈ ಘಟಕದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾಗಿ ನಿತ್ಯ ನೀರು ಬಳಸುತ್ತಿದ್ದ ಅನೇಕ ಕುಟುಂಬಗಳು  ಕುಡಿಯುವ ನೀರಿಗೆ ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ. 
         
           ಈ ಘಟಕವು ಹುಳಿಯಾರು ಗ್ರಾಮ ಪಂಚಾಯಿತಿ ಹಾಗೂ ಹೈದ್ರಬಾದ್‍ನ ವಾಟರ್ ಹೆಲ್ತ್  ಕಂಪನಿಯ ಸಹಯೋಗದಲ್ಲಿ ನಡೆಯುತ್ತಿದೆ. ಗ್ರಾಮ ಪಂಚಾಯ್ತಿ ಈಗ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಾವು ಜಾಗ ಕೊಟ್ಟಿರುವುದನ್ನು ಬಿಟ್ಟರೆ ಉಳಿದಂತೆ ನಿರ್ವಹಣೆಯ ಜವಾಬ್ದಾರಿ ಕಂಪನಿಯವರದ್ದು ಎನ್ನುತ್ತಾರೆ.
         
           ಇನ್ನು ಅವರಿಗೆ ಪೋನ್ ಮಾಡಿದರೆ ಶೀಘದಲ್ಲೇ ಸರಿಪಡಿಸುವ ಭರವಸೆ ನೀಡುತ್ತಾರೆ ವಿನಃ ಇದೂವರೆವಿಗೂ ಸರಿಪಿಸುವ ಗೋಜಿಗೆ ಹೋಗಿಲ್ಲ. ಇನ್ನಾದರೂ ಸಂಬಂಧಪಟ್ಟ ಹುಳಿಯಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಅಥವಾ ಡಾ.ವಾಟರ್ ಕಂಪನಿಯವರು ಇದರ ಬಗ್ಗೆ ಗಮನಹರಿಸಿ ಸ್ಥಗಿತಗೊಂಡಿರುವ ಈ ಶುದ್ದನೀರಿನ ಘಟಕವನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here