ಹಿರಿಯ ರಂಗಕರ್ಮಿ ನಿಧನ…!!

0
30

ಹಾವೇರಿ :

       ಜಿಲ್ಲೆಯ ಹಿರಿಯ ರಂಗಕರ್ಮಿ ಟಿ.ವ್ಹಿ ಕಬಾಡಿಯವರ ನಿಧನಕ್ಕೆ ವಿವಿಧ ಕಲಾ ತಂಡಗಳು ತೀರ್ವ ಸಂತಾಪ ವ್ಯಕ್ತಪಡಿಸಿವೆ.
90 ರ ದಶಕದಲ್ಲಿ ತಮ್ಮ ಅಭಿನಯ ಮತ್ತು ಸಂಘಟನೆಯ ಮೂಲಕ ಹಾವೇರಿ ಜಿಲ್ಲಾ ರಂಗ ಭೂಮಿಯನ್ನು ಶ್ರೀಮಂತಗೊಳಿಸಿದ

         ಕಬಾಡಿಯವರು ಉತ್ತಮ ನಟ ಮತ್ತು ನಿರ್ದೇಶಕರಾಗಿದ್ದರು. ಸ್ನೇಹ ಜೀವಿಯಾಗಿದ್ದ ಅವರು ಎಲ್ಲರೊಂದಿಗೆ ಬೆರೆತುಕೊಂಡು ತಮ್ಮದೇಯಾದ ರಂಗ ಪರಿವಾರವನ್ನು ಹುಟ್ಟುಹಾಕಿ ಇಲ್ಲಿಯ ರಂಗ ಚಟುವಟಿಕೆಗಳು ಜೀವಂತವಾಗಿರಲು ಕಾರಣರಾದವರೆಂದು ಸಂತಾಪ ಪ್ರಕಟಣೆ ತಿಳಿಸಿದೆ.

        ಹಾವೇರಿ, ಧಾರವಾಡ, ಶಿವಮೊಗ್ಗ, ಬೆಂಗಳೂರು ಮುಂತಾದ ಕಡೆಗಳಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನಮನ ಗೆದ್ದವರಾಗಿದ್ದರು. ಜೀವವಿಮಾ ಕಲಾ ತಂಡವನ್ನು ಕಟ್ಟಿಕೊಂಡು ಆ ಇಲಾಖೆಗೂ ಗೌರವ ಪ್ರಾಪ್ತವಾಗುವಂತೆ ಶ್ರಮಿಸಿದವರೆಂದು ಕಲಾ ತಂಡಗಳು ಹೇಳಿವೆ.

         ಕಬಾಡಿಯವರ ನಿಧನಕ್ಕೆ ಕೆ.ಇ.ಬಿ ಕಲಾ ತಂಡ, ಸ್ನೇಹ ಕಲಾವೃಂದ, ಜಿಲ್ಲಾ ಕಲಾಬಳಗ, ರಂತರಂಗ ವೇದಿಕೆ ಹಾಗೂ ಸಾಹಿತಿ ಕಲಾವಿದರ ಬಳಗ ಸಂತಾಪವನ್ನು ಸೂಚಿಸಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here