ಧೂಮಪಾನವನ್ನು ದೇಶದಲ್ಲಿ ಸಂಪೂರ್ಣ ನಿಷೇಧ ಮಾಡುವುದು ಅಗತ್ಯ: ಪರಮೇಶ್ವರ್

0
13

ಬೆಂಗಳೂರು

         ಆರೋಗ್ಯಕ್ಕೆ ಹಾನಿಕಾರಕವಾಗಿರುವ ಧೂಮಪಾನವನ್ನು ದೇಶದಲ್ಲಿ ಸಂಪೂರ್ಣ ನಿಷೇಧ ಮಾಡುವ ಅಗತ್ಯವನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಪ್ರತಿಪಾದಿಸಿದ್ದಾರೆ.

       ಗುಜರಾತ್‍ನಲ್ಲಿ ಸಂಪೂರ್ಣ ಪಾನ ನಿಷೇಧ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಬೀಡಿ ಸಿಗರೇಟು ಇನ್ನಿತರ ತಂಬಾಕು ಪಧಾರ್ಥಗಳ ಸೇವನೆ ನಿಷೇಧ ಮಾಡಬೇಕೆನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಇದರಿಂದ ಪೊಲೀಸರಿಗೆ ಹೆಚ್ಚು ಶ್ರಮ ಆಗಬಹುದು. ಆದರೆ ಜನರಲ್ಲಿ ಪ್ರಬಲವಾಗಿ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದರು.

       ಮಲ್ಲೇಶ್ವರ ಬಿಬಿಎಂಪಿ ಕಚೇರಿಯಲ್ಲಿ ಧೂಮಪಾನ ಮುಕ್ತ ಬೆಂಗಳೂರು ಅಭಿಯಾನದ ವರದಿ ಹಾಗೂ ಮೊಬೈಲ್ ಆಫ್‍ನ್ನು ಶೂಕ್ರವಾರ ಬಿಡುಗಡೆ ಮಾಡಿ ಮಾತನಾಡಿದ ಅವರು .ಡ್ರಗ್ ನಿಯಂತ್ರಣ ಮಾಡಲು ರಾಜ್ಯದೆಲ್ಲೆಡೆ ದೊಡ್ಡ ಮಟ್ಟದ ಅಭಿಯಾನ ಮಾಡಲಾಗುತ್ತಿದೆ. ಅದರಲ್ಲೂ ಕಾಲೇಜು ಆವರಣಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅಭಿಯಾನ ಯಶಸ್ವಿಯಾಗಿದೆ ಎಂದರು.

          ಅಭಿಯಾನದಲ್ಲೇ ಸಿಗರೇಟು ಸೇವನೆ ಸೇರಿಸಿ, ಕನಿಷ್ಠ ಪಕ್ಷ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇವನೆಯಿಂದ ದೂರ ಉಳಿಯುವಂತೆ ಮಾಡಬೇಕಿದೆ. ಕಾಲೇಜು ಸಮೀಪ ಸಿಗರೇಟು ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಿಸಿ ಎಂದು ಹೇಳಿದರು.

         ನಾನು ಕಾಲೇಜು ಓದುವ ಸಂದರ್ಭದಲ್ಲಿ ರಜೆ ಇದ್ದಾಗ ಬಸ್‍ನಲ್ಲಿಯೇ ತುಮಕೂರಿಗೆ ಹೋಗುತ್ತಿದೆ. ಬಸ್ ನಲ್ಲಿ ಧೂಮಪಾನ ನಿಷೇಧ ಎಂದು ಬರೆದಿದ್ದರೂ ನನ್ನ ಪಕ್ಕ ಕೂರುತ್ತಿದ್ದ ವ್ಯಕ್ತಿ ಬೀಡಿ ಸೇದುತಿದ್ದರು. ಆ ವ್ಯಕ್ತಿಯೊಂದಿಗೆ ನಾನು ಸಾಕಷ್ಟು ಬಾರಿ ಜಗಳವಾಡಿದ್ದೆ ಎಂದು ನೆನದರು.

          ಶೇ. 72 ರಷ್ಟು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೇ ಜನರು ಸಾವನ್ನಪ್ಪುತ್ತಿದ್ದಾರೆ.ಸಿಗರೇಟು ಸೇದುವುದು ಆರೋಗ್ಯ ಹಾನಿಕಾರಕ ಎಂದು ಹೇಳಿದರು ತಮ್ಮ ಜೀವನವನ್ನೇ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಧೂಮಪಾನ ಮುಕ್ತ ಮಾಡಲು ಗೊರಟಿರುವುದು ಶ್ಲಾಘನೀಯ ಎಂದರು.

         ಮೇಯರ್ ಗಂಗಾಂಬಿಕೆ ಮಾತನಾಡಿ, ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ಆದೇಶ ಜಾರಿಗೊಳಿಸಲಾಗಿದೆ. ಅಕ್ರಮವಾಗಿ ಧೂಮಪಾನ ವಲಯವನ್ನು ನಿರ್ಮಿಸಿಕೊಂಡವರು ಕೂಡಲೇ ತೆರವುಗೊಳಿಸಬೇಕು. ಕಾನೂನಿನ ಅನ್ವಯ ರಚಿಸಿಕೊಂಡವರು ತಂಬಾಕು ನಿಯಂತ್ರಣ ಕೋಶದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

          ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಆಡಳಿತ ಪಕ್ಷದ ನಾಯಕ ಶಿವರಾಜ್, ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ತ್ರಿವೇಣಿ ಸೇರಿದಂತೆ ಪ್ರಮುಖರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here