ಸದಾನಂದ ಗೌಡರಿಗೆ ಬೆ.ಉತ್ತರದ ಟಿಕೆಟ್ ಕೈತಪ್ಪುವ ಸಾದ್ಯತೆ…!!!

0
74

ಬೆಂಗಳೂರು;

     ಕೇಂದ್ರ ಸಚಿವ ಹಾಗೂ ಹಿರಿಯ ಮುಖಂಡ ಡಿ.ವಿ. ಸದಾನಂದ ಗೌಡ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಿವೆ.

    ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ. ಚಂದ್ರಶೇಖರ್ ಅವರನ್ನು ನಗರದ ಬಹುತೇಕ ಮುಖಂಡರು ಬೆಂಬಲಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಹ ಚಂದ್ರಶೇಖರನ್ ಬಗ್ಗೆ ಒಲವು ಹೊಂದಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಚಂದ್ರಶೇಖರ್ ಅವರಿಗೆ ಸೂಚಿಸಿದ್ದಾರೆ.

     ಹೀಗಾಗಿ ಮುಖಂಡರು ಮತ್ತು ಚಿಂತಕರ ಸಭೆ ನಡೆಸುತ್ತಿರುವ ಚಂದ್ರಶೇಖರ್. ತಮಗಿರುವ ಬೆಂಬಲ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ . ನಗರದ ಖಾಸಗಿ ಕ್ಲಬ್ ನಲ್ಲಿಂದು ಭವಿಷ್ಯದ ಭಾರತ ಕಾರ್ಯಕ್ರಮದ ಹೆಸರಿನಲ್ಲಿ ನಡೆದ ಸಭೆಯಲ್ಲಿ ಹಲವು ಬಿಜೆಪಿ ನಾಯಕರು, ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಮಾತನಾಡಿ,ಈಗಾಗಲೇ ನೀವು ಯೋಗಿ ಆದಿತ್ಯನಾಥ್ ಪುಸ್ತಕ ಬರೆದು ಜನಪ್ರಿಯರಾಗಿದ್ದೀರಿ. ನೇರವಾಗಿ ದೆಹಲಿ ಕಡೆ ನೋಡುತ್ತ ಇದ್ದೀರಿ. ಈ ಪ್ರಯತ್ನದಲ್ಲಿ ನೀವು ನಿಜಕ್ಕೂ ಯಶಸ್ವಿ ಆಗುತ್ತೀರಿ ಎಂದರು.

       ನೀವು ಮೊದಲ ಬಾರಿಗೆ ಪಾರ್ಲಿಮೆಂಟ್ ಗೆ ಹೋದರೆ ಭವಿಷ್ಯದ ಭಾರತ ವಿಷಯಗಳನ್ನ ನೀವು ಸದನದಲ್ಲಿ ಪ್ರಸ್ತಾಪ ಮಾಡಿ ಎಂದು ಅಬ್ದುಲ್ ಅಜೀಂ ಹೇಳಿದರು.ವಕ್ಕಲಿಗರ ಸಂಘದ ಅಧ್ಯಕ್ಷ ಪ್ರೊ ನಾಗರಾಜ್ ಮಾತನಾಡಿ, ಸದಾನಂದ ಗೌಡರು ವಕ್ಕಲಿಗ ಸಮುದಾಯದ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here