ಜ 10 ರಂದು ಸರಕಾರಿ ನೌಕರರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ

0
4

ಹರಿಹರ ;

       ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ. ತಾಲ್ಲೂಕು ಶಾಖೆ ವತಿಯಿಂದ ನೌಕರರ ತಾಲ್ಲೂಕು ಮಟ್ಟದ ಸಮಾವೇಶ, ಪ್ರಜಾಸ್ನೇಹಿ ಆಡಳಿತ ಕುರಿತು ಶೈಕ್ಷಣಿಕ ಕಾರ್ಯಾಗಾರ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರವನ್ನು ಆಯೋಜಸಲಾಗದೆ. ಎಂದುಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಹೊರಕೇರಿ ಹೇಳಿದರು.

        ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಹಳೆ ಪಿ.ಬಿ.ರಸ್ತೆಯಲ್ಲಿರುವ ಭಾಗೀರಥಿ ಕನ್ವೆನ್ಷನ್ ಹಾಲ್‍ನಲ್ಲಿ ಜ 10 ರಂದು ಬೆಳಗ್ಗೆ 10.00 ಗಂಟೆಗೆ ತಾಲ್ಲೂಕು ಮಟ್ಟದ ಸಮಾವೇಶ, ಪ್ರಜಾಸ್ನೇಹಿ ಆಡಳಿತ ಕುರಿತು ಶೈಕ್ಷಣಿಕ ಕಾರ್ಯಾಗಾರ, ಹಮ್ಮಿಕೊಳ್ಳಲಾಗಿದೆ ಎಂದರು.

         ಈ ಕಾರ್ಯಕ್ರಮವನ್ನು ತಮ್ಮದೇ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮಾರಂಭವನ್ನು ಶಾಸಕ ಎಸ್.ರಾಮಪ್ಪ ಉದ್ಘಾಟಿಸಲಿದ್ದಾರೆ ಎಂದರು ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಮಾಜಿ ಸಚಿವ ಡಾ.ವೈ.ನಾಗಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಆರ್.ಚೌಡರೆಡ್ಡಿ ತೂಪಲ್ಲಿ,ಕೆ.ಅಬ್ದುಲ್ ಜಬ್ಬಾರ್, ವೈ.ಎ.ನಾರಾಯಣಸ್ವಾಮಿ,ರಘು ಆಚಾರ್,ಮೋಹನ್ ಕುಮಾರ್ ಕೊಂಡಜ್ಜಿ,ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್,ಬಿ.ಪಿ.ಹರೀಶ್, ರಮೇಶ್ ಬಾಬು,ಜಿ.ಪಂ. ಸದಸ್ಯರಾದ ಬಿ.ಎಂ.ವಾಗೀಶಸ್ವಾಮಿ, ನಿರ್ಮಲಾ ಮುಕುಂದ್, ಅರ್ಚನಾ ಬಸವರಾಜ್,ವಿ.ಡಿ ಹೇಮಾವತಿ  ಭೀಮಪ್ಪ,ತಾ.ಪಂ.ಅಧ್ಯಕ್ಷೆ ಶ್ರೀದೇವಿ ಮಂಜಪ್ಪ,ನಗರಸಭೆ ಅಧ್ಯಕ್ಷೆ ಸುಜಾತಾ ಡಿ ರೇವಣಸಿದ್ದಪ್ಪ,ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರಗೌಡ ಅಲ್ಲದೆ ನೌಕರರ ಸಂಘದ ರಾಜ್ಯ ಜಿಲ್ಲಾ ಪದಾಧಿಕಾರಿಗಳು, ತಹಸೀಲ್ದಾರ್ ರೆಹಾನ್ ಪಾಷಾ, ಸಿಪಿಐ ಈರಪ್ಪ ಎಸ್ ಗುರುನಾಥ,ಪೌರಾಯುಕ್ತೆ ಎಸ್.ಲಕ್ಷ್ಮಿ ,ಉಪ-ನೋಂದಣಿ ಅಧಿಕಾರಿ ಆರ್.ಎಲ್.ವೀಣಾ ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

       ಸಮಾರಂಭದಲ್ಲಿ ಸರ್ಕಾರಿ ನೌಕರರ ತಮ್ಮ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಟಿ ನಾಗರಾಜಪ್ಪನವರು ಪ್ರಜಾಸ್ನೇಹಿ ಆಡಳಿತ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗಣ್ಯರಿಗೆ ಸನ್ಮಾನವನ್ನು ಸಹ ನೀಡಲಾಗುವುದು ಎಂದು ಸಮಗ್ರವಾದ ಮಾಹಿತಿಯನ್ನು ನೀಡಿದರು.

           ಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ಎಂ ಉಮ್ಮಣ್ಣ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗ್ಡೆ, ರೇವಣಸಿದ್ದಪ್ಪ ಅಂಗಡಿ,ಮಲ್ಲಿಕಾರ್ಜುನ ಬೆಣ್ಣೆ, ಸಿದ್ದಲಿಂಗಪ್ಪ, ದಿನೇಶ್ ಡಿ.ಕೆ, ಇನಾಯತುಲ್ಲಾ, ನಜೀರ್ ಅಹ್ಮದ್,ಡಿ ಟಿ ಮಂಜಪ್ಪ ಜಿ ಆರ್ ಕಲ್ಲಪ್ಪ ಮಂಜುನಾಥನಿಂಗಾರೆಡ್ಡಿ, ಬಸವರಾಜಯ್ಯ, ಎಚ್.ಕೆ. ನೋಟಗಾರ್,ಈರಪ್ಪ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here