ಸೇವಾದಳವೇ ಕಾಂಗ್ರೆಸ್ ಬುನಾದಿ;ಷನ್ಮುಖಪ್ಪ

0
9

ಚಿತ್ರದುರ್ಗ:

        ಸೇವಾದಳ ಕಾಂಗ್ರೆಸ್‍ನ ಬುನಾದಿ. ಸೇವಾದಳ ಎಂದರೆ ಶಿಸ್ತಿಗೆ ಹೆಸರುವಾಸಿಯಾದುದು ಎಂದು ಕೆ.ಪಿ.ಸಿ.ಸಿ.ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಹೇಳಿದರು.

         ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಧ್ವಜಾರೋಹಣದಲ್ಲಿ ಭಾಗವಹಿಸಿ ನಂತರ ಸೇವಾದಳದ ಸಂಸ್ಥಾಪಕ ಎನ್.ಎಸ್.ಹರ್ಡೆಕರ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

        ಸೇವಾದಳ ಎಲ್ಲಯೂ ನಿಲ್ಲಬಾರದು. ಮಲ್ಲಾಡಿಹಳ್ಳಿಯಲ್ಲಿ ಸೇವಾದಳದ ಕಾರ್ಯಕರ್ತರಿಗೆ ಕಾರ್ಯಾಗಾರ ನಡೆಸುವುದಾದರೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ. ಕಾಂಗ್ರೆಸ್‍ನ ಕೆಲವು ಮುಖಂಡರುಗಳು ಸೂರ್ಯ ಹುಟ್ಟಿದಾಗಿನಿಂದ ಸಂಜೆಯತನಕ ಕಾಂಗ್ರೆಸ್‍ನಲ್ಲಿರುತ್ತಾರೆ. ರಾತ್ರಿಯಿಂದ ಬೆಳಗಿನಜಾವದವರೆಗೆ ಬಿಜೆಪಿ.ಯಲ್ಲಿರುತ್ತಾರೆ. ಆ ಕಾರಣದಿಂದಲೇ ಚಿತ್ರದುರ್ಗ ವಿಧಾನಸಭೆಯಲ್ಲಿ ನಾನು ಸೋಲಬೇಕಾಯಿತು. ಕಾಂಗ್ರೆಸ್‍ನಲ್ಲೇ ಸುಲಿಗೆ ಮಾಡುವವರು ಇದ್ದಾರೆ ಎಂದು ನೋವಿನಿಂದ ನುಡಿದರು.

         ಸೇವಾದಳ ಎಂದರೆ ಸೇವಾಮನೋಭಾವವಿರಬೇಕು. ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಈಗಿನ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ. ಮಲ್ಲಾಡಿಹಳ್ಳಿಯಲ್ಲಿ ಸೇವಾದಳದ ತರಬೇತಿ ನಡೆಸಿ ಎಲ್ಲಾ ಜಾತಿಯವರನ್ನು ಆಹ್ವಾನಿಸೋಣ. ಚಿತ್ರದುರ್ಗ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಅದಕ್ಕಾಗಿ ಮುಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾಗಿದೆ ಎಂದು ಹೇಳಿದರು.

          ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಸೈಯದ್‍ವಲಿಖಾದ್ರಿ ಮಾತನಾಡಿ ಸೇವಾದಳದ ಸಂಸ್ಥಾಪಕ ಹರ್ಡೆಕರ್‍ರವರ ವಿಚಾರ-ಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಒಂದಲ್ಲ ಒಂದು ದಿನ ಉನ್ನತ ಮಟ್ಟಕ್ಕೆ ಹೋಗಬಹುದು ಎಂದರು.
ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಅಶ್ರಫ್‍ಆಲಿ ಮಾತನಾಡುತ್ತ ಜಿಲ್ಲೆಯಾದ್ಯಂತ ಸೇವಾದಳವನ್ನು ಬಲಪಡಿಸುವುದಕ್ಕಾಗಿ ಯೂತ್ ಯಂಗ್ ಬ್ರಿಗೇಡ್ ಆರಂಭಿಸಿ ಎರಡು ತಿಂಗಳಾಗಿದೆ. ಎ.ಐ.ಸಿ.ಸಿ. ಹಾಗೂ ಕೆ.ಪಿ.ಸಿ.ಸಿ ವರಿಷ್ಟರ ಆದೇಶದಂತೆ ಕೆಲಸ ಮಾಡಬೇಕಿದೆ. ಸೇವಾದಳ ಎಂದರೆ ಶಿಸ್ತಿನ ಸಿಪಾಯಿಗಳಂತಿರಬೇಕು. ಒಂದು ಬೂತ್‍ನಲ್ಲಿ ಹತ್ತು ಮಂದಿ ಸದಸ್ಯರುಗಳನ್ನು ನೇಮಕ ಮಾಡಿ

   ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸೇವಾದಳದ ಕಾರ್ಯಕರ್ತರಿಗೆ ಸೂಚಿಸಿದರು ಮಹಡಿ ಶಿವಮೂರ್ತಿ, ಸೇವಾದಳದ ಜಿಲ್ಲಾ ಮಹಿಳಾ ಮುಖ್ಯ ಸಂಘಟಕಿ ಇಂದಿರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವಾಜ್, ನೇತ್ರಾವತಿ, ನ್ಯಾಯವಾದಿ ರವಿ, ಜಿಲ್ಲೆಯ ಎಲ್ಲಾ ಬ್ಲಾಕ್‍ನ ಅಧ್ಯಕ್ಷರು ಮತ್ತು ಮಹಿಳಾ ಸಂಘಟಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here