ಕನ್ನಡವನ್ನು ಮಾತನಾಡುವ, ಓದುವ, ಬರೆಯುವ ಮೂಲಕ ಉಳಿಸಬೇಕು

0
7

ಬರಗೂರು

       ನಾಡಿನ ಸಂಸ್ಕತಿಯನ್ನು ಕನ್ನಡಿಗರಾದ ನಾವು ಗೌರವಿಸುವುದು ಅಗತ್ಯವಾಗಿ ಆಗಬೇಕಿದೆ. ನಮ್ಮ ಕನ್ನಡ ಭಾಷೆಯನ್ನು ಗೌರವಿಸುವುದರ ಜೊತೆಗೆ ಕನ್ನಡ ಭಾಷೆಯಲ್ಲೇ ಮಾತನಾಡಬೇಕು, ಬರೆಯಬೇಕು ಎಂದು ಲೀಟಲ್ ರೋಸಸ್ ಶಾಲೆಯ ಪ್ರಾಂಶುಪಾಲ ಡಿ.ವಿ ಶಿವಪ್ರಸಾದ್ ತಿಳಿಸಿದರು.

        ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿನ ಲಿಟಲ್ ರೋಸಸ್ ಶಾಲೆಯಲ್ಲಿ ನವೆಂಬರ್ 1 ರಂದು ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

        ನಮ್ಮ ಮಾತೃಭಾಷೆಗೆ ಆದ್ಯತೆ ನೀಡುವುದರ ಜೊತೆಗೆ ಅನ್ಯ ಭಾಷೆಯನ್ನು ಕಲಿತರೂ ಕನ್ನಡ ಭಾಷೆಯನ್ನು ಗೌರವಿಸುವುದು ಅಗತ್ಯವಾಗಿ ಆಗಬೇಕಿದೆ. ಪ್ರತಿಯೊಬ್ಬರು ಜಾತಿ, ಧರ್ಮ ಭೇದ ವiರೆತು ಮಾದರಿಯಾಗಿ ಸಹಬಾಳ್ವೆ ನಡೆಸುವಂತಾಗಬೇಕು. ಮಾದರಿ ಚಟುವಟಿಕೆಗಳು ನಡೆದರೆ ನಾವು ನಮ್ಮ ನಾಡನ್ನು, ದೇಶವನ್ನು ಒಗ್ಗಟ್ಟಿನ ಕಡೆ ಕೊಂಡೊಯ್ಯಲು ಸಾಧ್ಯ. ಈ ನೆಲದ ಕಾನೂನುನನ್ನು ಗೌರವಿಸಿ ನಡೆಯಬೇಕು. ವಿರುದ್ದವಾಗಿ ನಡೆದರೆ ಅದು ದೇಶ ದ್ರೋಹದ ಚಟುವಟಿಕೆಯಾಗುತ್ತದೆ. ವಿದ್ಯಾರ್ಥಿಗಳು ಸಾಮಾಜ ಘಾತುಕ ಚಟುವಟಿಕೆಗಳಿಗೆ ಅವಕಾಶ ನೀಡದೆ, ದೇಶದ ಅಭಿವೃದ್ದಿಯ ದೃಷ್ಟಿಕೋನವುಳ್ಳವರಾಗಬೇಕು ಎಂದರು.

       ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮೀ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬರಗೂರು ಪೊಲೀಸ್ ಉಪ ಠಾಣಾ ಪೇದೆ ರೇವಣ್ಣ, ಪತ್ರಕರ್ತ ವಲಿಸಾಬ್‍ಬರಗೂರು, ಶಿಕ್ಷಕರಾದ ಕೃಷ್ಣಮೂರ್ತಿ, ವೀರಭದ್ರಪ್ಪ, ರಾಜುಗೋಪಿಕುಂಟೆ, ಗಿರೀಶ್, ಗುರುಪ್ರಸಾದ್, ಸಿದ್ದೇಶ್, ಶ್ರೀನಿವಾಸ್, ನಾಗರಾಜು, ಶ್ವೇತಾ, ಮಹಾಲಕ್ಷ್ಮೀ, ಮಲ್ಲಿಕಾ, ಕವಿತ, ಜಯಮ್ಮ, ಸುಧಾಮಣಿ, ಶಶಿಕಲಾ, ಸಹಾಯಕರಾದ ಶಶಿಕಲಾ, ಶೋಭಾ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here