ಹರಪನಹಳ್ಳಿಗೆ ಸಂತೋಷ ಲಾಡ್ ಭೇಟಿ

0
12

ಹರಪನಹಳ್ಳಿ: `

      ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಅಗಲಿಕೆ ತುಂಬಾ ದುಃಖ ತಂದಿದೆ. ಕಾರ್ಯಕರ್ತರು ಯಾರೂ ಧೃತಿಗೇಡಬೇಡಿ, ನಾವು ನಿಮ್ಮೊಂದಿಗೆ ಇರುತ್ತೇವೆ’ ಎಂದು ಮಾಜಿ ಸಚಿವ ಸಂತೋಷ ಲಾಡ್ ಕಾರ್ಯಕರ್ತರಿಗೆ ಹೇಳಿದರು.

       ಪಟ್ಟಣಕ್ಕೆ ಶುಕ್ರವಾರ ಸಂಡೂರು ಶಾಸಕ ತುಕರಾಂ ಅವರೊಂದಿಗೆ ಭೇಟಿ ನೀಡಿದ ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

          `ರವೀಂದ್ರ ಅವರು ವಿಧಿವಶರಾದಾಗ ವಿದೇಶದಲ್ಲಿದ್ದ ಕಾರಣ ಅಂತ್ಯಕ್ರಿಯೆಗೆ ಬರಲು ಆಗಲಿಲ್ಲ. ಹಾಗಾಗಿ ಹೂವಿನ ಹಡಗಲಿಗೆ ತೆರಳಿ ತಾಯಿ ಎಂ.ಪಿ.ರುದ್ರಾಂಬ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಬಂದಿದ್ದೇನೆ. ಮಾರ್ಗಮಧ್ಯೆ ಕಾರ್ಯಕರ್ತರು, ಸ್ನೇಹಿತರು ಹರಪನಹಳ್ಳಿಗೆ ಕರೆದಿದ್ದರಿಂದ ಭೇಟಿ ಕೊಟ್ಟಿದ್ದೇನೆ ಅಷ್ಟೆ. ಇದರಲ್ಲಿ ಬೇರಾವುದೇ ಉದ್ದೇಶವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಖಂಡರಾದ ದಿವಾಕರ, ಎಂ.ಟಿ.ಸುಭಾಶ್ಚಂದ್ರ, ಪ್ರಮೋದ್, ಎಂ.ರಾಜಶೇಖರ, ರುದ್ರಪ್ಪ ಹಾಗೂ ಪುರಸಭೆ ಸದಸ್ಯರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here