ಜಯಂತಿಗಳ ನೆಪದಲ್ಲಿ ಮಹಾನಿಯರಿಗೆ ಅವಮಾನ : ದೊಡ್ಡಬಸಪ್ಪ

ಹಗರಿಬೊಮ್ಮನಹಳ್ಳಿ

      ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಜಗಜೀವನರಾಮ್, ಡಾ.ಬಿ.ಆರ್.ಅಂಬೇಡ್ಕರ್, ಮಹಾವೀರ, ದಾಸಿಮಯ್ಯನವರ ಒಟ್ಟು ನಾಲ್ಕುಜನ ಮಹಾನೀಯರ ಜಯಂತಿಯ ಪೂರ್ವಭಾವಿ ಸಭೆ ಕರೆಯಲಾಗಿತ್ತು.ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದ 4ಜನ ಮಹಾನಿಯರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಸೇರಿದ್ದು 3ಜನ, ಸಭೆ ನಡೆದಿದ್ದು 5ನಿಮಿಷ, ಎನ್ನುವ ರೀತಿಯಲ್ಲಿ ಜರುಗಿ ಮುಕ್ತಾಯ ಕಂಡಿತು.

      ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಏಪ್ರೀಲ್ ತಿಂಗಳಲ್ಲಿ ಆಚರಣೆಗೊಳಪಡುವ ನಾಲ್ಕು ಜನ ಮಹಾನೀಯರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ತಾಲೂಕು ಸಮಿತಿ ತೀರ್ಮಾನ ತೆಗೆದುಕೊಂಡಿತು.ಸಭೆಯಲ್ಲಿ ಹಾಜರಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಯ ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ ಮಾತನಾಡಿ, ಚುನಾವಣೆ ನೆಪದಲ್ಲಿ ಪೂರ್ವಭಾವಿ ಸಭೆಯನ್ನು ನೆಪಮಾತ್ರಕ್ಕೆ ಮಾಡುತ್ತಿದ್ದು ಇದು ಮಹಾನಿಯರಿಗೆ ಮಾಡುವಂತ ಅವಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

      ತಹಸೀಲ್ದಾರ್ ಸಂತೋಷ್‍ಕುಮಾರ್ ಸಮರ್ಥನೆ ಮಾಡಿಕೊಳ್ಳುತ್ತಾ, ಯಾವುದೇ ಸಭೆ ಸಮಾರಂಭಗಳು ಅದ್ಧೂರಿಯಾಗಿ ಆಚರಿಸುವಂತಿಲ್ಲ, ಸರಳವಾಗಿಯೇ ಆಚರಿಸಬೇಕಾಗಿದೆ ಎಂದು ತಿಳಿಸಿದರು. ಆದರೆ, ಪ್ರತ್ಯುತ್ತರ ನೀಡಿದ ದೊಡ್ಡಬಸಪ್ಪ, ಕಾರ್ಯಕ್ರಮವೇನು ಸರಳವಾಗಿಯೇ ಆಚರಿಸಿ. ಆದರೆ, ಪೂರ್ವಭಾವಿ ಸಭೆಯ ನಿಗಧಿತ ದಿನಾಂಕದಂದು ಬೆಳಗ್ಗೆ 10ಗಂಟೆಗೆ ಸೂಚನೆ ತಿಳಿಸಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ ತಾಲೂಕಿನಲ್ಲಿ ಒಟ್ಟು 20ಕ್ಕೂ ಹೆಚ್ಚು ಇಲಾಖೆಗಳು ಇವೆ. ಒಂದು ಇಲಾಖೆಯಿಂದ ಒಬ್ಬರು ಬಂದರೆ 20ಕ್ಕೂ ಹೆಚ್ಚು ಜನ ಸಭೆಗೆ ಹಾಜರಾಗಬೇಕು, ಕೊನೇ ಪಕ್ಷ ಇಲಾಖೆಯ ಒಬ್ಬ ಗುಮಾಸ್ತಕೂಡ ಬಂದಿಲ್ಲವೆಂದರೆ ಇದೆಂತ ಪೂರ್ವಭಾವಿ ಸಭೆ ಎಂದರಲ್ಲದೆ, ಸಭೆಗೆ ಒಬ್ಬಿಬ್ಬ ಅಧಿಕಾರಿಗಳು ಬಂದಿದ್ದಾರೆ ಎಂದು ಟೀಕಿಸಿದರು.

       ಸಭೆಯಲ್ಲಿ ಹಾಜರಿದ್ದ ಜೈನ ಸಮುದಾಯದ ಮದನ್‍ಲಾಲ್ ಜೈನ್ ಮಾತನಾಡಿ, ಬೇರೆಕಡೆ ಮಹಾವೀರ ಜಯಂತಿಯನ್ನು ಮೆರವಣಿಗೆಯ ಮೂಲಕ ಆಚರಿಸಲಾಗುತ್ತಿದೆ. ಅದರಂತೆ ನಮಗಿಲ್ಲಿ ಆಚರಿಸುವ ಅನುಮತಿ ನೀಡಬೇಕೆಂದು ವಿನಂತಿಸಿಕೊಂಡರು. ತಹಸೀಲ್ದಾರ್ ನಿರಾಕರಣೆ ಮಾಡುತ್ತ, ಜಯಂತಿಗಳು ಮತ್ತೇ ಬರುತ್ತವೆ. ಈಗ ಚುನಾವಣೆ ಇರುವುದರಿಂದ ಸಹಕರಿಸಿ ಎಂದು ಕೋರಿದರಲ್ಲದೆ, ಸಭೆಗೆ ಗೈರು ಹಾಜರಿಯಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಆದೇಶಿಸಿದರು.

        ನಂತರ ತಾ.ಪಂ.ಇಓ ಮಲ್ಲಾನಾಯ್ಕ ಮಾತನಾಡಿ, ಆಯಾ ಜಗಜೀವನರಾಮ್, ಡಾ.ಬಿ.ಆರ್.ಅಂಬೇಡ್ಕರ್, ಮಹಾವೀರ, ದೇವರ ದಾಸಿಮಯ್ಯನವರ ಜಯಂತಿಗಳನ್ನು ಆಯಾ ಕಚೇರಿಯಲ್ಲಿ ಬೆಳಿಗ್ಗೆ ಆಚರಿಸಿ, ನಂತರ ತಾಲೂಕು ಕಚೇರಿಯಲ್ಲಿ ಬೆಳಗ್ಗೆ 11ಗಂಟೆಗೆ ನಡೆಯುವ ಸರಳ ಆಚರಣೆಯಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳಬೇಕೆಂದು ತಿಳಿಸಿದರು.

      ಈ ಸಂದರ್ಭದಲ್ಲಿ ಹಸಿರು ಕ್ರಾಂತಿ ಜಗಜೀವನರಾಮ್ ಸಂಘಟನೆಯ ತಾಲೂಕು ಅಧ್ಯಕ್ಷ ಎಚ್.ಪ್ರಭು, ಡಿಎಸ್‍ಎಸ್ ಸಂಘದ ದುರುಗಪ್ಪ, ಮರಿಯಪ್ಪ, ಜಿಯಾಜಿ ಪ್ರಕಾಶ್, ಸಹಾಯಕ ಚುನಾವಣಾಧಿಕಾರಿ ಜಹೀರಾ ಅಬ್ಬಾಸ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿನೇಶ್, ಬಿಸಿಎಂನ ಪ್ರಕಾಶ್ ಕೊರ್ಜಿ ಹಾಗೂ ಮಾಲತೇಶ್, ದೈಹಿಕ ಶಿಕ್ಷಣಾಧಿಕಾರಿ ಕೆ.ವಿ.ಎಂ.ನಾಗಭೂಷಣ ಮತ್ತಿತರರು ಇದ್ದರು.
ಟೈಪಿಟ್ಸ್ ಗುರುಬಸವರಾಜ್ ಹಾಗೂ ಮಂಜುನಾಥ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap