ಶಿವಕುಮಾರಸ್ವಾಮೀಜಿಗಳ ಪುಣ್ಯ ಸ್ಮರಣೆ

ತುರುವೇಕೆರೆ:

         ಲಿಂಗೈಕ್ಯ ಸಿದ್ದಗಂಗಾ ಮಠದ ಡಾ. ಶಿವಕುಮಾರಮಹಾಸ್ವಾಮೀಜಿಯವರು ಮಹಾನ್ ಮಾನವತಾವಾದಿ. ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡಿದ ಶ್ರೀಗಳ 111 ವರ್ಷಗಳ ಸೇವೆ ಅನನ್ಯ ಎಂದು ಗೃಹ ರಕ್ಷಕ ದಳದ ಮಾಜಿ ಕಮಾಂಡರ್ ಬೋರಲಿಂಗೇಗೌಡರು ಗುಣಗಾನ ಮಾಡಿದರು.

        ಪಟ್ಟಣದ ಗೃಹರಕ್ಷಕದಳ ಕಛೇರಿ ಅವರಣದಲ್ಲಿ ಗೃಹರಕ್ಷಕ ದಳ ಏರ್ಪಡಿಸಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳ ಪುಣ್ಯ ಸ್ಮರಣಾರ್ಥ ಹಾಗೂ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಸದ್ಘತಿ ಸಿಗಲೆಂದು ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಹಾಗು ಅನ್ನದಾನ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಸದಾ ಸಮಾಜದ ಬಗ್ಗೆಯೇ ಚಿಂತನೆಯಲ್ಲಿದ್ದ ಶ್ರೀಗಳು ಪಕ್ಷಾತೀತ ಹಾಗು ಜಾತಿರಹಿತ ಸೇವೆ ಸಲ್ಲಿಸಿ ಅತ್ಯಂತ ಶ್ರೇಷ್ಟರೆನಿಸಿದ್ದಾರೆ. ಅಂತಹ ಶ್ರೀಗಳ ನೆರಳಿನಲ್ಲಿ ನಾವುಗಳು ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

        ತಹಶೀಲ್ದಾರ್ ನಹೀಂಉನ್ನೀಸಾ, ವೃತ್ತನಿರೀಕ್ಷಕ ಸಲೀಂ ಅಹಮದ್, ದೈಹಿಕಶಿಕ್ಷಕ ಎಸ್.ಕೆ.ಥಾಮಸ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಒಂದೆಡೆ ಶ್ರೀಗಳು ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿದ್ದರೆ ಇನ್ನೋಂದೆಡೆ ನಮ್ಮ ಗಡಿ ಕಾಯುವ ಸೈನಿಕರು ಮಳೆ ಬಿಸಿಲೆನ್ನದೆ ದೇಶ ರಕ್ಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅದೇ ರೀತಿ ಗೃಹರಕ್ಷಕ ದಳವೂ ಸಹ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

         ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಿಎಸ್‍ಐ ರಾಜು, ಭೂಮಾಪನ ಇಲಾಖೆಯ ಹರಿಕುಮಾರ್, ಘಟಕಾಧಿಕಾರಿಗಳಾದ ಟಿ.ಹೆಚ್. ನಂಜುಂಡಯ್ಯ, ಜೀವವಿಮಾ ಪ್ರತಿನಿಧಿ ಗಂಗಾಧರಯ್ಯ ಸೇರಿದಂತೆ ಗೃಹರಕ್ಷಕದಳದ ಸಿಬ್ಬಂದಿವರ್ಗ ಪಾಲ್ಗೋಂಡಿತ್ತು. ಶ್ರದ್ದಾಂಜಲಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap