ತುಮಕೂರು: ಕಾರ್ ಹಾಗೂ ಸ್ಕೂಟರ್ ನಡುವೆ ಆಕ್ಸಿಡೆಂಟ್ :ಲೈವ್ ವಿಡಿಯೋ

0
1496

ತುಮಕೂರು

         ನಗರದ ಗಿರಿನಗರ ಬಳಿ ಭಾನುವಾರ ಸಂಜೆ ಅನುಮಾನಾಸ್ಪದವಾಗಿ ಕಾರೊಂದು ಬೆಂಗಳೂರಿನ ಎಚ್‍ಎಎಲ್ ಸಂಸ್ಥೆಯ ಸೀನಿಯರ್ ಮೇನೇಜರ್ ಕಾಂತರಾಜು ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸಮೀಪದ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಅಪಘಾತ ದೃಶ್ಯ ದಾಖಲಾಗಿದೆ.

         ಅದರ ಪ್ರಕಾರ ರಸ್ತೆ ಬದಿ ಕಾರು ನಿಲ್ಲಿಸಿಕೊಂಡಿದ್ದ ವ್ಯಕ್ತಿ, ಕಾಂತರಾಜು ಮಗಳ ಜೊತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದಂತೆ ಕಾರು ಚಲಾಯಿಒಸಿ ಡಿಕ್ಕಿ ಒಡೆದಿದ್ದಾನೆ. ಘಟನೆಯಲ್ಲಿ ಹಿಂಬದಿ ಕುಳಿತಿದ್ದ ಕಾಂತರಾಜು ಅವರ ಮಗಳು ಪೂಜಾ (15) ಸ್ಥಳದಲ್ಲೇ ಮೃತಪಟ್ಟರೆ, ಕಾಂತರಾಜು ಅವರ ಬೆನ್ನು ಮೂಳೆ ಮುರಿದಿದೆ.

        ಭಾನುವಾರ ಸಂಜೆ 6.30 ರ ಸುಮಾರಿನಲ್ಲಿ ಗಿರಿನಗರದಲ್ಲಿ ಈ ಘಟನೆ ನಡೆದಿದ್ದು, ಅಪಘಾತ ಮಾಡಿದ ಶಿವಮೊಗ್ಗದಲ್ಲಿ ನೋಂದಣಿಯಾದ ಕಾರು (ಕೆ ಎ 14 ಎನ್ 7120) ಪತ್ತೆಯಾಗಿದ್ದು ಇದು ಮಹದೇವ ಬಿ ಟಿ ಎಂಬುವರಿಗೆ ಸೇರಿದೆ ಎಂದು ತಿಳಿದು ಬಂದಿದೆ , ಪೊಲೀಸರು ವಶಕ್ಕೆ ಪಡೆದಿದ್ದಾರೆ.

        ಆದರೂ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಹಾಗೂ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿ ಎಚ್‍ಎಎಲ್ ಸಂಸ್ಥೆಯ ನೂರಾರು ಸಿಬ್ಬಂದಿ ಬೆಂಗಳೂರಿನಿಂದ ಬಂದು ನಗರದಲ್ಲಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು ಎಂದು ಎಸ್ಪಿ ಡಾ. ವಂಶಿಕೃಷ್ಣರನ್ನು ಒತ್ತಾಯಿಸಿದರು.

        ಭಾನುವಾರ ಸಂಜೆ ಅಪಘಾತ ನಡೆದರೂ, ಪೊಲೀಸರು ಪ್ರಕರಣ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ದುರುದ್ದೇಶದಿಂದ ಪ್ರಕರಣದಲ್ಲಿ ಆರೋಪಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here