ಸಾಮೂಹಿಕ ಸತ್ಯನಾರಾಯಣ ಪೂಜೆ

0
3

ಜಗಳೂರು.

       ವೀರೇಂದ್ರ ಹೆಗ್ಗಡೆ ಸರ್ಕಾರ ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಟ್ಟು ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

          ವಾಲ್ಮೀಕಿ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಗಳೂರು ಶಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಭಾರತದ ಪರಂಪರೆ, ಸಂಸ್ಕತಿಯನ್ನು ಉಳಿಸಲು ತಾಯಂದಿರಿಂದ ಮಾತ್ರ ಸಾದ್ಯವಾಗಿದೆ. ದೇವರುಗಳಾದ ಶ್ರೀರಾಮ, ಸೀತಾ ಮಾತೆಗೆ ಶೋಧನೆ ತಪ್ಪಲಿಲ್ಲ, ಆದರೂ ಕೊನೆಗೆ ಸತ್ಯಕ್ಕೆ ಜಯವಿದೆ ಎಂಬುವುದನ್ನು ಲೋಕಕ್ಕೆ ಸಾರಿದರು. ಆದರೆ ಭ್ರಷ್ಟರು, ಅನ್ಯಾಯ, ಅಧರ್ಮ ಮಾಡುವವರನ್ನು ನೋಡಿ ನೊಂದುಕೊಳ್ಳದೇ, ಪೂರ್ವ ಜನ್ಮದ ಕರ್ಮಗಳನ್ನು ಭೂಮಿಯ ಮೇಲೆ ಅನುಭವಿಸಬೇಕು. ದೇವರ ಆರಾಧನೆಯಲ್ಲಿ ತಮ್ಮನ್ನು ತೊಡಿಗಿಸಿಕೊಂಡು ಸಂಸ್ಕಾರವುಳ್ಳವರಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

        ಈ ಸಂದರ್ಭದಲ್ಲಿ ಇಂದಿರಾ ರಾಮಚಂದ್ರ, ಪಶು ಇಲಾಖೆ ಅಧಿಕಾರಿ ಡಾ.ರಂಗಪ್ಪ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಪ್ರಾದೇಶಿಕ ನಿರ್ದೇಶಕ ಸೀತಾರಾಮ್ ಶೆಟ್ಟಿ ,ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸದಸ್ಯ ಪಿ.ಎಸ್ ಅರವಿಂದ್, ನಾಯಕ ಸಮಾಜದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್ ಸೇರಿದಂತೆ ಮತ್ತಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here