ಸಾಹಿತ್ಯ-ಸಂಸ್ಕಾರಗಳಿಂದ ವಿದ್ಯಾರ್ಜನೆ ಪರಿಪೂರ್ಣ

0
12

ದಾವಣಗೆರೆ :

       ಚಿನ್ನದ ಪದಕ, ಹೆಚ್ಚಿನ ಅಂಕಪಟ್ಟಿ, ರ್ಯಾಂಕ್ ಆದರ್ಶ ವಿದ್ಯಾರ್ಥಿಗಳಿಗೆ ಪ್ರತಿಭಾವಂತರಿಗೆ ಮಾನದಂಡವಲ್ಲ ಕಲೆ, ಸಂಸ್ಕಾರ, ಸಾಹಿತ್ಯ, ಸಂಗೀತ, ಸಂಸ್ಕತಿಗಳಿಂದ ವಿದ್ಯಾರ್ಜನೆಗೆ ಪರಿಪೂರ್ಣತೆ ಬರುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ವಾಮದೇವಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

       ಇಲ್ಲಿನ ಕಲಾಕುಂಚ ಕಛೇರಿ ಆವರಣದ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿಯೋಜಿತ ದಾವಣಗೆರೆ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ಮಕ್ಕಳ ಆಯ್ಕೆ ಪ್ರಕ್ರಿಯೆಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು.

       ಮಕ್ಕಳು ಆದರ್ಶವಿದ್ಯಾಥಿಗಳಾಗುತ್ತಾರೆ, ಕವನ ರಚನೆಗೆ ವಿಷಯ ಸಂಗ್ರಹ, ನಿರಂತರ ಅಧ್ಯಯನ ಮತ್ತು ಭಾಷಾ ಪಾಂಡಿತ್ಯ ಸಮಯೋಚಿತ ಶಬ್ದ ಪ್ರಯೋಗ, ಪ್ರಾಸ ಹೀಗೆ ಎಲ್ಲಾ ಆಯಾಮಗಳ ಪರಿಶ್ರಮದಿಂದ ಕವನ ಸೃಷ್ಟಿಸಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸದ ಹಂತದಲ್ಲೇ ಮಕ್ಕಳಲ್ಲಿ ಕನ್ನಡ ನಾಡು, ನುಡಿ, ಇತಿಹಾಸ, ಪರಂಪರೆಗಳ ಸಾಹಿತ್ಯ ಸಂಸ್ಕøತಿಗಳ ಅರಿವು, ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಕಲಾಕುಂಚ ಸಂಸ್ಥೆಯ ಸಾಧನೆ ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.

        ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ತಮಗರಿವಿಲ್ಲದೇ ಅನೇಕ ಪ್ರತಿಭೆಗಳು ಹುದುಗಿರುತ್ತದೆ. ಹಿಂಜರಿಕೆ ಕೀಳರಿಮೆ ಬಿಟ್ಟು ಧೈರ್ಯದಿಂದ ಸಿಕ್ಕ ಅವಕಾಶ ವೇದಿಕೆಗಳನ್ನು ಸದ್ಭಳಕೆ ಮಾಡಿಕೊಳ್ಳುವುದು ಜಾಣತನ. ಬರವಣಿಗೆ ನಿಂತ ನೀರಾಗದೇ ಹರಿಯುವ ನದಿಯಾಗಬೇಕು, ಸಾಹಿತ್ಯ ರಚನೆಗೆ ತಮ್ಮದೇ ಆದ ಬದ್ದತೆ ಇಟ್ಟುಕೊಂಡು ಮಕ್ಕಳ ಓದಿನೊಂದಿಗೆ ಸಾಹಿತ್ಯ, ಸಂಗೀತದ ಹವ್ಯಾಸವನ್ನು ಬೆಳೆಸಿಕೊಂಡರೆ ಮುಂದೊಂದು ದಿನ ಮಹಾನ್ ಸಾಹಿತಿಗಳು ಕವಿಗಳು ಆಗಲು ಸಾಧ್ಯ ಎಂದರು.

       ಮುಖ್ಯ ಅತಿಥಿಗಳಾಗಿ ತೀರ್ಪುಗಾರರಾಗಿ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷರೂ ತ್ರಿಭಾಷಾ ಪಂಡಿತರೂ ಆದ ಕೆ.ಎನ್.ಸ್ವಾಮಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್ ಉಪಸ್ಥತರಿದ್ದರು. ಶೈಲಾ ವಿಜಯಕುಮಾರ್‍ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿದರು, ಕವನ ವಾಚನ, ಕನ್ನಡ ನಾಡು-ನುಡಿ ಬಗ್ಗೆ ಪ್ರಶ್ನೋತ್ತರ ಸಂದರ್ಶನದೊಂದಿಗೆ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿಗೆ ಮಕ್ಕಳನ್ನು ಆಯ್ಕೆ ಮಡಲಾಯಿತು. ಕುಸುಮಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಬಿ.ಶಾಂತಪ್ಪ ಪೂಜಾರಿ, ಅನ್ನಪೂರ್ಣ ಪಾಟೀಲ್ ಉಪಸ್ಥಿತರಿದ್ದರು ಕೊನೆಯಲ್ಲಿ ಎಂ.ಎಸ್.ಪ್ರಸಾದ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here