ಎಚ್.ಎನ್.ಅನಂತಕುಮಾರ್‍ರವರಿಗೆ ಭಾವಪೂರ್ಣ ಶ್ರದ್ದಾಂಜಲಿ

ಹರಪನಹಳ್ಳಿ:

      ಕೇಂದ್ರ ಸರಕಾರದ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ರಾಸಾಯನಿಕ ರಸಗೊಬ್ಬರ ಖಾತೆ ಸಚಿವರು ಮತ್ತು ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಅನಂತಕುಮಾರವರ ನಿಧನಕ್ಕೆ ತಾಲೂಕು ಬಿಜೆಪಿ ಕಚೇರಿಯಲ್ಲಿ ಸೋಮುವಾರ ಒಂದು ನಿಮಿಷ ಮೌನಾಚರಣೆ ಮಾಡಿ, ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.

      ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ .ಲಕ್ಷ್ಮಣರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾಪಕ್ಷ ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಕೊಡುಗೆ ಅಪಾರವಾದದ್ದು, ಅವರು ಆರು ಬಾರಿ ಸಂಸದರಾಗಿ, ವಾಜಪೆಯಿರವರ ಅವಧಿಯಲ್ಲಿ ಸಚಿವರಾಗಿ, ಪ್ರಸ್ತುತ ನರೇಂದ್ರಮೋದಿಯವರ ಸರಕಾರದಲ್ಲಿ ಸಚಿವರಾಗಿ ನಮ್ಮ ದೇಶದ ಎಲ್ಲಾ ವರ್ಗದ ಜನರ ಮತ್ತು ರೈತರ ಆಶಾಕಿರಣವಾಗಿದ್ದರು. ಅವರ ಅಗಲಿಕೆಯಿಂದ ಭಾರತೀಯ ಜನತಾ ಪಕ್ಷಕ್ಕೆ ಹಾಗೂ ದೇಶಕ್ಕೆ ತುಂಬಲಾರದ ನಷ್ಠವಾಗಿದೆ ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಂ.ಪಿ.ನಾಯ್ಕ, ತಾಲೂಕು ಬಿಜೆಪಿ ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ, ನಿಟ್ಟೂರು ಸಣ್ಣ ಹಾಲಪ್ಪ, ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ತಾಪಂ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ, ಲೋಕೇಶ್, ರಾಘವೇಂದ್ರಶೆಟ್ಟಿ, ಆರ್.ಗಂಗಮ್ಮ, ಜಿ.ಎಂ.ರೇಖಾ, ನಾಗರಾಜ, ಕೃಷ್ಣ, ಸೇರಿದಂತೆ ಮತ್ತಿತರರು ಇದ್ದರು.

ವಿವಿಧ ಗಣ್ಯರ ಸಂತಾಪ:

        ದೇಶದ ಸಜ್ಜನರಾಜಕಾರಣಿಯಾಗಿರುವ ಧಿಮಂತ ನಾಯಕರಾಗಿದ್ದ ಅನಂತಕುಮಾರ್‍ರವರು ಜನಮಾನಸದಲ್ಲಿ ಹೆಸರನ್ನು ಮಾಡಿದ್ದಾರೆ. ಬಿಜೆಪಿ ಪಕ್ಷದ ಬಲವರ್ಧನೆಗೆ ಬಹುಪ್ರಮುಖ ಪಾತ್ರವಹಿಸಿದ್ದಾರೆ. ಅಂತಹ ನಾಯಕನ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
ಜಿ.ಕರುಣಾಕರರೆಡ್ಡಿ, ಶಾಸಕರು, ಹರಪನಹಳ್ಳಿ

        ಕಳೆದ 22 ವರ್ಷಗಳಿಂದ ಸಂಸದರಾಗಿ, ಕೇಂದ್ರ ಮಂತ್ರಿಯಾಗಿ, ದೇಶದ ಸೇವೆಯನ್ನು ಮಾಡುವುದರ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ದೇಶದ ಉದ್ದಗಲಕ್ಕೆ ಚಾಚಿದ ಮುತ್ಸದ್ದಿ ರಾಜಕಾರಣಿಯಾಗಿರುವ ಎಚ್.ಎನ್.ಅನಂತಕುಮಾರ್‍ರವರು ಬಾನಲ್ಲಿ ಉದಯಿಸಿ, ಬಾನಂಗಳದ ಪಶ್ಚಿಮ ದಿಕ್ಕಿನ ಕೊನೆಯಲ್ಲಿ ಅಸ್ತಂಗತನಾಗುವ ಸೂರ್ಯನಂತೆ ಅನಂತದಲ್ಲಿ ಅನಂತವಾದರು ಅನಂತಕುಮಾರರು. ಭಾರತಾಂಭೆ ತನ್ನೊಬ್ಬ ಮಗನನ್ನು ಕಳೆದುಕೊಂಡಂತಾಗಿದೆ. ಚಿರನಿದ್ರೆಯಲ್ಲಿ ಸ್ಥೀರವಾದ ಅನಂತಕುಮಾರರ ಅಂತ್ಯ ಇದಾಗಿದ್ದರೂ ಇದು ಅವರ ಭೌತಿಕ ದೇಹಕ್ಕೆ ಮಾತ್ರ ಸಂಬಂಧಿಸಿದ್ದು. ನಮ್ಮೆಲ್ಲರ ನೆನಪಿನಂಗಳದಲ್ಲಿ ಭಾರತಾಂಬೆಯ ಸೇವೆ ಮಾಡಿದ ನೆನಪಿನ ಸುಳಿಯಲ್ಲಿ ಇವರು ಅಮರರಾಗಿದ್ದಾರೆ. ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಸಮಸ್ತ ಬಂಧುಗಳ ಪರವಾಗಿ ಪ್ರಾರ್ಥಿಸಿದರು.ಶ್ರೀ ವರಸದ್ಯೋಜಾಥ ಶಿವಾಚಾರ್ಯರು, ತೆಗ್ಗಿನಮಠ, ಹರಪನಹಳ್ಳಿ

       ಮೌಲ್ಯವಾದ ವ್ಯಕ್ತಿತ್ವಗಳನ್ನು ಹೊಂದಿರುವ ಭಾರತೀಯ ಜನತಾ ಪಕ್ಷ ಅಂಥವರಲ್ಲಿ ಒಬ್ಬರಾದ ಅನಂತಕುಮಾರ್ ಅವರನ್ನು ಇಂದು ಕಳೆದುಕೊಂಡಿದೆ. ಇದು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅತೀವ ನೋವನ್ನು ತಂದಿದೆ, ಬಿಜೆಪಿಯ ಪ್ರೇರಕರಾಗಿ ಮತ್ತೊಮ್ಮೆ ಹುಟ್ಟಿ ಬರಲಿ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಕ್ಕೆ ಕರುಣಿಸಲಿ.
ಸುವರ್ಣ ಅರುಂಡಿ ನಾಗರಾಜ, ಜಿಪಂ ಸದಸ್ಯರು, ಹಲುವಾಗಲು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap