ಶಿಕ್ಷಣ ವಂಚಿತ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿ:ಸೋಮಶೇಖರ

ಹಾವೇರಿ :

         ದುಡಿಮೆಗಾಗಿ ಪಾಲಕರು ವಲಸೆ ಹೋಗುವಾಗ ಶಿಕ್ಷಣ ವಂಚಿತ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ವಸತಿಯುತ ಋತುಮಾನ ಕೇಂದ್ರದಿಂದ ಮಾತ್ರ ಸಾಧ್ಯ ಎಂದು ಎಸ್.ಆರ್.ಬಿ.ಸಿ ನೋಡಲ್ ಅಧಿಕಾರಿ ಸೋಮಶೇಖರ ಹೇಳಿದರು.

          ಜಿಲ್ಲೆಯ ಸೇವಾಲಾಲ (ಬಾಳೂರ ತಾಂಡಾ) ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಮೂಹ ಜಲ ಸಂಪನ್ಮೂಲ ಕೇಂದ್ರ ಹಾಗೂ ಹಾವೇರಿಯ ಅರುಣೋದಯ ವಿದ್ಯಾವರ್ಧಕ ಇವರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ವಸತಿಯುತ ಋತುಮಾನ ಕೇಂದ್ರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

       ತಾಂಡಾಗಳಲ್ಲಿ ಪಾಲಕರು ದುಡಿಮೆಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ವಲಸೆ ಹೋಗುವಾಗ ಅವರ ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ರೂಡಿ ಇದೆ. ಇಂತಹ ಸಮಯದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಲು ಇಂತಹ ಕಾರ್ಯಕ್ರಮ ಪೂರಕವಾಗಿವೆ ಎಂದರು. ಮುಖ್ಯೋಪಾದಯರಾದ ಸುನೀಲ್ ಕುಂಟನಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

         ಈ ಸಂದರ್ಭದಲ್ಲಿ ಅರುಣೋದಯ ವಿದ್ಯಾವರ್ಧಕದ ಸಂಘದ ಕಾರ್ಯದಶಿಯಾದ ಬಿ.ವಿ ಪಾಟೀಲ, ಗ್ರಾ.ಪಂ ಸದಸ್ಯರಾದ ರಾಜು ಚವ್ಹಾಣ, ಮುಖಂಡರಾದ ಜಯರಾಮ ನಾಯ್ಕ, ಪರಮೇಶ್ವರಪ್ಪ ನಾಯ್ಕ, ಈರಪ್ಪ ಲಮಾಣಿ ಪ್ರೇಮಾ ಲಮಾಣಿ ಸಹಶಿಕ್ಷಕರಾದ ಕುಮಾರ ನಾಯ್ಕ ಎಂ.ಎಸ್. ಹಣಗಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap