ಐರಾವತದಲ್ಲಿ ಬೆಳ್ಳಿ ದೀಪ

0
7

ಬೆಂಗಳೂರು

         ಹೊಸಕೋಟೆ ಟೋಲ್ ಬಳಿ ಕೆಎಸ್‍ಆರ್‍ಟಿಸಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ನಡೆಸಿ ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ಗುರುವಾರ ರಾತ್ರಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿಯ ದೀಪಗಳು ವಶಪಡಿಸಿಕೊಂಡು ಚಾಲಕ ನಿರ್ವಾಹಕನನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

         ವಶಪಡಿಸಿಕೊಂಡಿರುವ ನಾಲ್ಕು ಬ್ಯಾಗ್‍ಗಳಲ್ಲಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿಯ ದೀಪಗಳು ವಾಣಿಜ್ಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ ಹೊಸಕೋಟೆ ಟೋಲ್ ಬಳಿ ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ ವಿಭಾಗೀಯ ಭದ್ರತಾ ನಿರೀಕ್ಷಕಿ ಸಿ.ಕೆ. ರಮ್ಯ,ಸಂಚಾರ ನಿಯಂತ್ರಕ ಛಲಪತಿ ಅವರು ಬಸ್ ತಡೆದು ಪ್ರಯಾಣಿಕರ ಟಿಕೆಟ್‍ಗಳನ್ನು ಪರಿಶೀಲಿಸಿ ಬಸ್ ಡಿಕ್ಕಿಯನ್ನು ತಪಾಸಣೆ ಮಾಡಲಾಯಿತು.

         ಬಸ್‍ನ ಡಿಕ್ಕಿಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದು 4 ಬ್ಯಾಗ್‍ಗಳಿಗೆ ಟ್ಯಾಗ್‍ಗಳನ್ನು ಹಾಕಿರಲಿಲ್ಲ. ಈ ಬ್ಯಾಗ್‍ಗಳ ಬಗ್ಗೆ ಚಾಲಕರು ಮತ್ತು ನಿರ್ವಾಹಕರನ್ನು ತನಿಖೆಗೊಳಪಡಿಸಿದಾಗ 699 ದೀಪಗಳಿರುವ ಮಾಹಿತಿ ನೀಡಿದ್ದಾರೆ.

         ಐರಾವತ ಕ್ಲಾಸ್ ಬಸ್‍ನಲ್ಲಿ 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಭಾಗೀಯ ತಪಾಸಣಾ ತಂಡವು ಮುನ್ನೇಚ್ಚರಿಕೆ ವಹಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತ್ಯೇಕ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ನಿಯೋಜಿಸಿ ಬಸ್‍ನ್ನು ವಿಜಯವಾಡಕ್ಕೆ ಕಳುಹಿಸಿದ್ದಾರೆ. ಬಸ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಿ ತನಿಖೆ ಕೈಗೊಳ್ಳಲಾಗಿದೆ

        ದಿಢೀರ್ ತಪಾಸಣೆ ವೇಳೆ ಅನಧಿಕೃತ ಬೆಳ್ಳಿ ದೀಪಗಳನ್ನು ವಶಕ್ಕೆ ತೆಗೆದುಕೊಂಡು ಕರ್ತವ್ಯ ಪ್ರಜ್ಞೆ ಮೆರೆದ ವಿಭಾಗೀಯ ಅಧಿಕಾರಿಗಳನ್ನು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅಭಿನಂದಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here