ಅರ್ಚಕರಿಗೆ ಸೂಕ್ತ ಸಂಭಾವನೆ ನೀಡಲು ಮನವಿ

ಪಾವಗಡ:

         ಮುಜರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ ಸೂಕ್ತ ಸಂಭಾವನೆ, ಸೇವಾ ಭದ್ರತೆ ಹಾಗೂ ಶ್ರೀರಾಮಾನುಜಚಾರ್ಯ ಮತ್ತು ಶಂಕರಚಾರ್ಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಕಛೇರಿಗಳಲ್ಲಿ ಆಚರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಾವಗಡ ತಾಲ್ಲೂಕು ವೈಷ್ಣವ ಸಂಘದ ಪದಾಧಿಕಾರಿಗಳು ಗ್ರೇಡ್-2 ತಹಶೀಲ್ದಾರ್ ಪ್ರಕಾಶ್‍ರವರಿಗೆ ಮನವಿ ಪತ್ರ ನೀಡಿದರು

         ತಾಲ್ಲೂಕಿನ ಮುಜರಾಯಿ ದೇವಸ್ಥಾನಗಳಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ ಯಾವುದೇ ರೀತಿಯ ಗೌರವ ಸಂಭಾವನೆಯಿಲ್ಲ, ದೇವಾಲಯದ ನಿರ್ವಹಣೆಗೆ ನೀಡುವ ಮಾಸಿಕ ತಸ್ತೀಕ್ ಹಣದಲ್ಲಿಯೇ ಸರ್ಕಾರ ಅರ್ಚಕರಿಗೆ ಸಂಭಾವನೆ ನೀಡುತ್ತಿದೆ, ಇದರಿಂದಾಗಿ ಅರ್ಚಕರ ಕುಟುಂಬ ನಿರ್ವಹಣೆ ಆಸಾಧ್ಯವಾಗಿದೆ, ತಸ್ತೀಕ್ ಹಣ ಪೂಜಾ ಕೈಂಕರ್ಯ ಹಾಗೂ ದೇವಾಲಯದ ನಿರ್ವಹಣೆಗೆ ಬಳಕೆಯಾಗುವುದರಿಂದ ಅರ್ಚಕರಿಗೆ ಸೂಕ್ತ ಸಂಬಳ ಸಿಗುತ್ತಿಲ್ಲ ಎಂದು ವೈಷ್ಣವ ಸಂಘದ ಪಧಾದಿಕಾರಿಗಳು ಆರೋಪಿಸಿದರು

         ತಾಲ್ಲೂಕು ವೈಷ್ಣವ ಸಂಘದ ಅಧ್ಯಕ್ಷ ಪೆಮ್ಮನಹಳ್ಳಿ ಶ್ರೀನಾಥ್ ಮಾತನಾಡಿ ರಾಜ್ಯ ಸರ್ಕಾರ ಎಲ್ಲ ಧರ್ಮಿಯರ ಹಾಗೂ ಜನಾಂಗದ ಗುರುಗಳು ಹಾಗೂ ಸಂತರ ಜಯಂತಿಯನ್ನು ಸರ್ಕಾರಿ ಕಛೇರಿಗಳಲ್ಲಿ ಆಚರಣೆ ಮಾಡುತ್ತಿದೆ,ಆದರೆ ವೈಷ್ಣವ ಪಂಥದ ಜಾತ್ಯತೀತ ತತ್ವವನ್ನು ವಿಶ್ವಕ್ಕೆ ಸಾರಿದ ಶ್ರೀರಾಮನುಜಾಚಾರ್ಯರ ಹಾಗೂ ಶಂಕರಚಾರ್ಯರ ಜಯಂತಿಯನ್ನು ಆಚರಿಸದೇ ನಿರ್ಲಕ್ಷ್ಯೆವಹಿಸಿದೆ, ಇನ್ನಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ಪ್ರತಿವರ್ಷ ರಾಮಾನುಜಚಾರ್ಯ ಹಾಗೂ ಶಂಕರಚಾರ್ಯರ ಜಯಂತಿಯನ್ನು ಆಚರಿಸಬೇಕು ಮತ್ತು ಅರ್ಚಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು

        ಗ್ರೇಡ್-2 ತಹಶೀಲ್ದಾರ್ ಪ್ರಕಾಶ್ ಮನವಿ ಪತ್ರ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು
ವೈಷ್ಣವ ಸಂಘದ ಕಾರ್ಯದರ್ಶಿ ಶ್ರೀಧರ್‍ಮೂರ್ತಿ, ಖಜಾಂಚಿ ಕೇಶವಮೂರ್ತಿ, ಮುಜರಾಯಿ ಅರ್ಚಕರ ಸಂಘದ ಮಾರುತಿಪ್ರಕಾಶ್, ಸಂಪತ್, ಲಕ್ಷ್ಮೀನಾರಯಣ್, ರಂಗನಾಥ್, ಸೀನಪ್ಪ, ಪ್ರಕಾಶ್, ಸಂಜೀವರಾಯಪ್ಪ, ವೆಂಕಟರಮಣಪ್ಪ, ಪಾಂಡು ಇತರ ಮುಖಂಡರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap