ಬಾಗೇವಾಡಿಯಲ್ಲಿ ಮನರೆಗಾ ಕೂಲಿಕಾರರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಬಳ್ಳಾರಿ

     ಕಾರ್ಮಿಕ ಇಲಾಖೆಯು ಜಾರಿಗೆ ತಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯು ನರೇಗಾ ಕೂಲಿಕಾರರಿಗೆ ಉಪಯುಕ್ತವಾಗಲಿದ್ದು, ಈ ಯೋಜನೆಯನ್ನು ಪಡೆದುಕೊಳ್ಳಲು ಕೂಲಿಕಾರರು ಮುಂದಾಗಬೇಕು ಎಂದು ಕಾರ್ಮಿಕ ನಿರೀಕ್ಷಕ ಧನಪಾಲ್ ನಾಯಕ್ ಅವರು ಹೇಳಿದರು.

     ಕಾರ್ಮಿಕ ಇಲಾಖೆಯ ವತಿಯಿಂದ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಪಂ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಮನರೆಗಾ ಕೂಲಿಕಾರರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಕಾರ್ಮಿಕ ಅದಾಲತ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.

      ಮನರೇಗಾ ಕೂಲಿಕಾರರಿಗೆ ಈ ಯೋಜನೆ ಅಡಿ ಮೂರು ವರ್ಷ ಸದಸ್ಯತ್ವ ಪೂರೈಸಿದವರಿಗೆ ಮಾಸಿಕ 1 ಸಾವಿರ ರೂ. ಪಿಂಚಣಿ ದೊರೆಯುತ್ತದೆ. ಕೆಲಸದ ವೇಳೆ ಅಪಘಾತಕ್ಕೀಡಾದರೇ, ಅಂಗವಿಕಲರಾದರೇ ಮಾಸಿಕ 1 ಸಾವಿರ ರೂ. ಪಿಂಚಣಿ ಜೊತೆಗೆ ದುರ್ಬಲತೆಯನ್ನಾದರಿಸಿ 2 ಲಕ್ಷ ರೂ.

      ಅನುಗ್ರಹ ರಾಶಿ ಸಹಾಯಧನ ದೊರೆಯುತ್ತದೆ. ಮನೆ ಖರೀದಿ, ಕಟ್ಟಲು 2ಲಕ್ಷ ರೂ.ವರೆಗೆ ಸಹಾಯಧನ, ಮಹಿಳಾ ಫಲಾನುಭವಿಯ ಮೊದಲ ಎರಡು ಹೆಣ್ಮಕ್ಕಳ ಜನನಕ್ಕೆ 30 ಸಾವಿರ ಹಾಗೂ ಗಂಡು ಮಗು ಜನನಕ್ಕೆ 20 ಸಾವಿರ ಸಹಾಯಧನ ಸೇರಿದಂತೆ ಕೂಲಿಕಾರರ ಮಕ್ಕಳಿಗೆ ಶೈಕ್ಷಣಿಕ ನೆರವು, ಅಪಘಾತ ಪರಿಹಾರ ಸೇರಿದಂತೆ ಬಹಳಷ್ಟು ಸೌಲಭ್ಯಗಳು ಈ ಯೋಜನೆ ಅಡಿ ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

      ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕರಾದ ಶಿವರಾಜ್ ಆರ್.ಎನ್ ಅವರು ಸ್ವಾಗತಿ ವಂದಿಸಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ನಿರ್ಮಲ.ಕೆ.ವಿ, ತಾಲೂಕು ಸಂಯೋಜಕ ರಮೇಶ ಸೇರಿದಂತೆ ಕಾರ್ಮಿಕರು ಇದ್ದರು.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap