ಬಿಜೆಪಿ ವತಿಯಿಂದ ಸಂತಾಪ

ಜಗಳೂರು :

        ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂದೀಯ ವ್ಯವಹಾರಗಳ ಸಚಿವರಾದ ಆನಂತ್‍ಕುಮಾರ್ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸಂತಾಪ ಸೂಚಿಸಲಾಯಿತು.

       ಪಟ್ಟಣದ ಶಾಸಕ ಎಸ್.ವಿ.ರಾಮಚಂದ್ರ ನಿವಾಸದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸಚಿವ ಆನಂತ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಂಬನಿ ಮಿಡಿದರು.

         ಈ ವೇಳೆ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ ಮಾತನಾಡಿ ರಾಷ್ಟ್ರಕಂಡ ಅಪ್ರತಿಮ ಮಹಾನ್ ನಾಯಕ. ವಿದ್ಯಾರ್ಥಿ ದಿಸೆಯಲ್ಲಿಯೇ ಹೋರಾಟವನ್ನು ಮಾಡಿದ್ದು ಇದಕ್ಕೆ ಅವರು ಎಬಿವಿಪಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದು ಸಾಕ್ಷಿ. ರಾಜ್ಯದ ಬಿಜೆಪಿ ಅಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆರು ಭಾರಿ ಸಂಸದರಾಗಿ, ಆಯ್ಕೆಯಾಗಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಸಮಸ್ಯೆ ಬಂದರೂ ಕೇಂದ್ರದಲ್ಲಿ ಮಂಡಿಸಿ ಅವುಗಳ ಪರಿಹಾರಕ್ಕೆ ಮುಂದಾಗುತ್ತಿದ್ದರು ಎಂದು ಹೇಳಿದರು.

          ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ಕೆ.ಮಂಜುನಾಥ್ ಮಾತನಾಡಿ ರೈತರಿಗೆ ರಾಸಾಯನಿಕ ರಸಗೊಬ್ಬರ ಸಮಸ್ಯೆಯಲ್ಲಿ ಬೇವುಲೇಪಿತ ಯುರೋಗೊಬ್ಬರ ಪ್ರಾರಂಬಿಸಿ ಅದರ ದುರುಪಯೋಗವಾದಂತೆ ಕಡಿಮೆದರದಲ್ಲಿ ರೈತರಿಗೆ ಸಮರ್ಪಕವಾಗಿ ವಿತರಿಸುವ ವ್ಯವಸ್ಥೆ ಜಾರಿಗೊಳಿಸಿದ್ದರು. ಬಡವರ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಹೃದಯ ಸಂಬಂಧಪಟ್ಟ ಸ್ಟಂಟ್ ಅಳವಡಿಕೆ, ಮಂಡಿಚಿಪ್ಪು ಅಳವಡಿಕೆಯನ್ನು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು. ಆನಂತಕುಮಾರ್ ಅವರನ್ನು ಕಳೆದುಕೊಂಡು ರಾಜ್ಯ ಬಡವಾಗಿದೆ ಎಂದರು.

         ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯದರ್ಶಿ ಜೆ.ವಿ.ನಾಗರಾಜ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಪಟ್ಟಣ ಪಂಚಾಯ್ತಿ ಸದಸ್ಯ ಎಂಎಲ್‍ಎ ತಿಪ್ಪೇಸ್ವಾಮಿ, ಪಾಪಲಿಂಗ, ಸಿದ್ದಪ್ಪ, ದೇವಿಕೆರೆ ಶಿವಕುಮಾರಸ್ವಾಮಿ, ಮಹಮದ್‍ಗೌಸ್, ಸ್ಲಂ ಮೋರ್ಚದ ಅಧ್ಯಕ್ಷ ಓಬಳೇಶ್, ಮುಖಂಡರಾದ ಅಫೀಜ್, ರುದ್ರೇಶ್, ರಮೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap