ಆವಿಷ್ಕಾರ ಸಂಘಟಿತ 8ನೇ ಬಳ್ಳಾರಿ ಸಾಂಸ್ಕೃತಿಕ ಜನೋತ್ಸವ

ಬಳ್ಳಾರಿ:

        ಇಂದು ಆವಿಷ್ಕಾರ ಹಾಗೂ ಎಐಡಿಎಸ್‍ಓ, ಎಐಡಿವೈಓ, ಎಐಎಂಎಸ್‍ಎಸ್ ಸಂಘಟನೆಗಳು ಸಂಘಟಿತ 8ನೇ ಬಳ್ಳಾರಿ ಸಾಂಸ್ಕತಿಕ ಜನೋತ್ಸವದ ಅಂಗವಾಗಿ ಸಿನಿಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಗಾಂಧಿ ಭವನದಲ್ಲಿ ನಡೆಯಿತು. ಕನ್ನಡ ಚಲನಚಿತ್ರ ‘ಮಾರ್ಚ್ 22’ ಅನ್ನು ಪ್ರದರ್ಶಿಸಲಾಯಿತು.

         ಸಂವಾದವನ್ನು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕರಾದ ಸೋಮಶೇಖರ ಗೌಡ ನಡೆಸಿಕೊಟ್ಟರು. ಅವರು ಮಾತನಾಡುತ್ತಾ “ ಮಾರ್ಚ್ 22 ಸಿನಿಮಾ ಕೋಮು ಸಾಮರಸ್ಯವನ್ನು ಬಿಂಬಿಸುವಂತ ಸಿನಿಮಾವಾಗಿದ್ದು, ದೇಶದ ಈಗಿನ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಈ ಸಿನಿಮಾದ ಕಥೆಯಲ್ಲಿ ಒಂದು ಹಳ್ಳಿಯಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಹಿನ್ನಲೆಯಲ್ಲಿ ಹಿಂದು ಹಾಗೂ ಮುಸಲ್ಮಾನ ಧರ್ಮಗಳ ಜನರ ನಡುವೆ ವಾಗ್ವಾದಗಳು, ಮನಸ್ತಾಪಗಳು ಉಂಟಾಗುತ್ತವೆ.

         ಈ ಪರಿಸ್ಥಿಯನ್ನು ಬಳಸಿಕೊಂಡು ಕೋಮು ಜ್ವಾಲೆಯನ್ನು ಹರಡಲು ಎರಡು ಧರ್ಮಗಳ ಮೂಲಭೂತ ಶಕ್ತಿಗಳು ಕಾಯುತ್ತಿರುತ್ತವೆ. ಕೊನೆಗೆ ಎರಡು ಧರ್ಮಗಳ ಪ್ರಜ್ಞಾವಂತ ಜನರು ಕೋಮು ವೈಷಮ್ಯವನ್ನು ತಡೆಯುªಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ತಮ್ಮ ಧರ್ಮವನ್ನೇ ದೊಡ್ಡದು ಮಾಡಿ, ಹೊಡೆದಾಡುವ ಬದಲು, ಎಲ್ಲರೂ ಒಟ್ಟಾಗಿ ಜೀವನದ ಗಂಭೀರವಾದ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯ ಎನ್ನುವ ಸಂದೇಶವನ್ನು ಈ ಸಿನಿಮಾ ಸಾರುತ್ತದೆ” ಎಂದರು.

         ಪ್ರಾಸ್ತಾವಿಕವಾಗಿ ಮಾತನಾಡಿದ ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ಈಶ್ವರಿ “ ಸಾಂಸ್ಕತಿಕ ಜನೋತ್ಸವದಲ್ಲಿ ಉತ್ತಮ ಸಿನಿಮಾಗಳನ್ನು ತೋರಿಸುವ ಮೂಲಕ, ಉನ್ನತ ವಿಚಾರಗಳನ್ನು ಜನರತ್ತ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಆವಿಷ್ಕಾರ ಹಾಗೂ ಇತರೆ ನಮ್ಮ ಸಂಘಟನೆಗಳು ಪ್ರಯತ್ನಿಸುತ್ತಿವೆ” ಎಂದರು.

         ಅಧ್ಯಕ್ಷತೆ ವಹಿಸಿದ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಸುರೇಶ್.ಜಿ ಮಾತನಾಡುತ್ತಾ “ ದೇಶದಲ್ಲಿಂದು ಧರ್ಮ, ಜಾತಿ ಮುಂತಾದ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ನಾಗರಿಕ ಸಮಾಜ ನಾಚಿಸುವಂತಿದೆ. ಕೋಮು ಶಕ್ತಿಗಳು ಅಟ್ಟಹಾಸಗೈಯುತ್ತಿದ್ದರೆ, ಮುಗ್ಧ ಜನರು ಬಲಿ ಪಶುಗಳಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಹಿಮ್ಮೆಟ್ಟಿಸುವುದು ತುರ್ತು ಅವಶ್ಯಕತೆಯಾಗಿದೆ” ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap