ರಸ್ತೆ ಅಗಲೀಕರಣಕ್ಕೆ ಚಾಲನೆ

0
16

ತುರುವೇಕೆರೆ:

          ಪಟ್ಟಣದ ದೆಬ್ಬೇಘಟ್ಟ ರಸ್ತೆ ಅಗಲಿಕರಣ ಹಾಗೂ ಅಭಿವೃದ್ದಿಗಾಗಿ ಅರಣ್ಯ ಇಲಾಖೆವತಿಯಿಂದ ಗುರುವಾರ ರಸ್ತೆ ಪಕ್ಕದಲ್ಲಿದ್ದ ಮರಗಳನ್ನು ತೆರವುಗೊಳಿಸುವ ಮೂಲಕ ಜಾಲನೆ ಸಿಕ್ಕಿದಂತೆ ಕಾಣುತ್ತಿದೆ.

          ಕಳೆದೆರೆಡು ವರ್ಷಗಳ ಹಿಂದೇ 4 ಕೋಟಿ ವ್ಯಚ್ಚದಲ್ಲಿ ಪಟ್ಟಣದ ತಿಪಟೂರು ರಸ್ತೆ ತಿರುವಿನಿಂದ ಸುಮಾರು 1960 ಮೀಟರ್ ರಸ್ತೆ ಅಭಿವೃದ್ದಿಗಾಗಿ ಹಣ ಬಿಡುಗಡೆಯಾಗಿ ಭೂಮಿ ಪೂಜೆಯ ಸಹ ಮಾಡಲಾಗಿತ್ತು. ಆದರೆ ರಸ್ತೆ ಪಕ್ಕದಲ್ಲಿರುವ ಮರಗಳು, ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಹಾಗೂ ಕೆಲವು ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದ್ದರಿಂದ ರಸ್ತ ಅಭಿವೃದ್ದಿ ನೆನೆಗುದಿಗೆ ಬಿದ್ದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿತ್ತು.

        ದಿನ ನಿತ್ಯ ದಬ್ಬೇಘಟ್ಟ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ನಡೆಸಲು ತುಂಬ ತೊಂದರೆ ಅನುಭಿಸುವಂತಾಗಿದೆ ಎಂದು ಹಲವಾರು ಸಾರ್ವಜನಿಕರು ನೂತನ ಶಾಸಕರಾದ ಮಸಾಲ ಜಯರಾಮ್‍ರಿಗೆ ಮನವಿ ಮಾಡಲಾಗಿತ್ತು. ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸಲು ಟೆಂಡರ್ ಮೂಲಕ ಗುತ್ತಿಗೆ ಸುಮಾರು 2.90 ಲಕ್ಷ ರೂಗಳಿಗೆ ನೀಡಿದ್ದು ಗುರುವಾರದಿಂದ ಪಟ್ಟಣದಲ್ಲಿ ರಸ್ತೆ ಪಕ್ಕದಲ್ಲಿರುವ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

           ಪಟ್ಟಣದಲ್ಲಿ 13.57 ಮೀಟರ್: ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಮದ್ಯ ಭಾಗದಿಂದ 13.57 ಮೀಟರ್ ರಸ್ತ ಅಗಲಿಕರಣವಾಗಲಿದೆ ಈಗಾಗಲೇ ಅರಣ್ಯ ಇಲಾಖೆ ಮರಗಳನ್ನು ತೆರವುಗೊಳಿಸುತ್ತಲಿದ್ದು, ಬೆಸ್ಕಾಂ ಇಲಾಕೆ ವಿದ್ಯುತ್ ಕಂಬಗಳು ಹಾಗೂ ಪಟ್ಟಣ ಪಂಚಾಯ್ತಿ ರಸ್ತೆ ಪಕ್ಕದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here