ಟಿಪ್ಪು ಜಯಂತಿ ಸರಳ ಆಚರಣೆಗೆ ನಿರ್ಧಾರ

0
13

ಚಿತ್ರದುರ್ಗ;

       ಜಿಲ್ಲಾ ಆಡಳಿತದಿಂದ ಹಜರತ್‍ಟಿಪ್ಪು ಸುಲ್ತಾನ್ ಜಯಂತಿಯನ್ನು ನವಂಬರ್ 10 ರಂದು ಮೆರವಣಿಗೆಇಲ್ಲದೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

         ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಮೆರವಣಿಗೆ ಇಲ್ಲದೆ ವೇದಿಕೆ ಕಾರ್ಯಕ್ರಮವನ್ನು ಮಾತ್ರ ಮಾಡಲಾಗುತ್ತಿದೆ.ಚಿತ್ರದುರ್ಗದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ನ.10 ರ ಬೆಳಗ್ಗೆ 11 ಗಂಟೆಗೆಜಯಂತಿಯನ್ನುಆಚರಣೆ ಮಾಡಲಾಗುತ್ತಿದೆಎಂದರು.

       ಕೆಲವು ಸಂಘಟನೆಗಳು ಟಿಪ್ಪುಜಯಂತಿಯನ್ನುಆಚರಣೆ ಮಾಡಬಾರದುಎಂದು ಬೇಡಿಕೆಯನ್ನು ಸಲ್ಲಿಸಿದ್ದು ಮುಂಜಾಗ್ರತಾಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.ನವಂಬರ್ 9 ರ ಬೆಳಗ್ಗೆ 6 ಗಂಟೆಯಿಂದ ನ.10 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಜಾರಿಯಲ್ಲಿದ್ದು ಈ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಸಹ ನಿಷೇಧಿಸಲಾಗಿದೆಎಂದರು.
ಕೆಲವು ಮದ್ಯದ ಅಂಗಡಿಯವರು ನಿಷೇಧಾಜ್ಞೆ ಇದ್ದಾಗಲೂ ಮಾರಾಟ ಮಾಡಿದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ.ಆದರೆ ನಿಷೇಧಾಜ್ಞೆಯು ಮದುವೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಇದುಅನ್ವಯವಾಗುವುದಿಲ್ಲ.

       ಜಿಲಾ ರಕ್ಷಣಾಧಿಕಾರಿ ಡಾ; ಕೆ.ಅರುಣ್ ಮಾತನಾಡಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಆರ್.ಪಿ.ಸೇರಿದಂತೆ ಸಿಅರ್‍ಪಿಎಪ್ ತುಕಡಿಗಳು ಆಗಮಿಸಲಿದ್ದುಅಗತ್ಯವಿರುವ ಕಡೆ ಚೆಕ್‍ಪೋಸ್ಟ್‍ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಮುಂಜಾಗ್ರತಾಕ್ರಮವಾಗಿ ಇಲ್ಲಿಯವರೆಗೆ ಯಾರನ್ನು ಬಂಧಿಸಿರುವುದಿಲ್ಲ ಎಂದರು.

ನಿಷೇಧಾಜ್ಞೆಜಾರಿ

        ಜಿಲ್ಲೆಯಾದ್ಯಂತ ನವಂಬರ್ 10 ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆ ಸಂಬಂಧ ಜಯಂತಿ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರ ನೆಮ್ಮದಿ ಮತ್ತು ಆಸ್ತಿಪಾಸ್ತಿಗಳಿಗೆ ದಕ್ಕೆಯಾಗದಂತೆ, ಅಹಿತಕರ ಘಟನೆಗಳು ನಡೆಯದಂತೆ, ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಿಆರ್‍ಪಿಸಿ ಕಲಂ 144 ರರೀತ್ಯ ನವಂಬರ್ 9 ರ ಬೆಳಿಗ್ಗೆ 6 ಗಂಟೆಯಿಂದ ನವಂಬರ್ 10 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಾರಿಗೆ ಬರುವಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್‍ ಆದೇಶ ಹೊರಡಿಸಿದ್ದಾರೆ.

       ನಿಷೇಧಾಜ್ಞೆ ಸಮಯದಲ್ಲಿ  ಐದು ಅಥವಾ ಐದಕ್ಕಿಂತ ಹೆಚ್ಚು ಜನಒಂದೆಡೆ ಸೇರುವಂತಿಲ್ಲ. ನಿಷೇಧಾಜ್ಞೆ ಸಮಯದಲ್ಲಿಯಾವುದೇ ಪ್ರತಿಭಟನೆ, ಸಭೆ, ಸಮಾರಂಭ, ಮೆರವಣಿಗೆಇತರಕಾರ್ಯಕ್ರಮ ಹಮ್ಮಿಕೊಳ್ಳುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳಾದ ದೊಣ್ಣೆ,ಇಟ್ಟಣಿಗೆ, ಒನಕೆ, ಕಣಗ, ಕತ್ತಿ, ಚಾಕು, ಚೂರಿ, ಪೆಟ್ರೋಲ್ ಬಾಂಬ್, ಬೆಂಕು ಉಗುಳುವ ಸಾಧನ, ಸ್ಪೋಟಕ ವಸ್ತುಗಳನ್ನು ಪ್ರದರ್ಶಿಸುವಂತಿಲ್ಲ. ರಾಷ್ಟ್ರ ವಿರೋಧಿ, ಕೋಮು ವಿರೋಧಿ, ಜಾತಿ ವಿರೋಧಿಘೋಷಣೆಕೂಗುವುದು, ಕೋಮು ದ್ವೇಷದ ಹಾಡುಗಳನ್ನು ಪ್ರಸಾರ ಮಾಡದಂತೆ, ಕೋಮುಭಾವನೆ ಉದ್ರೇಕಿಸುವ ಬರಹವನ್ನು ಒಳಗೊಂಡ ಕರಪತ್ರ, ಭಿತ್ತಿಪತ್ರ, ಫ್ಲಕ್ಸ್, ಬ್ಯಾನರ್, ಭಾವುಟ ಪ್ರದರ್ಶಿಸುವಂತಿಲ್ಲ ಎಂದು ತಿಳಿಲಾಗಿದೆ.

      ಬೈಕ್‍ಗಳಲ್ಲಿ ಗುಂಪುಗುಂಪಾಗಿ ರ್ಯಾಲಿ ಹಮ್ಮಿಕೊಳ್ಳುವಂತಿಲ್ಲ, ಕೋಮು ದ್ವೇಷ ಹೆಚ್ಚಿಸುವಂತಹಒಂದೇ ಬಣ್ಣದ ಬಟ್ಟೆ ಧರಿಸಿಕೊಂಡು ಗುಂಪುಗುಂಪಾಗಿ ಅಡ್ಡಾಡುವುದು, ಕಪ್ಪು ಬಟ್ಟೆ ಧರಿಸಿ ಪ್ರದರ್ಶಿಸುವುದನ್ನು ನಿಷೇಧಿಸಿದೆ. ಶಾಲಾ ಕಾಲೇಜು, ಧಾರ್ಮಿಕ, ರಾಜಕೀಯಕ್ಕೆ ಸಂಬಂಧಿಸಿದ ಒಳಾಂಗಣ ವೇದಿಕೆ ಕಾರ್ಯಕ್ರಮಗಳಿದ್ದಲ್ಲಿ ಅನುಮತಿ ಪಡೆದು ಆಚರಿಸುವ ನಿಬಂಧನೆಯನ್ನು ವಿಧಿಸಿದೆ.

       ಮೇಲಿನ ನಿಷೇಧಾಜ್ಞೆಯು ಮದುವೆ, ಶವಸಂಸ್ಕಾರ, ಪೂಜಾ ಸ್ಥಳಗಳು,ಸಾರ್ವಜನಿಕ ಸ್ಥಳಗಳಾದ ಬಸ್‍ಸ್ಟ್ಯಾಂಡ್, ಆಸ್ಪತ್ರೆ ಹಾಗೂ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಟಿಪ್ಪು ಜಯಂತಿ ಕಾರ್ಯಕ್ರಮ ಮತ್ತು ಸರ್ಕಾರದ ವತಿಯಿಂದ ನಡೆಸಲಾಗುವ ಸಭೆ, ಸಮಾರಂಭಗಳಿಗೆ ಅನ್ವಯಿಸುವುದಿಲ್ಲವೆಂದು ಆದೇಶದಲ್ಲಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here