ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ

ಹರಿಹರ:

         ಹಾವೇರಿ ತಾಲೂಕಿನ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ.14ರಿಂದ ಎರಡು ದಿನಗಳ ಕಾಲ ನಡೆಯಲಿರುವ ಶರಣ ಸಂಸ್ಕøತಿ ಉತ್ಸವ ಹಾಗೂ ಪ್ರಪ್ರಥಮ ನೂತನ ಮಹಾರಥೋತ್ಸವಕ್ಕೆ ದಾವಣಗರೆಜಿಲ್ಲೆಯಿಂದ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಮಾಜದ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದುಜಿ.ಎಚ್. ಕೃಷ್ಣಮೂರ್ತಿಕರೆ ನೀಡಿದರು.

        ನಗರದ ರಚನಾಕ್ರೀಡಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಶಾಂತಮುನಿ ಸ್ವಾಮೀಜಿ ಅವರ ತೃತೀಯ ಸ್ಮರಣೋತ್ಸವ ಹಾಗ ಶಾಂಗಭೀಷ್ಮಚೌಡಯ್ಯ ಸ್ವಾಮೀಜಿಯ ದ್ವಿತೀಯ ಪೀಠಾರೋಹಣ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.

        ಜ.14ರಂದು ಸಂಜೆ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಕಲಾ ತಂಡಗಳಿಂದ ಕಾರ್ಯಕ್ರಮಗಳು ಹಾಗೂ ನಿಜಶರಣ ಅಂಬಿಗರಚೌಡಯ್ಯ ಅವರಜೀವನ ಚರಿತ್ರೆಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.ಜ.15ರಂದು ಬೆಳಿಗ್ಗೆ 8ರಿಂದ ಧ್ವಜರೋಹಣ, ನಾಡಿನ ವಿವಿಧ ಮಠಾಧೀಶರ ಸಮುಖದಲ್ಲಿ ಧರ್ಮಸಭೆ ನಡೆಯಲಿದೆ. ಮುಖ್ಯಮಂತ್ರಿಎಚ್ .ಡಿ.ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ಪ್ರಪ್ರಥಮ ನೂತನ ಮಹಾ ರಥೋತ್ಸವ ನಡೆಯಲಿದೆ.ರಥವು ರೂ.22ಲಕ್ಷದಲ್ಲಿ ತಯಾರಾಗಿದ್ದು, 35 ಅಡಿ ಎತ್ತರವಿದೆ.ರಥದಲ್ಲಿ ವಿವಿಧ ಮಹನೀಯರ ವಚನ ಗ್ರಂಥಗಳನ್ನು ಇರಿಸಿ ರಥೋತ್ಸವ ಮಾಡಲಾಗುವುದುಎಂದು ತಿಳಿಸಿದರು.ಕೆಂಚನಹಳ್ಳಿ ಮಹಾಂತೇಶ್, ಸಾರಥಿ ಹೊನ್ನಪ್ಪ, ಮಂಜಪ್ಪ, ರಾಟಿರಮೇಶ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap