ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗೆ ಮತನೀಡಿ:-ರಾಜೀವ್

ಹಗರಿಬೊಮ್ಮನಹಳ್ಳಿ:

       ಸಮಾಜದಲ್ಲಿ ಕುತಂತ್ರಿಗಳಿರುವವರೆಗೂ ಸಮಾಜ ಅಭಿವೃದ್ಧಿಯಾಗಲು ಬಿಡುವುದಿಲ್ಲ, ಅಂತಹ ಕುತಂತ್ರಿ ರಾಜಕಾರಣಿಗಳು ಬಳ್ಳಾರಿಯಲ್ಲಿ ಇಂದಿಗೂ ಇದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಜೆ.ಶಾಂತರವರನ್ನು ಗೆಲ್ಲಿಸಿ ಎಂದು ಬೆಳಗಾಂ ಜಿಲ್ಲೆಯ ಕುಡುಚಿ ಶಾಸಕ ರಾಜೀವ್ ಕರೆ ನೀಡಿದರು.

        ಅವರು ತಾಲೂಕಿನ ಮರಬ್ಬಿಹಾಳ್ ಗ್ರಾಮದಲ್ಲಿ ಮಂಗಳವಾರ ಜೆ.ಶಾಂತಾರವರ ಪರ ಬಹಿರಂಗವಾಗಿ ಮತಯಾಚಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಾಮುಲುರವರನ್ನು ನೋಡಿರುವ ನನಗೆ ಅವರ ಸ್ವಾಭಿಮಾನ ಮತ್ತು ಗುಂಡಾಗಿರಿಯ ವಿರುದ್ಧ ಹೋರಾಡಿದ ಅವರ ದಿಟ್ಟತನವನ್ನು ಕಂಡು ನಾನು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದೇನೆ ಎಂದರು. ಜಿಲ್ಲಾ ಅಭಿವೃದ್ಧಿ ಆಗಿಲ್ಲವೆಂದು ಹೇಳುವ ಕಾಂಗ್ರೆಸ್‍ನವರು 60ವರ್ಷಗಳ ಕಾಲ ಜಿಲ್ಲೆಯನ್ನು ಅಭಿವೃದ್ಧಿ ಮಾಡದೆ ಕುಳಿತಿದ್ದರಲ್ಲ ಅವರಿಗೆ ಏನನ್ನಬೇಕು. ಒಬ್ಬರ ಬಗ್ಗೆ ಟೀಕೆಮಾಡುವಾಗ ತಾವು ಏನು ಮಾಡಿದ್ದೇವೆ ಎನ್ನುವುದನ್ನು ಸೂಕ್ಷ್ಮವಾಗಿ ಯೋಚಿಸಬೇಕು ಎಂದರು.

        ಈ ಚುನಾವಣೆ ನಿಜವಾಗಿಯೂ ಪ್ರತಿಷ್ಠೆಯಾಗಿದ್ದು, ದೇಶದ ಜನತೆಯು ಜಿಲ್ಲೆಯತ್ತ ನೇರನೋಟ ಇದೆ. ದೇಶದ ಹಿತಕ್ಕಾಗಿ ಮತ್ತು ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ. ನರೇಂದ್ರ ಮೋದಿಯವರನ್ನು ಅಮೇರಿಕದಂತ ಮುಂದುವರೆದ ರಾಷ್ಟ್ರಗಳು ಕೊಂಡಾಡುತ್ತಿರುವಾಗ ನಮ್ಮ ದೇಶದ ಜನರು ಕೂಡ ಅಭಿವೃದ್ಧಿಗೆ ಮಾನ್ಯತೆ ನೀಡುತ್ತಾರೆ. ಜಿಲ್ಲೆಯಲ್ಲಿ ಶ್ರೀರಾಮುಲು ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ದೇಶದಲ್ಲಿ ನರೇಂದ್ರ ಮೋದಿಯವರ ಜನಪ್ರೀಯತೆಯನ್ನು ನಿಯಂತ್ರಿಸಲು ಮತ್ತು ಕುತಂತ್ರದಿಂದ ಕಟ್ಟಿಹಾಕಲು ಎಲ್ಲಾ ಕೆಟ್ಟ ಶಕ್ತಿಗಳು ಒಂದಾಗಿವೆ ಎಂದು ಟೀಕಿಸದರು. ಏನೇ ಆಗಲಿ ಎಲ್ಲಾ ಕೆಟ್ಟ ಶಕ್ತಿಗಳನ್ನು ಮೆಟ್ಟಿನಿಂತು ಬಿಜೆಪಿ ಧ್ವಜಾ ಹಾರಿಲಿದೆ ಎಂದರು.

      ಅಭ್ಯರ್ಥಿ ಜೆ.ಶಾಂತಾರವರು ಮಾತನಾಡಿ, ನಿಮ್ಮ ಮನೆಮಗಳು ನಿಮ್ಮ ಮನೆಗೆ ಪುನಃ ಬಂದಿದ್ದೇನೆ ಕೈಹಿಡಿದು ಲೋಕಸಭೆಗೆ ಆಯ್ಕೆಮಾಡಿಕಳಿಸಿ ಎಂದು ಮತಯಾಚಿಸಿದರು.

        ಮಾಜಿ ಶಾಸಕ ನೇಮಿರಾಜ್‍ನಾಯ್ಕ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಬಿ.ಜೆ.ಪಿ ಸಾಕಷ್ಟು ಅನುದಾನ ಬಿಡುಗಡೆಮಾಡಿತ್ತು. ಅದನ್ನು ಬಳಸಿಕೊಳ್ಳಲಾಗದೆ ಕೈಚೆಲ್ಲಿರುವ ಶಾಸಕರಿಗೆ ಏನು ಹೇಳಬೇಕು. ನೀರಾವರಿ, ರಸ್ತೆಗಳ ಅಭಿವೃದ್ಧಿ, ಶಿಕ್ಷಣಕ್ಕೆ ಹೆಚ್ಚೆಚ್ಚು ಒತ್ತು ನೀಡುವ ಮೂಲಕ ಕ್ಷೇತ್ರದ ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತ ಸರ್ಕಾರ ಬಿಜೆಪಿ ಆಗಿತ್ತು. ಆದ್ದರಿಂದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಜೆ.ಶಾಂತಮ್ಮರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

       ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ನರೆಗಲ್ ಕೊಟ್ರೇಶ್, ಜಿ.ಪಂ.ಸದಸ್ಯ ಮಲ್ಲಿಕಾರ್ಜುನಾಯ್ಕ್, ಶಾರದಮ್ಮ, ಹರಿಹರ ಮಾಜಿ ಶಾಸಕ ಹರೀಶ್, ಪುರಸಭೆ ಸದಸ್ಯ ಮೃತ್ಯುಂಜಯ ಬದಾಮಿ, ಬಿ.ಗಂಗಾಧರ, ಹುಳ್ಳಿಮಂಜುನಾಥ, ರೈತ ಮೋರ್ಚ ಪಿ.ಸೂರ್ಯಬಾಬು, ಶ್ರೀದೇವಿ, ಮುಖಂಡರು ಕಿನ್ನಾಳ್ ಸುಭಾಷ್, ಕೆ.ರೋಹಿತ್, ರಾಜಲಿಂಗಪ್ಪ, ಪ್ರಕಾಶ್ ಚಿತ್ತವಾಡ್ಗಿ, ಬಸವರಾಜ್ ಬಡಿಗೇರ್, ಸಿದ್ದರಾಜು, ಉಮಾಪತಿ ಸ್ವಾಮಿ, ಸಿದ್ದಪ್ಪ ಪುಜಾರ್, ಎಲ್.ಗಣೇಶ, ರೋಹಿತ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap